ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯಾ ನೂತನ ಸೆಲ್ಟೋಸ್‌ ಕಾರಿನ ಆರಂಭಿಕ ಬೆಲೆ ₹10.8ಲಕ್ಷ

Published 27 ಜುಲೈ 2023, 14:09 IST
Last Updated 27 ಜುಲೈ 2023, 14:09 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಬಿಡುಗಡೆಗೊಂಡ ಕಿಯಾ ಕಾರು ತಯಾರಿಕಾ ಕಂಪನಿಯ ಸುಧಾರಿತ ಸೆಲ್ಟೋಸ್ ಬೆಲೆ ₹10.89 ಲಕ್ಷದಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಂಪನಿ, ‘ಎಡಿಎಎಸ್‌ 2ನೇ ಹಂತ ಹೊಂದಿರುವ ಟಾಪ್‌ ವೇರಿಯಂಟ್‌, ಜಿಟಿ ಲೈನ್‌ ಮತ್ತು ಎಕ್ಸ್‌ ಲೈನ್‌, ಡೀಸೆಲ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್‌ ಕಾರುಗಳ ಎಕ್ಸ್‌ ಶೋರೂಂ ಬೆಲೆ ₹19.79ಲಕ್ಷ ಮತ್ತು ₹19.99ಲಕ್ಷ ಎಂದಿದೆ.

ಸೆಲ್ಟೋಸ್‌ನಲ್ಲಿ ಒಟ್ಟು 18 ವಿವಿಧ ಮಾದರಿಗಳಿವೆ. ಸ್ಮಾರ್ಟ್‌ಸ್ಟ್ರೀಮ್‌ ಜಿ 1.5 ಪೆಟ್ರೋಲ್ ಎಂಜಿನ್, ನಾಲ್ಕು 6 ಮ್ಯಾನ್ಯುಲ್ ಟ್ರಾನ್ಸಿಮಿಷನ್‌ನ ಟ್ರಿಮ್‌ ಮತ್ತು ಒಂದು ಐವಿಟಿ, ಸ್ಮಾರ್ಟ್‌ ಸ್ಟ್ರೀಮ್‌ ಜಿ 1.5ಟಿ– ಜಿಡಿಐ ಪೆಟ್ರೋಲ್‌ ಎಂಜಿನ್, ಎರಡು 6 ಐಎಂಟಿ ಹಾಗೂ ಮೂರು 7ಡಿಸಿಟಿ ಹಾಗೂ 1.5 ಲೀ ಸಿಆರ್‌ಡಿಐ ವಿಜಿಟಿ ಡೀಸೆಲ್ ಎಂಜಿನ್, 5 6ಐಎಂಟಿ ಮತ್ತು ಮೂರು6 ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಟ್ರಿಮ್‌ಗಳು ಸೇರಿವೆ.

32 ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿರುವ ನೂತನ ಸೆಲ್ಟೋಸ್‌ ಒಂದೇ ದಿನ 13,424 ಬುಕಿಂಗ್‌ಗಳನ್ನು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT