ಮಂಗಳವಾರ, ಮಾರ್ಚ್ 28, 2023
31 °C

ಹ್ಯಾಂಡ್ ಕ್ರಾಫ್ಟೆಡ್ ಬ್ಯಾಗ್ ಟ್ರೆಂಡ್‌...

ಕೆ.ವಿ. ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ಫ್ಯಾಷನ್ ಲೋಕದಲ್ಲಿ ಹಳೇ ಸ್ಟೈಲನ್ನೇ ಪುನಃ ಹೊಸರೂಪದಲ್ಲಿ ಬಳಸುವ ಟ್ರೆಂಡ್‌ ಕೆಲ ವರ್ಷಗಳಿಂದ ಚಾಲ್ತಿಯಲ್ಲಿದೆ. ಇದು ಫ್ಯಾಷನ್‌ ‍ಪ್ರಿಯರಿಗೆ ಅಚ್ಚುಮೆಚ್ಚು ಕೂಡ. ದಶಕಗಳ ಹಿಂದೆ ಮಣಿ, ಕ್ರೋಶಾ, ಗೋಣಿದಾರ, ಟ್ಯೂಬ್ ವೈರ್, ಟ್ವಿಸ್ಟೆಡ್ ನೈಲಾನ್ ಇತ್ಯಾದಿ ವಸ್ತುಗಳಿಂದ ಹೆಣೆಯುತ್ತಿದ್ದ ಬ್ಯಾಗ್‌ಗೆ ಬೇಡಿಕೆ ಹೆಚ್ಚಿತ್ತು. ಅವು ಈಗ ವಿವಿಧ ರೂಪ, ಅಳತೆ, ಬಣ್ಣ, ವಿನ್ಯಾಸಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪರಿಸರ ಸ್ನೇಹಿ ಮತ್ತು ಕ್ಯಾಶುವಲ್‌ನಿಂದ ಪಾರ್ಟಿಗಳವರೆಗೆ ಒಯ್ಯಬಹುದಾದ ಗ್ರಾಹಕರ ಅಗತ್ಯ ಮತ್ತು ಅಭಿರುಚಿಗೆ ತಕ್ಕಂತೆ ದೊರೆ ಯುವ ಕರಕುಶಲ (hand crafted) ಈ ಚೀಲಗಳು ನಮ್ಮ ಪರಂಪರೆಯ ದ್ಯೋತಕವೆಂದೇ ಹೇಳಬಹುದು.

ಬ್ಯಾಂಬೂ ಬ್ಯಾಗ್

ಬಿದಿರಿನ ಕಡ್ಡಿ ಮತ್ತು ಎಳೆನಾರಿನಿಂದ ತಯಾರಾದ ಈ ಚೀಲಗಳು ಸೌಂದರ್ಯಪ್ರಿಯರ ಅಚ್ಚುಮೆಚ್ಚು. ಪಾರ್ಟಿಗಳಿಗೆ ಉಡುಗೆಯ ಜೊತೆ ಮತ್ತೊಂದು ಪರಿಕರವಾಗಿ ಬಳಸಬಹುದು.

ಕ್ರೋಶಾ(crochet) ಬ್ಯಾಗ್

ಇದು ಕ್ರೋಶಾದಾರವೆಂದೇ ಗುರುತಿಸುವ ಗಟ್ಟಿ ದಾರವನ್ನು ಕ್ರೋಶಾ ಕಡ್ಡಿಯಲ್ಲಿ ಹೆಣೆಯುವ ಚೀಲ. ಈ ಬ್ಯಾಗುಗಳ ಅಂಚುಗಳು ಮೃದುವಾಗಿರುತ್ತದೆ. ಗಾಳಿಯಾಡುವ ಲೈನಿಂಗ್ ರಹಿತ ಓಪನ್ ಬ್ಯಾಗ್ ಮತ್ತು ಲೈನಿಂಗ್, ಸೇಫ್ ಜಿಪ್ ಇರುತ್ತದೆ. ಮೊಬೈಲ್ ಪೌಚ್‌ನಿಂದ  ಶಾಪಿಂಗ್ ಬ್ಯಾಗ್‌ವರೆಗೆ ಎಲ್ಲ ಅಳತೆಗಳಲ್ಲೂ ದೊರೆಯುತ್ತದೆ. ಅವಶ್ಯಕತೆಗೆ ತಕ್ಕಂತೆ ಉದ್ದ, ಗಿಡ್ಡ ಹಿಡಿಕೆಗಳ ಬ್ಯಾಗ್‌ ಸಿಗುತ್ತದೆ.

ವುಡನ್ ಬೀಡ್ ಬ್ಯಾಗ್ ‌

ವಿವಿಧ ಅಳತೆ ಹಾಗೂ ಆಕಾರದ ಮರದ ಮಣಿಗಳನ್ನು ಸುಂದರವಾಗಿ ಪೋಣಿಸಿ ರೂಪಿಸಿರುವ ಬ್ಯಾಗ್. ಕೌಶಲಕ್ಕೆ ತಕ್ಕಂತ ವಿನ್ಯಾಸ. ಗುಂಪಿನಲ್ಲಿ ಎದ್ದುಕಾಣುವ ಈ ಬ್ಯಾಗ್‌ಗಳು ಕೊಂಚ ಭಾರವಿರುತ್ತದೆ. ಸರಳ ಉಡುಗೆಗೆ ಇದು ವಿಶೇಷ ಮೆರುಗು ಕೊಡುತ್ತದೆ.

ಕಾಟನ್ ರೋಪ್ ಬ್ಯಾಗ್

ಎಲ್ಲ ಋತುಗಳಿಗೂ ಹೊಂದುವ ಈ ಚೀಲಗಳು ತನ್ನ ಸಹಜ ಗುಣದಿಂದಲೇ ಹೆಚ್ಚು ಭಾರ ತಡೆಯುತ್ತದೆ. ದೀರ್ಘಕಾಲ ಬಾಳಿಕೆ ಬರುವ ಈ ಬ್ಯಾಗ್‌ಗಳು ಹೆಸರಿಗೆ ತಕ್ಕಂತೆ ಘನವಾಗಿರುತ್ತದೆ. ವೃತ್ತಾಕಾರ, ಆಯತ ಇತ್ಯಾದಿ ಆಕಾರಗಳಲ್ಲಿ ದೊರೆಯುವ ಈ ಚೀಲಗಳು ನೋಡಲು ಅಷ್ಟೇ ಆಕರ್ಷಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು