ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union budget: ಚೇತರಿಕೆಯ ನಿರೀಕ್ಷೆಯಲ್ಲಿ ಷೇರು ಮಾರುಕಟ್ಟೆ

Last Updated 1 ಫೆಬ್ರುವರಿ 2021, 3:54 IST
ಅಕ್ಷರ ಗಾತ್ರ

ಮುಂಬಯಿ: ದೇಶದ ಚಿತ್ತ ಸೋಮವಾರ ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ ಮತ್ತು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಎಲ್ಲಿ ಲಭ್ಯವಾಗಲಿದೆ ಎನ್ನುವ ಕುರಿತು ಜನಸಾಮಾನ್ಯರಿಂದ ತೊಡಗಿ, ಷೇರುಪೇಟೆಯ ಹೂಡಿಕೆದಾರರು ಕೂಡ ಅಧಿಕ ನಿರೀಕ್ಷೆ ಹೊಂದಿದ್ದಾರೆ.

ಅಲ್ಲದೆ, ಕೋವಿಡ್ 19 ಹಾವಳಿಯಿಂದ ತೊಂದರೆಗೊಳಗಾಗಿರುವ ಹಣಕಾಸು ಮತ್ತು ಉದ್ಯಮ ವಲಯ ಕೂಡ ಚೇತರಿಕೆಯ ನಿರೀಕ್ಷೆಯಲ್ಲಿದ್ದು, ವಿವಿಧ ಆರ್ಥಿಕ ಉತ್ತೇಜನ ಕ್ರಮಗಳು, ಪ್ಯಾಕೇಜ್ ಬಯಸುತ್ತಿದೆ. ಷೇರುಪೇಟೆ ಕೂಡ ಇತ್ತೀಚೆಗೆ ಇದೇ ಮೊದಲ ಬಾರಿಗೆ 50,000 ಗಡಿದಾಟಿದ್ದು, ಮತ್ತೆ ಕರಡಿ ಕುಣಿತಕ್ಕೆ ಸಿಲುಕಿದೆ.

ಉದ್ಯಮ ಬೆಳವಣಿಗೆಗೆ ಹೇಗೆ ಪ್ಯಾಕೇಜ್ ಅಗತ್ಯವೋ, ಅದಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಘೋಷಿಸಲಾಗುವ ಅನುದಾನ, ಉತ್ತೇಜನಕಾರಿ ಕ್ರಮಗಳು ಕೂಡ ಷೇರುಪೇಟೆ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ.

ಪ್ರಮುಖವಾಗಿ ಆರೋಗ್ಯ ಕ್ಷೇತ್ರ, ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ, ರಿಯಲ್ ಎಸ್ಟೇಟ್ ಕ್ಷೇತ್ರ ಚೇತರಿಕೆಗೆ ಬಜೆಟ್ ನೆರವಾಗಲಿದೆ ಎನ್ನುವ ವಿಶ್ವಾಸ ಮಾರುಕಟ್ಟೆಯಲ್ಲಿ ಮೂಡಿದೆ. ಹೀಗಾಗಿ ಬ್ಯಾಂಕಿಂಗ್, ಫೈನಾನ್ಸ್ ಕ್ಷೇತ್ರದ ಷೇರುಗಳು ಕೂಡ ಬಜೆಟ್ ಮಂಡನೆಗೆ ಕಾಯುತ್ತಿವೆ. ವಿತ್ತ ಸಚಿವರು ವಿಶೇಷ ಗಮನ ಹರಿಸಿ, ಸೂಕ್ತ ಕ್ರಮಗಳನ್ನು ಘೋಷಿಸಿದರೆ ತೈಲ, ಇಂಧನ, ಗ್ಯಾಸ್ ಕ್ಷೇತ್ರದ ಹೂಡಿಕೆ, ವಹಿವಾಟು ಕೂಡ ಉತ್ತಮ ಏರಿಕೆ ಕಾಣಲಿದೆ. ಹೀಗಾಗಿ ಮಾರುಕಟ್ಟೆಯ ಚಿತ್ತ ಕೇಂದ್ರ ಬಜೆಟ್‌ನತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT