ಮುಂಬೈ/ನವದೆಹಲಿ: ಆಟೊಮೊಬೈಲ್ ಕ್ಷೇತ್ರದ ಪ್ರಮುಖ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್, ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಮತ್ತು ಎಂಜಿ ಮೋಟರ್ ಡಿಸೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟದಲ್ಲಿ ಹೆಚ್ಚಳ ಆಗಿರುವುದಾಗಿ ಶುಕ್ರವಾರ ತಿಳಿಸಿವೆ.

ಮಾರುತಿ ಸುಜುಕಿ, ಡಿಸೆಂಬರ್ನಲ್ಲಿ ತನ್ನ ಕಾರುಗಳ ಮಾರಾಟದಲ್ಲಿ ಶೇಕಡ 20.2ರಷ್ಟು ಹೆಚ್ಚಳ ಆಗಿದೆ ಎಂದು ಹೇಳಿದೆ. ಡಿಸೆಂಬರ್ನಲ್ಲಿ ಕಂಪನಿಯು ಒಟ್ಟು 1.60 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಕಂಪನಿಯು ಒಟ್ಟು 1.33 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಸ್ಟಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್ನಂತಹ ಕಾಂಪ್ಯಾಕ್ಟ್ ಕಾರುಗಳ ಮಾರಾಟದಲ್ಲಿ ಶೇಕಡ 18.2ರಷ್ಟು ಹೆಚ್ಚಳ ಆಗಿದೆ.

ಟಿಕೆಎಂ ಕಂಪನಿಯು ವಾಹನಗಳ ಮಾರಾಟದಲ್ಲಿ ಶೇಕಡ 14ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ. ಡಿಸೆಂಬ ರ್ನಲ್ಲಿ ಒಟ್ಟು 7,487 ವಾಹನಗಳ ಮಾರಾಟ ಆಗಿದೆ. ಹಿಂದಿನ ವರ್ಷದ ಡಿಸೆಂಬರ್ನಲ್ಲಿ 6,544 ವಾಹನಗಳ ಮಾರಾಟ ಆಗಿತ್ತು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಜಿ ಮೋಟರ್: ಎಂಜಿ ಮೋಟರ್ ಇಂಡಿಯಾ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇಕಡ 33ರಷ್ಟು ಹೆಚ್ಚಳ ಆಗಿದೆ. 2019ರ ಡಿಸೆಂಬರ್ನಲ್ಲಿ ಕಂಪನಿಯು 3,021 ವಾಹನಗಳ ಮಾರಾಟ ಮಾಡಿತ್ತು. 2020ರ ಡಿಸೆಂಬರ್ನಲ್ಲಿ 4,010 ವಾಹನಗಳ ಮಾರಾಟ ಆಗಿದೆ ಎಂದು ಕಂಪನಿ ಹೇಳಿದೆ. ದೇಶದ ಎರಡನೆಯ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಹುಂಡೈ, ಡಿಸೆಂಬರ್ ತಿಂಗಳಲ್ಲಿ ತನ್ನಿಂದ ಡೀಲರ್ಗಳಿಗೆ ಪೂರೈಕೆಯಾದ ವಾಹನಗಳ ಸಂಖ್ಯೆ ಯಲ್ಲಿ ಶೇಕಡ 24.89ರಷ್ಟು ಏರಿಕೆ ದಾಖಲಾಗಿದೆ ಎಂದು ಹೇಳಿದೆ. 2020ರ ಡಿಸೆಂಬರ್ನಲ್ಲಿ ಕಂಪನಿಯು 47,400 ವಾಹನಗಳನ್ನು ಡೀಲರ್ಗಳಿಗೆ ರವಾನಿಸಿದೆ. 2019ರ ಡಿಸೆಂಬರ್ನಲ್ಲಿ ಕಂಪನಿಯು 37,953 ವಾಹನಗಳನ್ನು ಡೀಲರ್ಗಳಿಗೆ ಕಳುಹಿಸಿಕೊಟ್ಟಿತ್ತು.

ಟಾಟಾ ಮೋಟರ್ಸ್ನ ವಾಹನಗಳ ಮಾರಾಟದಲ್ಲಿ ಶೇಕಡ 84ರಷ್ಟು ಹೆಚ್ಚಳ ಆಗಿದೆ. 2020ರ ಡಿಸೆಂಬರ್ನಲ್ಲಿ ಕಂಪನಿಯು 23,545 ವಾಹನಗಳನ್ನು ಮಾರಾಟ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.