ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಶೋ ರೂಂ ತೆರೆಯುವುದಾಗಿ ವಿದ್ಯುತ್ಚಾಲಿತ ಕಾರು ತಯಾರಿಕಾ ಕಂಪನಿ 'ಟೆಸ್ಲಾ' ಶನಿವಾರ ಮಾಹಿತಿ ನೀಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕಾಣುತ್ತೇನೆ' ಎಂದು ಬರೆದಿದೆ.

ಟೆಸ್ಲಾ ಭಾರತದಲ್ಲಿ ತೆರೆಯಲಿರುವ ನಾಲ್ಕನೇ ಶೋ ರೂಂ ಇದು. ಈಗಾಗಲೇ ದೆಹಲಿ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಟೆಸ್ಲಾ ಶೋ ರೂಂ ಇವೆ.

ಗುರುಗ್ರಾಮದ ಡಿಎಲ್ಎಫ್ ಹಾರಿಜನ್ ಸೆಂಟರ್ನಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ಗೆ ಚಾಲನೆ ನೀಡಿರುವುದಾಗಿ ಟೆಸ್ಲಾ, 2025ರ ಡಿಸೆಂಬರ್ನಲ್ಲಿ ತಿಳಿಸಿತ್ತು.

'ಈ ಮಹತ್ವದ ಕ್ರಮವು ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಇದು ಗ್ರಾಹಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ' ಎಂದು ಹೇಳಿಕೆ ನೀಡಿತ್ತು.
.Tesla India: ಭಾರತದ ಮಾರುಕಟ್ಟೆ ಪ್ರವೇಶಿಸಿದ ಟೆಸ್ಲಾ.‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ.15ರಂದು ಮುಂಬೈನಲ್ಲಿ ಟೆಸ್ಲಾ ಕಾರು ಮಳಿಗೆ ಆರಂಭ.EV ಕಾರುಗಳ ವ್ಯಾಪಾರ ಪೈಪೋಟಿ: ಅಮೆರಿಕದ ಟೆಸ್ಲಾ ಹಿಂದಿಕ್ಕಿದ ಚೀನಾದ ಬಿವೈಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.