ಭಾನುವಾರ, ಏಪ್ರಿಲ್ 18, 2021
32 °C

ಸೆಮಿಕಂಡಕ್ಟರ್ ಪೂರೈಕೆ ಕೊರತೆ: ವೋಲ್ವೊ ಟ್ರಕ್ ಉತ್ಪಾದನೆ ಸ್ಥಗಿತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

AFP Photo

ಸ್ವೀಡನ್ ಮೂಲದ ವಾಹನ ಉತ್ಪಾದಕ ಸಂಸ್ಥೆ ವೋಲ್ವೊ, ಸೆಮಿಕಂಡಕ್ಟರ್ ಪೂರೈಕೆಯ ಕೊರತೆ ಎದುರಿಸುತ್ತಿದ್ದು, ಟ್ರಕ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ವೋಲ್ವೊ, ಜಗತ್ತಿನ ಎರಡನೇ ಅತಿದೊಡ್ಡ ಘನವಾಹನ ಉತ್ಪಾದನಾ ಸಂಸ್ಥೆಯಾಗಿದೆ. ಉತ್ಪಾದನೆಗೆ ಅಡಚಣೆಯಾಗಿರುವ ಕುರಿತು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಜಾಗತಿಕವಾಗಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದೆ.

ಒಟ್ಟಾರೆಯಾಗಿ ಉತ್ಪಾದನಾ ಘಟಕದಲ್ಲಿ ಎರಡರಿಂದ ನಾಲ್ಕು ವಾರಗಳ ಕಾಲ ಸಮಸ್ಯೆಯಾಗಬಹುದು. ಪ್ರಸ್ತುತ ಇರುವ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಎಂದು ವೋಲ್ವೊ ತಿಳಿಸಿದೆ.

ಸೆಮಿಕಂಡಕ್ಟರ್ ಜಾಗತಿಕ ಪೂರೈಕೆ ಸರಣಿಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ, ಇತರ ಕೆಲವೊಂದು ಬಿಡಿಭಾಗಗಳ ಪೂರೈಕೆ ಕೂಡ ಕಡಿಮೆಯಿದೆ. ವಾಹನ ಉತ್ಪಾದನೆ ಮಾತ್ರವಲ್ಲದೆ, ಇತರ ಕೆಲವೊಂದು ಕ್ಷೇತ್ರ ಕೂಡ ಸಮಸ್ಯೆ ಎದುರಿಸಬಹುದು ಎಂದು ವೋಲ್ವೊ ಹೇಳಿದೆ.

ಕಂಪ್ಯೂಟರ್ ಚಿಪ್ ಉತ್ಪಾದನೆಗೆ ಕೋವಿಡ್ ಲಾಕ್‌ಡೌನ್ ಸಮಸ್ಯೆಯಾಗಿದ್ದು, ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ.

ಫೋರ್ಡ್ ಮತ್ತು ವೋಕ್ಸ್ ವ್ಯಾಗನ್ ಕೂಡ ಬಿಡಿಭಾಗ ಪೂರೈಕೆ ಕೊರತೆಯಿಂದ ಉತ್ಪಾದನೆಯಲ್ಲಿ ಕಡಿತ ಮಾಡಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು