ಶನಿವಾರ, ಅಕ್ಟೋಬರ್ 31, 2020
18 °C

Alt Z ಲೈಫ್‌ಗೆ ಸಿದ್ಧರಾಗಿ! ಕ್ವಿಕ್‌ ಸ್ವಿಚ್‌, ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಮೂಲಕ ಖಾಸಗಿತನ ಸುರಕ್ಷತೆಗೆ ಸ್ಯಾಮ್‌ಸಂಗ್‌ ಹೊಸ ಆಯಾಮ

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಖಾಸಗಿತನ ಸುರಕ್ಷತೆಯ ಈ ಎರಡೂ ಫೀಚರ್‌ಗಳು ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳಲ್ಲಿ ಲಭ್ಯವಿದ್ದು, ಮಿಲೇನಿಯಲ್ಸ್‌ ಮತ್ತು ಹೊಸತಲೆಮಾರಿನವರನ್ನು ಸೆಳೆಯಲಿದೆ.

ಊಹಿಸಿಕೊಳ್ಳಿ, ನೀವೊಂದು ಪಾರ್ಟಿಯಲ್ಲಿದ್ದೀರ ಹಾಗೂ ನಿಮ್ಮ ಫೋಟೊಗಳು, ನಿಮ್ಮ ಸ್ನೇಹಿತರದು ಮತ್ತು ಇಡೀ ಪಾರ್ಟಿಯ ಫೋಟೊಗಳನ್ನು ತೆಗೆಯಲು ನಿಮ್ಮ ಫೋನ್‌ ಬಳಸುವುದಾಗಿ ಯಾರೋ ಒಬ್ಬರು ಕೇಳುತ್ತಾರೆ. ಬೇರೆಯವರ ಕೈಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಇದ್ದಾಗ, ಖಾಸಗಿ ಮಾಹಿತಿಗಳ ಕುರಿತು ನಿಮಗೆ ಚಿಂತೆ ಎದುರಾಗಬಹುದು.

'ನಾನು ಕಾಯುತ್ತಿರುವ ವಾಟ್ಸ್‌ಆ್ಯಪ್‌ ಸಂದೇಶವನ್ನು ಅವರೇನಾದರೂ ನೋಡಿಬಿಟ್ಟರೆ ಏನಪ್ಪಾ ಮಾಡುವುದು?' ಎಂಬ ಪ್ರಶ್ನೆಯಂತೂ ಬಹಳ ಸುಲಭವಾಗಿ ನಿಮ್ಮ ತಲೆಯೊಳಗೆ ಹೊಕ್ಕಿರುತ್ತದೆ.

ನೀವೇನಾದರೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಅಥವಾ ಗ್ಯಾಲಕ್ಸಿ ಎ71 ಬಳಸುತ್ತಿದ್ದರೆ, ಯೋಚಿಸುವ ಅಗತ್ಯವೇ ಇಲ್ಲ. ನೀವು ಬಹಳ ಸುಲಭವಾಗಿ ಕ್ವಿಕ್‌ ಸ್ವಿಚ್‌ ಫೀಚರ್‌ ಬಳಸಿಬಿಡಬಹುದು.

ಬಳಸುವ ಯಾವುದೇ ಆ್ಯಪ್‌ನ ಖಾಸಗಿ ಸ್ಕ್ರೀನ್‌ನಿಂದ ಎಲ್ಲರಿಗೂ ಕಾಣಿಸಬಹುದಾದ ಪುಟಕ್ಕೆ ಕ್ಷಣಾರ್ಧದಲ್ಲಿ ಬದಲಾಯಿಸಿಕೊಳ್ಳಲು ಕ್ವಿಕ್‌ ಸ್ವಿಚ್‌ ಸೌಲಭ್ಯ ಸಹಕಾರಿಯಾಗಿದೆ. ಗ್ಯಾಲರಿ, ಬ್ರೌಸರ್‌ ಅಥವಾ ವಾಟ್ಸ್‌ಆ್ಯಪ್‌, ಇನ್ನಾವುದೇ ನಿಮ್ಮ ನೆಚ್ಚಿನ ಆ್ಯಪ್‌ ಆಗಲೀ, ತಕ್ಷಣವೇ ಸ್ವಿಚ್‌ ಆಗಲು ಪವರ್‌ ಬಟನ್‌ ಎರಡು ಬಾರಿ ಕ್ಲಿಕ್‌ ಮಾಡಿದರೆ ಸಾಕು.

ಇದೊಂದು ವಿಸ್ಮಯದಂತೆ ಕೇಳುತ್ತಿದೆಯೇ? ಅದು ಹೌದು! ಇದೊಂದು ಅತ್ಯದ್ಭುತವಾದ ಸೌಲಭ್ಯವಾಗಿದೆ.

ನಟರಾದ ರಾಧಿಕಾ ಮದನ್‌ ಮತ್ತು ಸನ್ನಿ ಸಿಂಗ್‌ ನಟಿಸಿರುವ ಈ ವಿಡಿಯೊ ನೋಡಿ. ಸನ್ನಿ ಇಲ್ಲಿ ರಾಧಿಕಾಳ ಪ್ರಿಯಕರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೈಬ್ರರಿಯಲ್ಲಿ ತನ್ನ ಗೆಳತಿಯನ್ನು ಭೇಟಿ ಮಾಡಲು ಬರುತ್ತಾರೆ. ಆದರೆ, ಅದೇ ಸಮಯದಲ್ಲಿ ರಾಧಿಕಾ, ತನ್ನ ಹುಟ್ಟಿದ ದಿನದ ಆಚರಣೆಗಾಗಿಯೇ ಸರ್ಪ್ರೈಸ್‌ ಪಾರ್ಟಿಗಾಗಿ ಯೋಜನೆ ರೂಪಿಸುತ್ತಿರುವುದು ಅವರಿಗೆ ತಿಳಿದಿರುವುದಿಲ್ಲ.

ಇನ್ನೇನು  ಗೆಳತಿಯ ಫೋನ್‌ ನೋಡಬೇಕು, ಅಷ್ಟರಲ್ಲಿ ರಾಧಿಕಾ 'ಕ್ವಿಕ್‌ ಸ್ವಿಚ್' ಬಳಸುತ್ತಾರೆ. ಮುಂದೆ ಏನಾಗುತ್ತದೆ, ತಿಳಿಯಲು ಈ ವಿಡಿಯೊ ನೋಡಿ.

ಈ ಫೀಚರ್‌ಗೆ ಚಾಲನೆ ನೀಡುವುದು ಹೇಗೆಂದು ತಿಳಿಯಲು, ಕೆಳಗಿನ ಈ ವಿಡಿಯೊ ನೋಡಿ.

 

 

ಇದರೊಂದಿಗೆ ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಸೌಲಭ್ಯವೂ ಇದೆ. ಫೋನ್‌ನೊಂದಿಗೆ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ(ಎಐ) ವ್ಯವಸ್ಥೆಯು ಖಾಸಗಿಯಾಗಿ ಉಳಿಸಬೇಕಾದ ಫೋಟೊಗಳ ಕುರಿತು ಸಲಹೆ ನೀಡುತ್ತದೆ. ನೀವು ಮಾಡಬೇಕಾಗಿದ್ದು, ಸೆಕ್ಯೂರ್‌ ಫೋಲ್ಡರ್‌ಗೆ (ಸ್ಯಾಮ್‌ಸಂಗ್‌ ನಾಕ್ಸ್‌ನಿಂದ ಸುರಕ್ಷಿತ) ರವಾನಿಸಬೇಕಾದ ಫೋಟೊಗಳಿಗಾಗಿ ಜನರ ಮುಖಗಳು ಮತ್ತು ವಸ್ತುಗಳನ್ನು ನಿಗದಿ ಪಡಿಸಿದರೆ ಸಾಕು. ಉಳಿದ ಎಲ್ಲ ಕೆಲಸವನ್ನೂ ಎಐ ನೋಡಿಕೊಳ್ಳುತ್ತದೆ. ಅರೆ ವ್ಹಾ! ಇದು ಅಷ್ಟೇ ಸುಲಭ!

ಈ ಸೌಲಭ್ಯಕ್ಕೆ ಚಾಲನೆ ನೀಡುವುದು ಹೇಗೆಂದು ತಿಳಿಯಲು ಈ ಕೆಳಗಿನ ವಿಡಿಯೊ ನೋಡಿ.

 

 

ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ನಿಮ್ಮ ಗ್ಯಾಲರಿಯನ್ನು ತೆರೆದು ನೋಡಬಹುದು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಒಡಹುಟ್ಟಿದವರಿಗೆ ಅಥವಾ ಸಂಬಂಧಿಗೆ ನೋಡಲು ಕೊಡಬಹುದು. ಈ ಎಲ್ಲವನ್ನೂ ನೀವೀಗ ವಿಶ್ವಾಸದಿಂದಲೇ ಮಾಡಬಹುದು.

ಈ ಸೌಲಭ್ಯಗಳಿಂದಾಗಿ ನೀವೀಗ ಯಾವುದೇ ಒತ್ತಡವಿರದೆ ಆಲ್ಟ್‌ ಝಡ್‌ ಲೈಫ್‌ ಅನುಭವಿಸಬಹುದು. ಆಲ್ಟ್‌ ಝಡ್‌ ಲೈಫ್‌ ಎಂದರೆ, ಎಲ್ಲ ಸಂದರ್ಭಗಳಲ್ಲಿಯೂ ಖಾಸಗಿತನದ ಸುರಕ್ಷತೆಯೇ ಆದ್ಯತೆಯಾಗಿರುತ್ತದೆ. ಒಟ್ಟಾರೆ ನಿಮ್ಮ ಖಾಸಗಿ ಬದುಕು ಸದಾ ಖಾಸಗಿಯಾಗಿಯೇ ಉಳಿಯುವಂತಾಗಬೇಕು.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಪ್ಯಾಕೇಜ್‌ ಡೀಲ್‌ಗಳು

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸಾಧನಗಳು ಪೂರ್ಣ ಪ್ರಮಾಣದಲ್ಲಿ ಆಲ್‌–ರೌಂಡರ್‌ಗಳು. ಊಹಿಸಿ ಏಕೆಂದು? ಮುಂಭಾಗದಲ್ಲಿ ಸ್ಕ್ರೀನ್ ಮತ್ತು ಫೋನ್‌ ಫ್ರೇಮ್‌ನ ನಡುವಿನ ತೆಳುವಾದ, (ರೇಜರ್‌–ಥಿನ್‌) ಬೆಜೆಲ್ಸ್ ಜೊತೆಗೆ ಸೆಲ್ಫಿ ಕ್ಯಾಮೆರಾಕ್ಕಾಗಿ ಹೋಲ್‌–ಪಂಚ್‌ ಕಟ್‌ಔಟ್‌ ನೀಡಲಾಗಿದೆ. ಅಷ್ಟೇ ಅಲ್ಲ. ಉತ್ಕೃತಷ್ಟವಾದ ಡಿಸ್‌ಪ್ಲೇ, ದೀರ್ಘಕಾಲ ಚಾರ್ಜ್‌ ಉಳಿಯುವ ಬ್ಯಾಟರಿ ಹಾಗೂ ನಾಲ್ಕು ಕ್ಯಾಮೆರಾ (ಕ್ವಾಡ್‌ ಕ್ಯಾಮೆರಾ) ಸೆಟ್‌ಅಪ್‌, ಇದರೊಂದಿಗೆ ಇನ್ನೇನು ತಾನೇ ಕೇಳುತ್ತಾರೆ?

ಗ್ಯಾಲಕ್ಸಿ ಎ71 ಫೋನ್‌ 6.7 ಇಂಚು ಸೂಪರ್‌ ಅಮೋಲೆಡ್‌ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ, ಎ51 ಮಾದರಿಯ ಫೋನ್‌ನಲ್ಲಿ 6.5 ಇಂಚು ಸೂಪರ್‌ ಅಮೋಲೆಡ್‌ ಫುಲ್‌ ಎಚ್‌ಡಿ+ ಡಿಸ್‌ಪ್ಲೇ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿರುವ ನಾಲ್ಕು ಕ್ಯಾಮೆರಾ (ಕ್ವಾಡ್‌ ಕ್ಯಾಮೆರಾ) ಸೆಟ್‌ಅಪ್‌ ಅತ್ಯದ್ಭುತವಾಗಿದೆ.

ಗ್ಯಾಲಕ್ಸಿ ಎ71 ಫೋನ್‌ನಲ್ಲಿ 64 ಮೆಗಾಪಿಕ್ಸೆಲ್‌ ಲೆನ್ಸ್‌, 12 ಮೆಗಾಪಿಕ್ಸೆಲ್‌ ಅಲ್ಟ್ರಾ–ವೈಡ್‌ ಲೆನ್ಸ್‌ ಜೊತೆಗೆ 123 ಡಿಗ್ರಿ ವೀಕ್ಷಣೆ ಕೋನ, 5 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹಾಗೂ 5 ಮೆಗಾಪಿಕ್ಸೆಲ್‌ ಮ್ಯಾಕ್ರೊ ಕ್ಯಾಮೆರಾ ಇದೆ. ನಿಮಗೆ ಕ್ಲೋಸ್‌–ಅಪ್‌ ಶಾಟ್‌ ಬೇಕೆ, ಇಲ್ಲವೇ ಪೋರ್ಟ್ರೇಟ್‌ ಶಾಟ್‌ ಅಥವಾ ನಿಮ್ಮ ಮುಂದಿರುವ ಸುಂದರವಾದ ವಿಶಾಲವಾದ ಸ್ಥಳದ ಅಲ್ಟ್ರಾ–ವೈಡ್‌ ಶಾಟ್‌ ಬೇಕಿದೆಯೇ, ಗ್ಯಾಲಕ್ಸಿ ಎ71 ಫೋನ್‌ನಲ್ಲಿರುವ ವಿವಿಧ ಬಗೆಯ ಕ್ಯಾಮೆರಾಗಳು ನಿಮ್ಮೆಲ್ಲ ಶಾಟ್‌ಗಳಿಗೆ ಮೋಸ ಆಗದಂತೆ ಮಾಡುತ್ತವೆ.

ಇನ್ನೂ ಗ್ಯಾಲಕ್ಸಿ ಎ51 ಫೋನ್‌ನಲ್ಲಿ 48 ಮೆಗಾಪಿಕ್ಸೆಲ್‌ ಪ್ರೈಮರಿ ಸೆನ್ಸರ್‌, 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಲೆನ್ಸ್‌, 5 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹಾಗೂ 5 ಮೆಗಾಪಿಕ್ಸೆಲ್‌ ಮ್ಯಾಕ್ರೊ ಲೆನ್ಸ್‌ ಅಳವಡಿಸಲಾಗಿದೆ.

ಈ ಎರಡೂ ಮಾದರಿಯ ಫೋನ್‌ಗಳು 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿವೆ.

ಈ ಕ್ವಾಡ್‌–ಕ್ಯಾಮೆರಾ ಸೆಟ್‌ಅಪ್‌ಗಳಿಂದಾಗಿ ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಗೆ ಅಪ್‌ಲೋಡ್‌ ಮಾಡುವ ಚಿತ್ರಗಳ ಫೀಡ್‌ಗಳಂತೂ ಹೊಸ ಮಜಲನ್ನು ಮುಟ್ಟುತ್ತವೆ.

ಇತ್ತೀಚಿನ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳಿಂದ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ ಸೌಲಭ್ಯಗಳು ಸೇರ್ಪಡೆಯಾಗಿವೆ. ಸಿಂಗಲ್‌ ಟೇಕ್‌, ನೈಟ್ ಹೈಪರ್‌ಲ್ಯಾಪ್ಸ್, ಕಸ್ಟಮ್‌ ಫಿಲ್ಟರ್ಸ್‌, ರೆಕಾರ್ಡಿಂಗ್‌ ಮಾಡುವಾಗ ಕ್ಯಾಮೆರಾ ಸ್ವಿಚ್‌ ಮಾಡುವುದು, ಕ್ವಿಕ್‌ ವಿಡಿಯೊ, ಸ್ಮಾರ್ಟ್ ಸೆಲ್ಫಿ ಹಾಗೂ ಎಐ ಗ್ಯಾಲರಿ ಜೂಮ್‌ ಸೌಲಭ್ಯಗಳಿವೆ.

ಆಲ್ಟ್‌ ಝಡ್‌ ಲೈಫ್‌ಗಾಗಿ ಎಲ್ಲವೂ ಸಜ್ಜಾಗಿದೆ

ಗ್ಯಾಲಕ್ಸಿ ಎ71 ಮತ್ತು ಎ51 ಸ್ಮಾರ್ಟ್‌ಫೋನ್‌ಗಳಲ್ಲಿ ಉದ್ಯಮದ ಮೊಟ್ಟಮೊದಲ ಅತ್ಯಾಧುನಿಕ ಫೀಚರ್‌ಗಳು ಸೇರ್ಪಡೆಯಾಗಿವೆ. ಈ ಎಲ್ಲದರೊಂದಿಗೆ ಎರಡೂ ಮಾದರಿಯ ಫೋನ್‌ಗಳು ಗಮನ ಸೆಳೆಯುವಂತಹ ಸಾಧನಗಳಾಗಿವೆ.

ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ಗಳಿಂದ ನೀವು ಆಲ್ಟ್‌ ಝಡ್‌ ಲೈಫ್‌ ಅನುಭವಿಸುವಿರಿ, ಅಲ್ಲಿ ಖಾಸಗಿತನದ ಸುರಕ್ಷತೆ ನಿಮ್ಮ ಕೈಯಲ್ಲೇ  ಇರುತ್ತದೆ. ನೀವು ಸಂಚಾರ ಮಾಡುತ್ತಿರಿ, ಪಾರ್ಟಿಯಲ್ಲಿರಿ ಅಥವಾ ಕುಟುಂಬದ ಸದಸ್ಯರೊಂದಿಗೆ ಸುಮ್ಮನೆ ಕುಳಿತಿರಿ, ಈ ಫೋನ್‌ಗಳ ಮೂಲಕ ನೀವು ಸಾಕಷ್ಟು ಖುಷಿಯನ್ನು ಕಂಡುಕೊಳ್ಳುವಿರಿ.

ನಾವಂತೂ ಸಜ್ಜಾಗಿದ್ದೇವೆ–ನೀವು?