ಶನಿವಾರ, ಅಕ್ಟೋಬರ್ 16, 2021
22 °C

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಅಕ್ಟೋಬರ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ದಸರಾ ಮತ್ತು ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಕಾರುಗಳನ್ನು ಖರೀದಿಸುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

ಈ ಕೊಡುಗೆಗಳನ್ನು ಎಲ್ಲಾ ಅಧಿಕೃತ ಹೋಂಡಾ ಶೋ ರೂಂಗಳಲ್ಲಿ ಪಡೆಯಬಹುದಾಗಿದೆ. ಇದು ಅಕ್ಟೋಬರ್‌ 31, 2021 ರವರೆಗೆ ಉಳಿತಾಯ ಪ್ರಯೋಜನ ಸಿಗಲಿದೆ.

ಹೋಂಡಾ ಬ್ರ್ಯಾಂಡ್ ಕೊಡುಗೆ

5th ಜನರೇಶನ್ ಹೋಂಡಾ ಸಿಟಿ: ₹53,500 ವರೆಗೆ
4th ಜನರೇಶನ್ ಹೋಂಡಾ ಸಿಟಿ: ₹22,000 ವರೆಗೆ
ಹೊಸ ಹೋಂಡಾ ಅಮೇಸ್: ₹18,000 ವರೆಗೆ
ಹೊಸ ಹೋಂಡಾ ಡಬ್ಲ್ಯುಆರ್-ವಿ: ₹40,100 ವರೆಗೆ
ಹೊಸ ಹೋಂಡಾ ಜಾಝ್: ₹45,900 ವರೆಗೆ

ಲಭ್ಯವಿರುವ ಕೊಡುಗೆಗಳು ನಗದು ರಿಯಾಯಿತಿಗಳು ಅಥವಾ ಪರಿಕರಗಳ ರೂಪದಲ್ಲಿರುತ್ತವೆ ಮತ್ತು ಕಡಿಮೆ ಬಡ್ಡಿ, ಇಎಂಐ ಪ್ಯಾಕೇಜ್‌ಗಳು, ಆನ್-ರೋಡ್ ಫೈನಾನ್ಸಿಂಗ್ ಮತ್ತು ದೀರ್ಘಾವಧಿಯ ಸಾಲಗಳನ್ನು ನೀಡುವ ಮೂಲಕ ಎಚ್‌ಸಿಐಎಲ್ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು