ನವದೆಹಲಿ (ಪಿಟಿಐ): ದೇಶದ ತಯಾರಿಕಾ ವಲಯವು ಚೇತರಿಕೆ ಹಾದಿಯಲ್ಲಿ ಸಾಗಿದ್ದು, ಜೂನ್ ತಿಂಗಳ ಪ್ರಗತಿಯು ಮೂರು ತಿಂಗಳ ಗರಿಷ್ಠ ಮಟ್ಟದ್ದಾಗಿದೆ.

ತಯಾರಿಕಾ ವಲಯದಲ್ಲಿ ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ದೇಶದ ತಯಾರಿಕಾ ವಲಯದ ಪ್ರಗತಿ ಸೂಚಿಸುವ ‘ನಿಕೇಯ್ ಮತ್ತು ಮರ್ಕಿಟ್ ಇಂಡಿಯಾ ಸಂಸ್ಥೆಗಳು ತಿಳಿಸಿವೆ. ಮೇ ತಿಂಗಳಿನಲ್ಲಿ ಶೇ 50.7ರಷ್ಟಿದ್ದ ತಯಾರಿಕಾ ವಲಯದ ಪ್ರಗತಿ ಜೂನ್ ತಿಂಗಳಿಗೆ ಶೇ 51.7ಕ್ಕೆ ಏರಿಕೆಯಾಗಿದೆ.

ದೇಶಿ ಮಾರುಕಟ್ಟೆಯು ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವುದು ಮುಂದುವರೆಯಲಿದೆ. ಜೂನ್ ತಿಂಗಳಿನಲ್ಲಿ ದೇಶದ ಉತ್ಪನ್ನಗಳಿಗೆ ವಿದೇಶದಿಂದ ಬೇಡಿಕೆ ಹೆಚ್ಚಾಗಿದೆ.

ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪೂರ್ಣ ಚೇತರಿಸಿಕೊಂಡಿಲ್ಲವಾದ್ದರಿಂದ ದೇಶದ ತಯಾರಕರಿಗೆ ಸಮಸ್ಯೆಯಾಗಿದೆ ಎಂದು ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರಜ್ಞ ಪಾಲಿಯನ್ ಡಿ. ಲಿಮಾ ಹೇಳಿದ್ದಾರೆ. ಬಂಡವಾಳ ಹೂಡಿಕೆಗೆ ಇನ್ನಷ್ಟು ಉತ್ತೇಜನ ನೀಡಲು ಆರ್ಬಿಐ ಇಳಿಕೆ ಮಾಡುವ ವಿಶ್ವಾಸವಿದೆ ಎಂದು ಕೈಗಾರಿಕಾ ವಲಯ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.