ಶನಿವಾರ, ಮೇ 8, 2021
18 °C

ಕಿಯಾ: ಸುಧಾರಿತ ಸೆಲ್ಟೋಸ್‌, ಸಾನೆಟ್‌ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಿಯಾ ಇಂಡಿಯಾ ಕಂಪನಿಯು ಹೊಸ ವೈಶಿಷ್ಟ್ಯ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡ ಸುಧಾರಿತ ಸೆಲ್ಟೋಸ್‌ ಮತ್ತು ಸಾನೆಟ್‌ ಆವೃತ್ತಿಗಳನ್ನು ಬಿಡುಗಡೆ ಮಾಡಿರುವುದಾಗಿ ಶನಿವಾರ ತಿಳಿಸಿದೆ.

ಸುಧಾರಿತ ಸೆಲ್ಟೋಸ್‌ ಬೆಲೆಯು ₹ 9.95 ಲಕ್ಷದಿಂದ ₹ 17.65 ಲಕ್ಷದವರೆಗಿದೆ ಸಾನೆಟ್‌ ಬೆಲೆಯು ₹ 6.79 ಲಕ್ಷದಿಂದ ₹ 13.25 ಲಕ್ಷದವರೆಗಿದೆ (ದೆಹಲಿ ಎಕ್ಸ್‌ಷೋರೂಂನಂತೆ).

ಎರಡೂ ಮಾದರಿಗಳಲ್ಲಿ ಪೆಡಲ್‌ ಶಿಫ್ಟರ್ಸ್‌ ಸೌಲಭ್ಯವನ್ನು ನೀಡಲಾಗಿದೆ. ಸೆಲ್ಟೋಸ್‌ನಲ್ಲಿ ಐಎಂಟಿ ತಂತ್ರಜ್ಞಾನವನ್ನೂ ಪರಿಚಯಿಸಲಾಗಿದೆ. 1.5 ಲೀಟರ್ ಪೆಟ್ರೋಲ್‌ ಎಚ್‌ಟಿಕೆ+ ಆವೃತ್ತಿಯಲ್ಲಿ ಇದು ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ಮಾರುಕಟ್ಟೆಯ ಬೇಡಿಕೆಯನ್ನು ಪರಿಗಣಿಸಿ ಸೆಲ್ಟೋಸ್‌ನಲ್ಲಿ 1.4ಟಿ–ಜಿಡಿಐ ಪೆಟ್ರೋಲ್‌ ಜಿಟಿಎಕ್ಸ್‌ (ಒ) ಆವೃತ್ತಿಯನ್ನೂ ಪರಿಚಯಿಸಿರುವುದಾಗಿ ಅದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು