ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಆಲ್ಟ್ರೋಜ್‌ನ ಹೊಸ ಆವೃತ್ತಿ

Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಟಾಟಾ ಮೋಟರ್ಸ್‌ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಲ್ಟ್ರೋಜ್‌ನ ಹೊಸ ಆವೃತ್ತಿ ‘ಆಲ್ಟ್ರೋಜ್‌ ಎಕ್ಸ್‌ಎಂ ಪ್ಲಸ್‌’ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 6.6 ಲಕ್ಷ ಇದೆ.

ಪೆಟ್ರೋಲ್‌ ಎಂಜಿನ್‌ನಆಲ್ಟ್ರೋಜ್‌ ಎಕ್ಸ್‌ಎಂ ಪ್ಲಸ್‌ 17.78 ಸಿಎಂ ಇರುವ ಟಚ್‌ಸ್ಕ್ರೀನ್‌ ಹೊಂದಿದ್ದು, ಆ್ಯಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಕನೆಕ್ಟಿವಿಟಿಯಂತಹ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ವಾಯ್ಸ್‌ ಅಲರ್ಟ್ಸ್‌, ವಾಯ್ಸ್ ಕಮಾಂಡ್‌ ರೆಕಗ್ನಿಷನ್‌, ರಿಮೋಟ್‌ ಫೋಲ್ಡೆಬಲ್‌ ಕೀ ವೈಶಿಷ್ಟ್ಯಗಳನ್ನು ಹೊಂದಿದೆ. ಹೈ ಸ್ಟ್ರೀಟ್‌ ಗೋಲ್ಡ್‌, ಡೌನ್‌ಟೌನ್‌ ರೆಡ್‌, ಅವೆನ್ಯೂ ವೈಟ್‌ ಹಾಗೂ ಮಿಡ್‌ಟೌನ್‌ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಆಲ್ಟೋಝ್‌ನ ಮೂಲಕ ಫ್ರೀಮಿಯಂ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಸುರಕ್ಷತೆಗೆ ಹೊಸ ಮಾನದಂಡ ಸೃಷ್ಟಿಸಿದ್ದೇವೆ. ಎಕ್ಸ್‌ಎಂ ಪ್ಲಸ್‌ ಆವೃತ್ತಿಯನ್ನು ಪರಿಚಯಿಸುವ ಮೂಲಕ ಆಕರ್ಷಕ ದರದಲ್ಲಿ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಅನುಭವಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದ್ದೇವೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ಮುಖ್ಯಸ್ಥ ವಿವೇಕ್‌ ಶ್ರೀವಾಸ್ತವ ಹೇಳಿದ್ದಾರೆ.

2020ರ ಜನವರಿಯಲ್ಲಿ ಆಲ್ಟ್ರೋಝ್‌ ಬಿಡುಗಡೆ ಮಾಡುವ ಮೂಲಕ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ವಿಭಾಗಕ್ಕೆ ಕಂಪನಿ ಕಾಲಿಟ್ಟಿತು. ಇದರ ಆಕರ್ಷಕ ವಿನ್ಯಾಸ, ಚಾಲನಾ ಅನುಭವ ಮತ್ತು ಸುರಕ್ಷತಾ ದೃಷ್ಟಿಯಿಂದಾಗಿ ಗ್ರಾಹಕರು ಮತ್ತು ಉದ್ಯಮದ ಮೆಚ್ಚುಗೆಗೆ ಪಾತ್ರವಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ 5 ಸ್ಟಾರ್‌ ಜಿಎನ್‌ಸಿಎಪಿ ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಎಸ್‌ಯುವಿಗೆ ಆದ್ಯತೆ
ದೇಶಿ ವಾಹನ ಮಾರುಕಟ್ಟೆಯಲ್ಲಿ ಎಸ್‌ಯುವಿ ವಿಭಾಗದಲ್ಲಿ ತನ್ನ ವಹಿವಾಟನ್ನು ಬಲಪಡಿಸಿಕೊಳ್ಳಲು ಟಾಟಾ ಮೋಟರ್ಸ್‌ ಮುಂದಾಗಿದೆ.

‘ಭಾರತದಲ್ಲಷ್ಟೇ ಅಲ್ಲದೆ ಜಾಗತಿವಾಗಿಯೂ ಎಸ್‌ಯುವಿ ವಿಭಾಗದತ್ತ ಗಮನ ಹೆಚ್ಚಾಗುತ್ತಿದೆ. 2015ರಲ್ಲಿ ದೇಶಿ ಮಾರುಕಟ್ಟೆಯಲ್ಲಿ ಎಸ್‌ಯುವಿ ಪಾಲು ಶೇ 15ರಷ್ಟಿತ್ತು. ಈ ವರ್ಷ ಶೇ 30ರ ಆಸುಪಾಸಿನಲ್ಲಿದೆ. ಹೀಗಾಗಿ ಎಸ್‌ಯವಿ ವಿಭಾಗದಲ್ಲಿ ಹೆಚ್ಚಿನ ವಾಹನಗಳನ್ನು ಹೊಂದಿದ್ದರೆ ಮಾರುಕಟ್ಟೆ ಪಾಲು ಸಹ ಹೆಚ್ಚಾಗಲಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಶೈಲೇಶ್‌ ಚಂದ್ರ ಹೇಳಿದ್ದಾರೆ.

‘ನೆಕ್ಸಾನ್‌ ಮತ್ತು ಹ್ಯಾರಿಯರ್‌ ಮಾರಾಟ ಉತ್ತಮವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹ್ಯಾರಿಯರ್‌ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಹಿಂದಿನ ತಿಂಗಳು ನೆಕ್ಸಾನ್‌ ಮಾರಾಟ ಗರಿಷ್ಠ ಮಟ್ಟದಲ್ಲಿತ್ತು. ಈ ಬೆಳವಣಿಗೆಯು ಮುಂದುವರಿಯುವ ವಿಶ್ವಾಸವಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT