ಗುರುವಾರ , ಡಿಸೆಂಬರ್ 3, 2020
18 °C

ಕಿಯಾ ಸಾನೆಟ್: 50 ಸಾವಿರಕ್ಕೂ ಅಧಿಕ ಬುಕಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಪ್ಯಾಕ್ಟ್‌ ಎಸ್‌ಯುವಿ ‘ಸಾನೆಟ್‌’ಗೆ 50 ಸಾವಿರಕ್ಕೂ ಅಧಿಕ ಬುಕಿಂಗ್‌ಗಳು ಬಂದಿವೆ ಎಂದು ಕಿಯಾ ಮೋಟರ್ಸ್‌ ಇಂಡಿಯಾ ಕಂಪನಿ ಬುಧವಾರ ತಿಳಿಸಿದೆ.

ಆಗಸ್ಟ್‌ 20ರಂದು ಇದರ ಬುಕಿಂಗ್‌ ಆರಂಭಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ದಾಖಲೆ ಪ್ರಮಾಣದ ಬುಕಿಂಗ್‌ ಆಗಿದೆ. ಪ್ರತಿ ಮೂರು ನಿಮಿಷಕ್ಕೆ ಎರಡು ಆರ್ಡರ್‌ಗಳು ಬಂದಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ 9,266 ಸಾನೆಟ್‌ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಇದು ಲಭ್ಯವಿದ್ದು, ಎಕ್ಸ್‌ ಷೋರೂಂ ಬೆಲೆ ₹ 6.71 ಲಕ್ಷದಿಂದ ₹ 11.99 ಲಕ್ಷದವರೆಗೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು