ಬುಧವಾರ, ಡಿಸೆಂಬರ್ 2, 2020
25 °C

ನವರಾತ್ರಿ: ಮಾರುತಿ, ಹುಂಡೈ, ಟಾಟಾ ಮಾರಾಟ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ವರ್ಷದ ನವರಾತ್ರಿ ಸಂದರ್ಭದಲ್ಲಿನ ಕಾರುಗಳ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಮಾರುತಿ ಸುಜುಕಿ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳ ರಿಟೇಲ್‌ ಮಾರಾಟದಲ್ಲಿ ಏರಿಕೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾದ ರಿಟೇಲ್‌ ಮಾರಾಟ ಶೇಕಡ 27ರಷ್ಟು ಹೆಚ್ಚಾಗಿದ್ದು, ಒಟ್ಟಾರೆ 96,700 ವಾಹನಗಳನ್ನು ಮಾರಾಟ ಮಾಡಿದೆ.

2019ರ ಇದೇ ಅವಧಿಯಲ್ಲಿ 76 ಸಾವಿರ ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ. ಹುಂಡೈ ಮೋಟರ್‌ ಇಂಡಿಯಾದ ಮಾರಾಟ ಶೇ 28ರಷ್ಟು ಹೆಚ್ಚಾಗಿದೆ.

ಟಾಟಾ ಮೋಟರ್ಸ್‌ ಕಂಪನಿಯ ಮಾರಾಟ ಶೇ 90ರಷ್ಟು ಹೆಚ್ಚಾಗಿದೆ. ಹೊಸ ಕಾರು ಮತ್ತು ಯುವಿಗಳಿಗೆ ಬೇಡಿಕೆ ಬಂದಿದೆ ಎಂದು ಟಾಟಾ ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಮಾರುಕಟ್ಟೆ ಮುಖ್ಯಸ್ಥ ವಿವೇಕ್‌ ಶ್ರೀವತ್ಸ ತಿಳಿಸಿದ್ದಾರೆ.

ಕಿಯಾ ಮೊಟರ್ಸ್‌ 11,640 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 224ರಷ್ಟು ಹೆಚ್ಚಳ ಇದು ಎಂದು ಕಂಪನಿ ಹೇಳಿಕೊಂಡಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟರ್‌ ಕಂಪನಿಯ ಮಾರಾಟದಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ಕಂಪನಿಯ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ನವೀನ್‌ ಸೋನಿ ತಿಳಿಸಿದ್ದಾರೆ. ಎಸ್‌ಯುವಿ ಮತ್ತು ಎಸ್‌ಸಿವಿ ಮಾರಾಟವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿದೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿ ತಿಳಿಸಿದೆ.

ಮಾರಾಟದಲ್ಲಿ ಶೇ 10ರಷ್ಟು ಹೆಚ್ಚಳ ಆಗಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು