ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೋಡಾ ಕುಶಾಕ್‌ ಬಿಡುಗಡೆ: ಬೆಲೆ ಎಷ್ಟು, ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

Last Updated 28 ಜೂನ್ 2021, 16:17 IST
ಅಕ್ಷರ ಗಾತ್ರ

ನವದೆಹಲಿ: ಸ್ಕೋಡಾ ಕಂಪನಿಯು ಸೋಮವಾರ ‘ಕುಶಾಕ್‌’ ಬಿಡುಗಡೆ ಮಾಡುವ ಮೂಲಕ ಭಾರತದ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 10.5 ಲಕ್ಷದಿಂದ ₹ 17.6 ಲಕ್ಷದವರೆಗಿದೆ.

ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಆಯ್ಕೆಯ 1 ಲೀಟರ್‌ ಪೆಟ್ರೋಲ್‌ ಎಂಜಿನ್‌ ಟ್ರಿಮ್‌ ಬೆಲೆ ₹ 10.5 ಲಕ್ಷದಿಂದ ₹ 14.6 ಲಕ್ಷದವರೆಗಿದೆ. ಆಟೊಮ್ಯಾಟಿಕ್‌ ವೇರಿಯಂಟ್‌ ಬೆಲೆ ₹ 14.2 ಲಕ್ಷದಿಂದ ₹ 15.8 ಲಕ್ಷದವರೆಗಿದೆ. 1.5 ಲೀಟರ್‌ನ ಮ್ಯಾನುಯಲ್‌ ಟ್ರಿಮ್‌ ಬೆಲೆಯು ₹ 16.2 ಲಕ್ಷ ಹಾಗೂ ಆಟೊಮ್ಯಾಟಿಕ್‌ (ಡಿಎಸ್‌ಜಿ) ಟ್ರಾನ್ಸ್‌ಮಿಷನ್‌ ಆಯ್ಕೆಯ ಬೆಲೆಯು ₹ 17.6 ಲಕ್ಷ ಇದೆ.

ಹಿಲ್‌ ಹೋಲ್ಡ್‌ ಕಂಟ್ರೋಲ್‌ ಮತ್ತು ಟಯರ್‌ ಪ್ರೆಷರ್‌ ಮಾನಿಟರ್ ಸಿಸ್ಟಂ, ಗರಿಷ್ಠ 6ರವರೆಗೆ ಏರ್‌ಬ್ಯಾಗ್‌ ಇದರಲ್ಲಿ ಇವೆ. ಈ ಮಾದರಿಯ ವಾಹನದ ಇಂಧನ ಕ್ಷಮತೆಯ ಬಗ್ಗೆ ಕಂಪನಿಯು ಮಾಹಿತಿ ಹಂಚಿಕೊಂಡಿಲ್ಲ.

ಪ್ರಯಾಣಿಕ ವಾಹನಮಾರಾಟದಲ್ಲಿ ಎಸ್‌ಯುವಿ ಪಾಲು (%)

2015- 13.5

2019- 26

2020- 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT