'ಸ್ಲಾವಿಯಾ' ಸೆಡಾನ್ ಬಿಡುಗಡೆ ಮಾಡಿದ ಸ್ಕೋಡಾ; ಆರಂಭಿಕ ಬೆಲೆ ₹10.69 ಲಕ್ಷ

ನವದೆಹಲಿ: ಸ್ಕೋಡಾ ಆಟೊ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಸೆಡಾನ್ 'ಸ್ಲಾವಿಯಾ' ಬಿಡುಗಡೆ ಮಾಡಿರುವುದಾಗಿ ಸೋಮವಾರ ಪ್ರಕಟಿಸಿದೆ. ಈ ಹೊಸ ಸೆಡಾನ್ ಆರಂಭಿಕ ಬೆಲೆ ₹10.69 ಲಕ್ಷ ಇದೆ.
ಒಂದು ಲೀಟರ್ ಪೆಟ್ರೋಲ್ ಎಂಜಿನ್ ಒಳಗೊಂಡಿರುವ 'ಸ್ಲಾವಿಯಾ' ಆ್ಯಕ್ಟೀವ್, ಆ್ಯಂಬಿಷನ್ ಹಾಗೂ ಸ್ಟೈಲ್ ಸೇರಿ ಮೂರು ಮಾದರಿಗಳಲ್ಲಿ ಲಭ್ಯವಿದೆ. ಸ್ಲಾವಿಯಾ 1.0 ಟಿಎಸ್‌ಐನ ಎಲ್ಲ ಮಾದರಿಗಳಲ್ಲಿ ಆರು–ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಆ್ಯಂಬಿಷನ್ ಮತ್ತು ಸ್ಟೈಲ್ ಮಾದರಿಗಳಲ್ಲಿ ಆರು–ಸ್ಪೀಡ್ ಆಟೊಮ್ಯಾಟಿಕ್ ಟ್ರಿಮ್ ಆಯ್ಕೆ ಇರುವುದಾಗಿ ಸ್ಕೋಡಾ ಆಟೊ ತಿಳಿಸಿದೆ.
ಈ ಹೊಸ ಕಾರು ಹೋಂಡಾ ಸಿಟಿ, ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿ ಸಿಯಾಜ್‌ಗೆ ಪ್ರತಿ ಸ್ಪರ್ಧಿ ಎಂದು ವಿಶ್ಲೇಷಿಸಲಾಗಿದೆ.
ಕಂಪನಿಯು ಈ ಕಾರನ್ನು ಮಧ್ಯಮ ಗಾತ್ರದ ಸೆಡಾನ್ ಸಾಲಿಗೆ ಸೇರಿಸಿದೆ. ಒಂದು ಲೀಟರ್, 3–ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಶೂನ್ಯದಿಂದ 100 ಕಿ.ಮೀ. ವೇಗವನ್ನು ಕೇವಲ 10.7 ಸೆಕೆಂಡ್‌ಗಳಲ್ಲಿ ತಲುಪಿಸುತ್ತದೆ ಹಾಗೂ ಪ್ರತಿ ಲೀಟರ್ ಇಂಧನ ಬಳಸಿ 19.47 ಕಿ.ಮೀ. ದೂರ ಸಾಗಬಹುದಾಗಿದೆ.
2,651 ಮಿ.ಮೀ ಉದ್ದದ ವರೆಗಿನ ವೀಲ್ ಬೇಸ್ ಐವರು ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿದೆ. 521 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯ, 179 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಇದೆ.
It's out!
The all-new #SKODASLAVIA starts at ₹10.69 Lakh. Test drives begin today.Book yours right away from here: https://t.co/04lyuSkikZ pic.twitter.com/aHE4EiOhZw
— ŠKODA AUTO India (@SkodaIndia) February 28, 2022
ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮಲ್ಟಿ ಕೊಲಿಷನ್ ಬ್ರೇಕ್, ಪಾರ್ಕಿಂಗ್ ಸೆನ್ಸರ್‌ಗಳು, ಕ್ರೂಸ್ ಕಂಟ್ರೋಲ್, ಆಟೊ ಹೆಡ್‌ಲ್ಯಾಂಪ್‌ಗಳು ಸೇರಿದಂತೆ ಹಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸ್ಲಾವಿಯಾ 1.5 ಲೀಟರ್ ಟಿಎಸ್‌ಐ ಎಂಜಿನ್‌ನ ಕಾರನ್ನು ಬಿಡುಗಡೆ ಮಾಡಲು ಸ್ಕೋಡಾ ಯೋಜಿಸಿದ್ದು, ಮಾರ್ಚ್ 3ರಂದು ಹೆಚ್ಚಿನ ಮಾಹಿತಿ ಹೊರಬರಲಿದೆ.
ಸ್ಲಾವಿಯಾ ಮಾದರಿ ಮತ್ತು ಬೆಲೆ:
* ಆ್ಯಕ್ಟೀವ್– ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್– ₹10.69 ಲಕ್ಷ
* ಆ್ಯಂಬಿಷನ್– ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್– ₹12.39 ಲಕ್ಷ
* ಆ್ಯಂಬಿಷನ್– ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್– ₹13.59 ಲಕ್ಷ
* ಸ್ಟೈಲ್ (ಸನ್‌ರೂಫ್ ರಹಿತ)–ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್– 13.59 ಲಕ್ಷ
* ಸ್ಟೈಲ್ (ಸನ್‌ರೂಫ್ ಸಹಿತ)–ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್– 13.99 ಲಕ್ಷ
* ಸ್ಟೈಲ್–ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್– ₹15.39 ಲಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.