ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹10 ಲಕ್ಷ ಬೆಲೆಯೊಳಗಿನ ಹೊಸ ಮಾದರಿಯ EV ಕಾರುಗಳಿಗೆ ಹೆಚ್ಚಿದ ಬೇಡಿಕೆ

Published : 10 ಆಗಸ್ಟ್ 2023, 12:41 IST
Last Updated : 10 ಆಗಸ್ಟ್ 2023, 12:41 IST
ಫಾಲೋ ಮಾಡಿ
Comments

ಬೆಂಗಳೂರು: ಬ್ಯಾಟರಿ ಚಾಲಿತ ಕಾರುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತಾ ಸಾಗುತ್ತಿದ್ದಂತೆ, ಕೈಗೆಟಕುವ ಬೆಲೆಗೆ ಹೊಸ ಮಾದರಿಯ ಇವಿ ಕಾರುಗಳು ಲಭ್ಯವಾಗುತ್ತಿವೆ. 

ಕೆಲವೇ ವರ್ಷಗಳ ಹಿಂದೆ ಬ್ಯಾಟರಿ ಚಾಲಿತ ಕಾರುಗಳು ಎಂದರೆ ಬೆಲೆ ₹20 ಲಕ್ಷ ಮೇಲೆಯೇ ಎಂದಿತ್ತು. ಆದರೆ ಟಾಟಾ, ಮಹೀಂದ್ರ ಕಂಪನಿಗಳು ₹10 ಲಕ್ಷ ಬೆಲೆಯ ಆಸುಪಾಸಿನ ಇವಿ ಕಾರುಗಳನ್ನು ಮಾರುಕಟ್ಟೆಗಳಿಸಲು ತಮ್ಮ ತಂತ್ರಜ್ಞಾನಗಳನ್ನು ಬದಲಿಸಿಕೊಂಡವು. ಈಗ ಎಂಜಿ ಮೋಟಾರ್ಸ್‌, ಸಿಟ್ರಾನ್‌ , ಮಾರುತಿ ಕಂಪನಿಗಳೂ ಇದೇ ಬೆಲೆಯ ಆಸುಪಾಸಿನಲ್ಲಿ ಉತ್ತಮ ಕಾರ್ಯಕ್ಷಮತೆಯ ಇವಿ ಕಾರುಗಳನ್ನು ನೀಡುತ್ತಿದೆ.

ಎಂಜಿ ಮೋಟಾರ್ಸ್ ಕಮೆಟ್
ಎಂಜಿ ಮೋಟಾರ್ಸ್ ಕಮೆಟ್

ಎಂಜಿ ಮೋಟಾರ್ಸ್‌ನ ಕಾಮೆಟ್‌ ಇವಿ

ಎಸ್‌ಯುವಿ ಕಾರುಗಳನ್ನು ಉತ್ಪಾದಿಸುವ ಎಂಜಿ ಮೋಟಾರ್ಸ್‌, ಸಣ್ಣ ಕಾರು ತಯಾರಿಕೆಗೆ ಮುಂದಾಗಿದ್ದು, ‘ಕಾಮೆಟ್’ ಎಂಬ ಇವಿ ಕಾರನ್ನು ಪರಿಚಯಿಸಿದೆ. ಇದು ನಗರ ಪ್ರದೇಶದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಪುಟ್ಟ ಆಕಾರ, ಒಳಗೆ ಸಾಕಷ್ಟು ಸ್ಥಳಾವಕಾಶ. ಉತ್ತಮ ಪಿಕ್‌ಅಪ್‌ ಸಾಮರ್ಥ್ಯವಿರುವ ಕಾಮೆಟ್‌ ಹಲವು ಸೌಕರ್ಯಗಳನ್ನು ಹೊಂದಿದೆ. ಕಾಮೆಟ್‌ನ ಎಕ್ಸ್‌ ಶೋರೂಂ ಬೆಲೆ ₹7.98ಲಕ್ಷದಿಂದ ₹9.98ಲಕ್ಷವರೆಗೆ ವಿವಿಧ ವೇರಿಯಂಟ್‌ಗಳಲ್ಲಿ ಲಭ್ಯ. 

ಕಾಮೆಟ್‌ ಎಂಜಿನ್ ಕೋಣೆಯೊಳಗೆ 17.3 ಕಿಲೋ ವ್ಯಾಟ್‌ನ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಪ್ರತಿ ಸಂಪೂರ್ಣ ಚಾರ್ಜ್‌ಗೆ ಗರಿಷ್ಠ 230 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಟಾಟಾ ಟಿಯಾಗೊ ಇವಿ

ಟಾಟಾದ ಜನಪ್ರಿಯ ಸಣ್ಣ ಕಾರುಗಳಲ್ಲಿ ಒಂದಾದ ಟಿಯಾಗೊ ಕೂಡಾ ಈಗ ಇವಿ ಮಾದರಿಯಲ್ಲಿ ಲಭ್ಯ. 3 ಪೇಸ್‌ ವಿದ್ಯುತ್ ಆಯಸ್ಕಾಂತೀಯ ಸಮಕಾಲಿಕ ಮೋಟಾರು ಇದರಲ್ಲಿ ಬಳಸಲಾಗಿದೆ. ಇದರಿಂದಾಗಿ ಕಾರು 114 ನ್ಯಾನೋಮೀಟರ್ ಶಕ್ತಿಯನ್ನು ಉತ್ಪಾದಿಸಬಲ್ಲದು. ಹೀಗಾಗಿ 19.2 ಕೆವಿ ಮೋಟಾರು ಅಳವಡಿಸಿರುವ ಟಿಯಾಗೊ ಪ್ರತಿ ಗಂಟೆಗೆ 0ಯಿಂದ 60 ಕಿ.ಮೀ. ವೇಗವನ್ನು ಕೇವಲ 6.2 ಸೆಕೆಂಡ್‌ ಹಾಗೂ 24 ಕೆ.ವಿ. ಟಿಯಾಗೊ 5.7 ಸೆಕೆಂಡುಗಳಲ್ಲಿ ಕ್ರಮಿಸುವಷ್ಟು ಕ್ಷಮತೆ ಹೊಂದಿದೆ ಎಂದು ಎಂಐಡಿಸಿ ವರದಿಯಲ್ಲಿದೆ.

ಬ್ಯಾಟರಿ ಚಾರ್ಜಿಂಗ್‌ಗೆ ಮೂರು ರೀತಿಯ ಅವಕಾಶವನ್ನು ಕಂಪನಿ ಕಲ್ಪಿಸಿದೆ. 7.2 ಕೆವಿ ಎಸಿ ಮನೆ ಚಾರ್ಜರ್‌ ವಾಲ್‌ಬಾಕ್ಸ್‌ ಕಂಪನಿ ನೀಡಲಿದೆ. ಶೇ 10 ರಿಂದ ಶೇ 100ರಷ್ಟು ಬ್ಯಾಟರಿ ಚಾರ್ಜ್‌ ಅನ್ನು 24 ಕೆವಿ ವಾಹನಕ್ಕೆ 3.6 ಗಂಟೆ ಹಾಗೂ 19.2 ಕೆವಿ ಕಾರಿಗೆ 2.6 ಗಂಟೆಯಷ್ಟು ತಗುಲಲಿದೆ. ಹಾಗೆಯೇ ಮನೆಯ ಸಾಮಾನ್ಯ ಚಾರ್ಜರ್‌ ಬಳಸಿದರೆ ಕ್ರಮವಾಗಿ 8.7 ಗಂಟೆ ಹಾಗೂ 6.9 ಗಂಟೆ. ಹೊರಗೆ ಸಿಗುವ ಡಿಸಿ ವೇಗದ ಚಾರ್ಜರ್ ಮೂಲಕ ಕೇವಲ 58 ನಿಮಿಷಗಳಲ್ಲಿ ಕಾರನ್ನು ಸಂಪೂರ್ಣ ಚಾರ್ಜ್ ಮಾಡಬಹುದು. 15ಆ್ಯಂಪ್‌ ಪೋರ್ಟಲ್ ಚಾರ್ಜರ್‌ ಬಳಸಿದಲ್ಲಿ ಕ್ರಮವಾಗಿ 8.7ಗಂಟೆ ಹಾಗೂ 6.9ಗಂಟೆ ಚಾರ್ಜಿಂಗ್ ಸಮಯ ಬೇಕು.

ಟಾಟಾ ಟಿಯಾಗೊ ₹8.69ಲಕ್ಷದಿಂದ ₹11.99 ಲಕ್ಷವರೆಗೆ ಲಭ್ಯ.

ಸಿಟ್ರಾನ್ ಇಸಿ3
ಸಿಟ್ರಾನ್ ಇಸಿ3

ಸಿಟ್ರಾನ್ ಇಸಿ3

ಫ್ರಾನ್ಸ್‌ನ ಸಿಟ್ರಾನ್‌ ಕಾರು ತಯಾರಿಕಾ ಕಂಪನಿಯು ತನ್ನ ಇವಿ ಮಾದರಿ ಸಿಟ್ರಾನ್ ಇಸಿ3 ಕಾರನ್ನು ಭಾರತದಲ್ಲಿ ಪರಿಚಯಿಸಿದೆ. 

ಮೂರು ಮಾದರಿಗಳಲ್ಲಿ ಲಭ್ಯವಿರುವ ಕಾಮೆಟ್‌ ಇವಿ ಬೆಲೆ ₹11.50 ಲಕ್ಷದಿಂದ ₹12.43 ಲಕ್ಷದವರೆಗೆ ಲಭ್ಯ. 29.2 ಕಿಲೋ ವ್ಯಾಟ್‌ ಎಲ್‌ಎಫ್‌ಪಿ ಬ್ಯಾಟರಿ ಪ್ಯಾಕ್ ಅನ್ನು ಸಿಟ್ರಾನ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 320 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. 

ಮಹೀಂದ್ರ ಕೆಯುವಿ100
ಮಹೀಂದ್ರ ಕೆಯುವಿ100

ಮಹೀಂದ್ರ ಇಕೆಯುವಿ 100

ಮಹೀಂದ್ರಾ ತನ್ನ ಕೆಯುವಿ100 ಕಾರನ್ನು ಬ್ಯಾಟರಿ ಚಾಲಿತವಾಗಿ ಪರಿವರ್ತಿಸಿದೆ. ಇದಕ್ಕೆ ಇಕೆಯುವಿ100 ಎಂದು ಹೆಸರಿಟ್ಟಿದೆ. 

15.9 ಕಿಲೋ ವ್ಯಾಟ್‌ ಬ್ಯಾಟರಿ ಪ್ಯಾಕ್ ಹಾಗೂ 54.4 ಪಿಎಸ್‌ ಎಲೆಕ್ಟ್ರಿಕ್ ಮೋಟಾರ್ ಅನ್ನು ಇದು ಹೊಂದಿದೆ. ₹9 ಲಕ್ಷದಿಂದ ₹13 ಲಕ್ಷವರೆಗೆ ಈ ಇವಿ ಎಸ್‌ಯುವಿ ಮಾದರಿಯ ಕಾರು ಲಭ್ಯ.

ಪ್ರತಿ ಚಾರ್ಜ್‌ನಲ್ಲಿ 147 ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯ ಇದರದ್ದು. ಕೇವಲ 55 ನಿಮಿಷಗಳಲ್ಲಿ ಶೇ 88ರಷ್ಟು ಚಾರ್ಜ್‌ ಆಗಲಿದೆ. 5 ಜನ ಆರಾಮವಾಗಿ ಕಾರಿನಲ್ಲಿ ಸಂಚರಿಸಬಹುದು. ಜತೆಗೆ 230 ಲೀಟರ್‌ನಷ್ಟು ಬೂಟ್‌ ಸ್ಪೇಸ್‌ ಕೂಡಾ ಇದರಲ್ಲಿದೆ. 

ಮಹೀಂದ್ರಾ ಇ20 ನೆಕ್ಸ್ಟ್‌

ಮಹೀಂದ್ರಾ ಇ20 ಎನ್‌ಎಕ್ಸ್‌ಟಿ ಕಾರು ಹೊಸ ರೂಪದೊಂದಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಪರಿಚಯಿಸಿದೆ. ವಾಹನ ದಟ್ಟಣೆ ಇರುವ ನಗರ ಪ್ರದೇಶದ ಸಂಚಾರಕ್ಕೆ ಸೂಕ್ತವಾಗಿರುವ ಈ ಕಾರು ₹7 ಲಕ್ಷದಿಂದ ₹10 ಲಕ್ಷದವರೆಗೆ ವಿವಿಧ ವೇರಿಯಂಟ್‌ಗಳಲ್ಲಿ ಲಭ್ಯ.

ಏರ್‌ಬ್ಯಾಗ್, ಎಬಿಎಸ್‌, ಇಬಿಡಿಯಂತ ಆಧುನಿಕ ಸೌಲಭ್ಯಗಳು ಈ ಕಾರಿನಲ್ಲಿವೆ. 72ವ್ಯಾಟ್‌ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ. 40 ಅಶ್ವ ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಇದರದ್ದು. ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ. ದೂರ ಕ್ರಮಿಸಲಿದೆ. ಶೇ 80ರಷ್ಟು ಚಾರ್ಜ್‌ಗೆ 90 ನಿಮಿಷ ಅಗತ್ಯ. ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಇದು ಕ್ರಮಿಸಲಿದೆ ಎಂಬುದು ಇದರ ವಿಶೇಷ.

ಮಾರುತಿ ಸುಜುಕಿ ವ್ಯಾಗನ್ ಆರ್‌ ಇವಿ

ಮಾರುತಿ ಸುಜುಕಿ ವ್ಯಾಗನ್‌ ಆರ್‌ ಇವಿ ಕಾರು ನಗರ ಹಾಗೂ ಹೆದ್ದಾರಿಯ ಸಂಚಾರಕ್ಕೆ ಸರಿಹೊಂದುವಂತೆ ಸಿದ್ಧಪಡಿಸಲಾಗಿದೆ. 

₹10ಲಕ್ಷದಿಂದ ₹14ಲಕ್ಷವರೆಗಿನ ಬೆಲೆಯಲ್ಲಿ ಲಭ್ಯವಿರುವ ಈ ಕಾರಿನಲ್ಲಿ ಆಧುನಿಕ ಸುರಕ್ಷತಾ ಸೌಲಭ್ಯಗಳು ಇವೆ. 165ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌ ಇರುವುದರಿಂದ ಎತ್ತರದಲ್ಲಿ ಕೂತು ಕಾರು ಚಾಲನೆ ಮಾಡಿದ ಅನುಭವ ಜತೆಗೆ, ಗುಂಡಿಯ ರಸ್ತೆಯಲ್ಲೂ ತಡೆ ಇಲ್ಲದೆ ಸಾಗಬಹುದಾಗಿದೆ.

50 ಕೆ.ವಿ. ಎಲೆಕ್ಟ್ರಿಕ್ ಮೋಟಾರು ಇದರಲ್ಲಿದೆ. ಐದು ಜನ ಪ್ರಯಾಣಿಕರು ಆರಾಮವಾಗಿ ಕೂತು ಇದರಲ್ಲಿ ಸಾಗಬಹುದು. 341 ಲೀ. ಬೂಟ್‌ ಸ್ಟೇಸ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT