ಸೋಮವಾರ, ಸೆಪ್ಟೆಂಬರ್ 20, 2021
22 °C

ಟಾಟಾ ಸಫಾರಿ: 10 ಸಾವಿರದ ಮೈಲಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ‘ಸಫಾರಿ’ ಮಾದರಿಯ 10 ಸಾವಿರ ವಾಹನಗಳನ್ನು ತಯಾರಿಸಿದೆ. ನೂರನೆಯ ಸಫಾರಿ ಎಸ್‌ಯುವಿ ಫೆಬ್ರುವರಿಯಲ್ಲಿ ತಯಾರಿಕಾ ಘಟಕದಲ್ಲಿ ಸಿದ್ಧವಾಗಿತ್ತು.

‘ಸಫಾರಿ ಎಸ್‌ಯುವಿ ತನಗೆ ಪೈಪೋಟಿ ನೀಡುವ ಇತರ ವಾಹನಗಳ ಮಾರುಕಟ್ಟೆಯಲ್ಲಿ ಶೇಕಡ 25.2ರಷ್ಟು ಪಾಲು ಹೊಂದಿದೆ. ಸಫಾರಿಯ ವಿನ್ಯಾಸ, ಪ್ರೀಮಿಯಂ ಗುಣಮಟ್ಟದ ಒಳಾಂಗಣ ವಿನ್ಯಾಸ, ಸುರಕ್ಷತಾ ಕ್ರಮಗಳನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ’ ಎಂದು ಕಂಪನಿ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಫಾರಿ ಮತ್ತು ಹ್ಯಾರಿಯರ್‌ ವಾಹನಗಳ ಒಟ್ಟು ಮಾರುಕಟ್ಟೆ ಪಾಲು ಹೈ ಎಸ್‌ಯುವಿ ಮಾರುಕಟ್ಟೆಯಲ್ಲಿ ಶೇ 41.2ರಷ್ಟು ಇದೆ ಎಂದು ಕಂಪನಿ ಹೇಳಿದೆ.

‘ಹೊಸ ಸಫಾರಿ ವಾಹನದ ವಿಚಾರದಲ್ಲಿ ಈ ಮೈಲಿಗಲ್ಲು ಕ್ರಮಿಸಿರುವುದು ನಮಗೆ ಖುಷಿಕೊಟ್ಟಿದೆ’ ಎಂದು ಟಾಟಾದ ಪ್ರಯಾಣಿಕ ವಾಹನಗಳ ವಹಿವಾಟು ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು