ನವದೆಹಲಿ: ವಾಹನಗಳ ಮೇಲೆ ವಿಧಿಸುತ್ತಿರುವ ಜಿಎಸ್ಟಿ ದರದಲ್ಲಿ ಕಡಿತ ಆಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿದರು.

ತೀರಾ ಹಳೆಯ ವಾಹನಗಳ ಬಳಕೆ ನಿಲ್ಲಿಸುವ ವಿಚಾರವಾಗಿ ನೀತಿಯೊಂದು ಸಿದ್ಧವಾಗಿದ್ದು, ಅದಕ್ಕೆ ಸಂಬಂಧಿಸಿದ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಜಿಎಸ್ಟಿ ದರ ತಗ್ಗಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಸಿದ್ಧಪಡಿಸುತ್ತಿದೆ. ಅದರ ಬಗ್ಗೆ ಹೆಚ್ಚಿನ ವಿವರಗಳು ತಮಗೆ ತಿಳಿದಿಲ್ಲ ಎಂದರು. ಜಿಎಸ್ಟಿ ದರ ತಗ್ಗಿಸಬೇಕು ಎಂದು ಆಟೊಮೊಬೈಲ್ ಉದ್ಯಮ ಮುಂದಿಟ್ಟಿರುವ ಬೇಡಿಕೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು.

‘ಜಿಎಸ್ಟಿ ದರ ತಗ್ಗಿಸಲು ನಾವು ತಕ್ಷಣಕ್ಕೆ ಒಪ್ಪಿಕೊಳ್ಳದಿರಬಹುದು. ಆದರೆ, ಅದೇ ಅಂತಿಮ ಎಂದು ಭಾವಿಸಬೇಕಿಲ್ಲ’ ಎಂದು ಹೇಳಿದರು. ದ್ವಿಚಕ್ರ ವಾಹನಗಳಿಗೆ ವಿಧಿಸುತ್ತಿರುವ ಜಿಎಸ್ಟಿ ದರದ ವಿಚಾರವಾಗಿ ಮರುಪರಿಶೀಲನೆ ನಡೆಸಲು ಅವಕಾಶವಿದೆ ಎಂದು ನಿರ್ಮಲಾ ಅವರು ಈಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.