ಮಂಗಳವಾರ, ಸೆಪ್ಟೆಂಬರ್ 22, 2020
26 °C

ಮಹೀಂದ್ರಾದ ಮೊದಲ ಬಿಎಸ್‌–6 ಎಸ್‌ಯುವಿ; XUV300

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹೀಂದ್ರಾ 'ಎಕ್ಸ್‌ಯುವಿ300' ಕಾರು

ಬೆಂಗಳೂರು: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ ಬಿಎಸ್‌ 6 ಗುಣಮಟ್ಟ ಹೊಂದಿರುವ ತನ್ನ ಮೊದಲ ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ. 

ಮಹೀಂದ್ರಾ 'ಎಕ್ಸ್‌ಯುವಿ300' ಕಾರು ಬಿಎಸ್‌–6 ಗುಣಮಟ್ಟದ 1.2 ಲೀಟರ್‌ ಟರ್ಬೊ ಪೆಟ್ರೋಲ್‌ ಇಂಜಿನ್‌ ಹೊಂದಿದ್ದು,  ಬೆಲೆಯಲ್ಲಿ ಬಿಎಸ್‌–4 ಮಾದರಿಯ ವಾಹನಕ್ಕಿಂತ ₹20,000 ಹೆಚ್ಚಿಸಲಾಗಿದೆ. ಬಿಎಸ್‌–6 'ಎಕ್ಸ್‌ಯುವಿ300' ಕಾರಿನ ಆರಂಭಿಕ ಬೆಲೆ ₹8.30 ಲಕ್ಷ ಎಂದು ಕಂಪನಿ ತಿಳಿಸಿದೆ. 

ಹೊಸ 'ಎಕ್ಸ್‌ಯುವಿ300' W8 ಮಾದರಿಯ ಕಾರಿನ ಬೆಲೆ ₹11.99 ಲಕ್ಷ ನಿಗದಿಯಾಗಿದೆ. ಬಿಎಸ್‌–6 ಗುಣಮಟ್ಟದ ಇಂಧನ ದೇಶದ ಎಲ್ಲ ಭಾಗಗಳಲ್ಲಿ ಲಭ್ಯವಾಗುತ್ತಿದ್ದಂತೆ ಬಿಎಸ್‌–6 ಡೀಸೆಲ್‌ ಇಂಜಿನ್‌ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ತಿಳಿಸಿದೆ. ಆ ವರೆಗೂ ಬಿಎಸ್‌–4 ಗುಣಮಟ್ಟದ ಡೀಸೆಲ್‌ ಇಂಜಿನ್‌ ವಾಹನಗಳು ಖರೀದಿಗೆ ಸಿಗಲಿವೆ.

ಇದನ್ನೂ ಓದಿ: 

ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ದೇಶದಲ್ಲಿ 2020ರ ಏಪ್ರಿಲ್‌ 1ರಿಂದ ಹೊಸ ವಾಹನಗಳಲ್ಲಿ ಬಿಎಸ್‌–6 ಗುಣಮಟ್ಟದ ಇಂಜಿನ್‌ ಕಡ್ಡಾಯಗೊಳಿಸಲಾಗಿದೆ. ದ್ವಿಚಕ್ರ ವಾಹನಗಳು, ಕಾರು ಹಾಗೂ ವಾಣಿಜ್ಯ ಬಳಕೆ ಟ್ರಕ್‌ ಸೇರಿದಂತೆ ಎಲ್ಲ ವಾಹನಗಳಿಗೂ ಬಿಎಸ್‌–6 ಗುಣಮಟ್ಟ ಅನ್ವಯವಾಗಲಿದೆ. 

2019ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಿ ಈವರೆಗೂ ಸುಮಾರು 40,000 'ಎಕ್ಸ್‌ಯುವಿ300' ಕಾರುಗಳು ಮಾರಾಟವಾಗಿವೆ. 'ಎಕ್ಸ್‌ಯುವಿ300' ಮಾರುತಿ ಸುಜುಕಿ ವಿತಾರಾ ಬ್ರೀಜಾ, ಟಾಟಾ ಮೋಟಾರ್ಸ್‌ನ ನೆಕ್ಸಾನ್‌ ಹಾಗೂ ಫೋರ್ಡ್‌ನ ಇಕೊಸ್ಪೋರ್ಟ್‌ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು