ಬುಧವಾರ, ಫೆಬ್ರವರಿ 8, 2023
17 °C

ಹುಂಡೈ ಹೊಸ ಅಯಾನಿಕ್ 5 ಇವಿ ಅನಾವರಣ: ಒಂದು ಬಾರಿ ಚಾರ್ಜ್‌ಗೆ 631 ಕಿ.ಮೀ ಪ್ರಯಾಣ

ಐಎಎ‌ನ್‌ಎಸ್‌ Updated:

ಅಕ್ಷರ ಗಾತ್ರ : | |

ನೋಯ್ಡಾ: ಇಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ಇವೆಂಟ್‌ನಲ್ಲಿ ಹುಂಡೈ ಮೋಟಾರ್ ಇಂಡಿಯಾ ತನ್ನ ಹೊಸ ಅತ್ಯಾಧುನಿಕವಾದ ಎಲೆಕ್ಟ್ರೀಕ್ ಕಾರ್ ‘ಹುಂಡೈ ಅಯಾನಿಕ್ 5ಇವಿ’ (Ioniq 5 EV) ಅನಾವರಣಗೊಳಿಸಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ಈ ಇವಿ ಕಾರನ್ನು ಅನಾವರಣಗೊಳಿಸಿದರು.

ಈ ಕಾರಿನ ಆರಂಭಿಕ ಎಕ್ಸ್‌ ಶೋರೂಂ ಬೆಲೆ ₹44.95 ಲಕ್ಷ ಇದೆ ಎಂದು ಹೇಳಲಾಗಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷವೆಂದರೆ ಐಒನಿಕ್ ಇವಿ ಕಾರು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ, 631 ಕಿ.ಮೀವರೆಗೆ ಪ್ರಯಾಣಿಸುತ್ತದೆ ಎಂದು ಕಂಪನಿ ಹೇಳಿದೆ.

ಸಮಾರಂಭದಲ್ಲಿ ಮಾತನಾಡಿರುವ ಹುಂಡೈ ಮೋಟಾರ್ ಇಂಡಿಯಾ ಸಿಇಒ ಉನ್ಸೂ ಕಿಮ್ ಅವರು, ಭವಿಷ್ಯದ ಅಗತ್ಯಗಳಿಗಾಗಿ ಅತ್ಯಂತ ಉನ್ನತ ತಂತ್ರಜ್ಞಾನದೊಂದಿಗೆ ನಾವು ಬದಲಾವಣೆ ಆಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಹುಂಡೈ ಅಯಾನಿಕ್ 5ಇವಿ ಇದೊಂದು ಐಷಾರಾಮಿ ಎಲೆಕ್ಟ್ರೀಕ್ ಕಾರು. ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ 8 ಸ್ಪೀಕರ್‌ಗಳುಳ್ಳ ಬೋಸ್ ಸೌಂಡ್ ಸಿಸ್ಟಮ್ ಹೊಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು