ಮುಂಬೈ: ಕಾರು ತಯಾರಿಕಾ ಕಂಪನಿಯಾದ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಈ ಬಾರಿ ಏಳು ಆಸನಗಳ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹13.66 ಲಕ್ಷ (ಎಕ್ಸ್ ಶೋರೂಂ) ನಿಗದಿಪಡಿಸಿದೆ.

ಮಹೀಂದ್ರಾ ಎಕ್ಸ್ಯುವಿ7ಎಕ್ಸ್ಒ ಕಾರನ್ನು ಕಾಯ್ದಿರಿಸಲು ಜ. 14ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಮೊದಲ 40 ಸಾವಿರ ಕಾರುಗಳಿಗೆ ಮಾತ್ರ ₹13.66 ಲಕ್ಷ ಆರಂಭಿಕ ಬೆಲೆ ನಿಗದಿಪಡಿಸಿರುವುದಾಗಿ ಕಂಪನಿ ಹೇಳಿದೆ.

ಎಕ್ಸ್ಯುವಿ 7ಎಕ್ಸ್ಒ ಕಾರು ತನ್ನ ಈ ಹಿಂದಿನ ಮಾದರಿಗಿಂತ ಭಿನ್ನವಾಗಿರುವುದು ಮೊದಲ ನೋಟದಲ್ಲೇ ಸ್ಪಷ್ಟವಾಗುತ್ತದೆ. ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್ಲ್ಯಾಂಪ್ಗಳು ಹಾಗೂ ಇಂಗ್ಲಿಷ್ನ ‘ಸಿ’ ಅಕ್ಷರದ ಆಕಾರದಲ್ಲಿರುವ ಹಗಲು ಉರಿಯುವ ಎಲ್ಇಡಿ ದೀಪಗಳು ಕಾರಿಗೆ ಹೊಸ ರೂಪ ನೀಡಿವೆ. ಹೊಸ ಮಾದರಿಯ ಅಲಾಯ್ ವೀಲ್ಗಳು, ಹಿಂಬದಿಯ ಎಲ್ಇಡಿ ದೀಪಗಳು ಹಾಗೂ ಬಂಪರ್ ಹೊಸತನ ತಂದಿವೆ.

ಒಳಾಂಗಣದಲ್ಲಿ ‘ಎಕ್ಸ್ಇವಿ 9ಇ’ ಕಾರಿನಿಂದ ಸ್ಫೂರ್ತಿ ಪಡೆದಿರುವ ಎಕ್ಸ್ಯುವಿ 7ಎಕ್ಸ್ಒ ಎರಡು ಬಣ್ಣಗಳನ್ನು ಬಳಸಿದೆ. ಮೂರು ಪರದೆಯ ಇನ್ಫೊಟೈನ್ಮೆಂಟ್ ಸಾಧನ, 2 ಸ್ಪೋಕ್ ಸ್ಟಿಯರಿಂಗ್ ಮತ್ತು ಸ್ಪರ್ಶದ ಮೂಲಕವೇ ನಿಯಂತ್ರಿಸಬಹುದಾದ ಹವಾನಿಯಂತ್ರಿತ ಸಾಧನಗಳು ಹೊಸ ಸೇರ್ಪಡೆಯಾಗಿವೆ.

ಪ್ಯಾನಾರೊಮಿಕ್ ಸನ್ರೂಫ್, ಡಾಲ್ಬಿ ಆಟಮ್ಸ್ ಜತೆಗೆ ಹರ್ಮನ್ ಕರ್ಡಾನ್ ಕಂಪನಿಯ 16 ಸ್ಪೀಕರ್ಗಳು, ಹೊರಗಿನ ತಾಪಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಎಸಿ, ಮುಂಭಾಗದ ಆಸನಗಳಿಗೆ ವೆಂಟಿಲೇಟೆಡ್ ತಂತ್ರಜ್ಞಾನ, ವೈರ್ಲೆಸ್ ಚಾರ್ಜರ್ ಹೊಸ ಕಾರಿನಲ್ಲಿರುವ ಆಧುನಿಕ ಸೌಲಭ್ಯಗಳು.

ಎಕ್ಸ್ಯುವಿ 7ಎಕ್ಸ್ಒ ಕಾರು 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ನಲ್ಲಿ ಲಭ್ಯ. 6 ಸ್ಪೀಡ್ಗಳ ಮ್ಯಾನುಯಲ್ ಅಥವಾ 6 ಸ್ಪೀಡ್ಗಳ ಆಟೊಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೂ ಇದೆ. ಆಫ್ರೋಡ್ ಸವಾರಿ ಬಯಸುವವರಿಗೆ ನಾಲ್ಕೂ ಚಕ್ರಗಳಿಗೆ ಶಕ್ತಿ ನೀಡುವ ಎಡಬ್ಲೂಡಿ ಮಾದರಿಯನ್ನೂ ಮಹೀಂದ್ರಾ ಪರಿಚಯಿಸಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಸಸ್ಪೆನ್ಶನ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದೂ ವರದಿಯಾಗಿದೆ.

ಸುರಕ್ಷತೆಗಾಗಿ 540 ಡಿಗ್ರಿ ಕ್ಯಾಮೆರಾ, 2ನೇ ಹಂತದ ಎಡ್ಯಾಸ್, ಕ್ರೂಸ್ ಕಂಟ್ರೋಲ್, ಲೇನ್ ಶಿಸ್ತು ಪಾಲನೆ, ಸ್ವಯಂಚಾಲಿತ ತುರ್ತು ಬ್ರೇಕ್ ಕೂಡಾ ಎಕ್ಸ್ಯುವಿ 7ಎಕ್ಸ್ಒ ಕಾರಿನಲ್ಲಿ ಅಳವಡಿಸಲಾಗಿದೆ.

ಆರು ಮಾದರಿಯಲ್ಲಿ ಎಕ್ಸ್ಯುವಿ 7ಎಕ್ಸ್ಒ ಕಾರನ್ನು ಮಹೀಂದ್ರಾ ಪರಿಚಯಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.