ಋತುಮಾನ ಬದಲಾದಂತೆ ಫ್ಯಾಷನ್ ಜಗತ್ತೂ ಹೊಸತನಕ್ಕೆ ಹೊರಳುತ್ತದೆ. ಆಯಾ ಕಾಲಕ್ಕೆ ತಕ್ಕ ರೀತಿಯಲ್ಲಿ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈಗಂತೂ ಚಳಿ ತೀವ್ರವಾಗಿದೆ. ಹೀಗಾಗಿ, ಜನ ಬೆಚ್ಚನೆಯ ಉಡುಪನ್ನೇ ಹುಡುಕುತ್ತಾರೆ. ಅದರಲ್ಲೂ ಈಗಿನ ಜೆನ್ ಝೀ ಮಕ್ಕಳು ಯಾವುದು ಹೊಸತು, ಏನು ವಿಶೇಷ ಇದೆ ಎನ್ನುವುದನ್ನು ಗಮನಿಸುವುದರಲ್ಲಿ ನಿಸ್ಸೀಮರು.

ಜಾಕೆಟ್, ಸ್ವೆಟ್ಶರ್ಟ್, ಪುಲ್ಓವರ್ಗಳತ್ತ ಈಗ ಎಲ್ಲರ ಗಮನವಿದೆ. ಅದರಲ್ಲೂ ಪುಲ್ಓವರ್ ಧರಿಸಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಪುಲ್ಓವರ್ಗಳು ಟ್ರೆಂಡಿ ಎನ್ನಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ. ಜೊತೆಗೆ ಚಳಿಗಾಲದಲ್ಲಿ ದೇಹವನ್ನೂ ಬೆಚ್ಚಗಿರಿಸುತ್ತವೆ. ಇದನ್ನು ಜೀನ್ಸ್ , ಕುರ್ತಾ ಹಾಗೂ ಸೀರೆ ಮೇಲೆ, ಸ್ಕರ್ಟ್ ಜೊತೆಯೂ ಧರಿಸಬಹುದು.

ಸೀರೆಯ ಅಂದ ಹೆಚ್ಚಿಸುತ್ತದೆ

ಸೀರೆಯೊಂದಿಗೆ ಬ್ಲೌಸ್ ಧರಿಸುವುದು ಇದ್ದೇ ಇದೆ. ಆದರೆ ಈಗ ಅದೇ ಬ್ಲೌಸ್ ಅನ್ನು ಪುಲ್ಓವರ್ ರೀತಿ ಹೊಲಿಸಿಕೊಂಡು ಧರಿಸುವುದು ಟ್ರೆಂಡ್. ಇದರಿಂದ ಸೀರೆಯ ಅಂದದೊಂದಿಗೆ ನಮ್ಮ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು. ಸಂಪ್ರದಾಯವನ್ನೂ ಬಿಡದೆ, ಹೊಸ ಟ್ರೆಂಡ್ನೊಂದಿಗೂ ಹೊಂದಿಕೊಂಡು, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬಹುದು.

ಸ್ಕರ್ಟ್ ಮತ್ತು ಪುಲ್ಓವರ್

ಪಾದದವರೆಗೆ ಇಳಿಬಿಟ್ಟಿರುವ ಸ್ಕರ್ಟ್ ಮೇಲೆ ಪುಲ್ಓವರ್ ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಈ ಉಡುಪು ನಮಗೆ ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡೂ ನೋಟ ಸಿಗುವಂತೆ ಮಾಡುತ್ತದೆ. ಉದ್ದನೆಯ ಸ್ಕರ್ಟ್ ಜೊತೆ ತುಂಬು ತೋಳಿನ ಪುಲ್ಓವರ್ ಉತ್ತಮ ಆಯ್ಕೆ. ಶಾರ್ಟ್ ಸ್ಕರ್ಟ್ ಮೇಲೂ ಇದನ್ನು ಧರಿಸಬಹುದು.

ಜೀನ್ಸ್ ಜೊತೆ ಪುಲ್ಓವರ್

ಜೀನ್ಸ್ ಜೊತೆಯೂ ಪುಲ್ಓವರ್ ಹೊಂದಿ ಕೊಳ್ಳುತ್ತದೆ. ಯಾವುದೇ ಬಣ್ಣದ ಜೀನ್ಸ್ ಮೇಲೆ ಅದಕ್ಕೆ ವಿರುದ್ಧ ಬಣ್ಣದ ಪುಲ್ಓವರ್ ಧರಿಸಬಹುದು. ತುಂಬು ತೋಳಿನ, ಅರ್ಧ ತೋಳಿನ ಪುಲ್ಓವರ್ಗಳೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಈಗ ಇದು ಜೆನ್ ಝೀಗಳ ಇಷ್ಟದ ಉಡುಗೆಯೂ ಆಗಿದೆ.

ಕುರ್ತಾ ಮೇಲೆ ಪುಲ್ಓವರ್

ಚಳಿಗಾಲದಲ್ಲಿ ಬೆಚ್ಚಗಿರಲು ಕುರ್ತಾ ಮೇಲೆ ಪುಲ್ಓವರ್ ಧರಿಸಬಹುದು. ಕುರ್ತಾ ಬಣ್ಣದ್ದೇ ವಿವಿಧ ರೀತಿಯ ಪುಲ್ಓವರ್ ಧರಿಸುವುದರಿಂದ ಟ್ರೆಂಡಿ ಆಗಿಯೂ ಕಾಣುತ್ತದೆ. ವುಲ್ಲನ್ ಶಾಲ್ ಧರಿಸಿದರೆ ಉತ್ತಮ ಲುಕ್ ಪಡೆಯಬಹುದು. ಇದು ನಮ್ಮ ಲುಕ್ ಅನ್ನೇ ಬದಲಿಸುವುದರಲ್ಲಿ ಎರಡು ಮಾತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.