ಶನಿವಾರ, ಅಕ್ಟೋಬರ್ 16, 2021
23 °C

ಸ್ಕೋಡಾ ರ್‍ಯಾಪಿಡ್‌ ಮ್ಯಾಟ್‌ ಆವೃತ್ತಿ ಬಿಡುಗಡೆ: ಬೆಲೆ ಎಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಕೋಡಾ ಆಟೊ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಮಧ್ಯಮ ಗಾತ್ರದ ಸೆಡಾನ್‌ ‘ರ್‍ಯಾಪಿಡ್’ನ ಸೀಮಿತ ಆವೃತ್ತಿ ‘ಮ್ಯಾಟ್‌’ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆಯು ₹ 11.99 ಲಕ್ಷದಿಂದ ಆರಂಭ ಆಗಲಿದೆ.

ಈ ಆವೃತ್ತಿಯು 1 ಲೀಟರ್‌ ಪೆಟ್ರೋಲ್‌ ಎಂಜಿನ್‌ನೊಂದಿಗೆ ಆಟೊಮ್ಯಾಟಿಕ್‌ ಮತ್ತು ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯ ಇದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೇರ್ಪಡೆಯೊಂದಿಗೆ, ಹೊಸ ಗ್ರಾಹಕರನ್ನು ತಲುಪಲು ‘ರ್‍ಯಾಪಿಡ್’ ಪೋರ್ಟ್‌ಫೋಲಿಯೊ ಮತ್ತಷ್ಟು ವಿಸ್ತರಣೆ ಆಗಿದೆ. ವಿಶಿಷ್ಟ ಶೈಲಿ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವ ವಿಶ್ವಾಸವಿದೆ ಎಂದು ಸ್ಕೋಡಾ ಆಟೊ ಇಂಡಿಯಾ ಬ್ರ್ಯಾಂಡ್‌ ನಿರ್ದೇಶಕ ಜಾಕ್‌ ಹಾಲಿಸ್‌ ಹೇಳಿದ್ದಾರೆ.

ಡ್ಯುಯಲ್‌ ಏರ್‌ಬ್ಯಾಗ್‌, ಆ್ಯಂಟಿಲಾಕ್‌ ಬ್ರೇಕಿಂಗ್‌ ಸಿಸ್ಟಂನಂತಹ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು