ನವದೆಹಲಿ: 2025–26ನೇ ಸಾಲಿನ ಕೇಂದ್ರ ಬಜೆಟ್ಅನ್ನು ಇದೇ ಫೆ.1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ.

ವರದಿಗಳ ಪ್ರಕಾರ, ವಾರ್ಷಿಕ ₹15 ಲಕ್ಷದವರೆಗೆ ಆದಾಯ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ನಿರೀಕ್ಷೆಯಿದೆ.

ಸರ್ಕಾರವು ತನ್ನ ವೆಚ್ಚದ ಅವಶ್ಯಕತೆಗಳನ್ನು ಪೂರೈಸಲು, ಹಣಕಾಸಿನ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ಸಾಲವನ್ನು ಪಡೆಯುತ್ತದೆ. ಇದನ್ನು ಸರ್ಕಾರಿ ಸಾಲ ಎಂದು ಕರೆಯಲಾಗುತ್ತದೆ. G-secs ಮತ್ತು ಟ್ರೆಜರಿ ಬಿಲ್ (ಸರ್ಕಾರಿ ಹುಂಡಿ) ಎಂಬ ಸರ್ಕಾರಿ ಭದ್ರತೆಗಳ ವಿತರಣೆಯ ಮೂಲಕ ಸರ್ಕಾರವು ಸಾಲ ಪಡೆಯುತ್ತದೆ.

ತೆರಿಗೆಗಳು ಮತ್ತು ಇತರ ಮೂಲಗಳಿಂದ ಉತ್ಪತ್ತಿಯಾಗುವ ಆದಾಯವು ಸರ್ಕಾರದ ಬಜೆಟ್ನಲ್ಲಿ ವಿವರಿಸಿರುವ ವೆಚ್ಚಗಳನ್ನು ಸರಿದೂಗಿಸಲು ಕಡಿಮೆಯಾದಾಗ ಸಾಲದ ಅಗತ್ಯತೆ ಉದ್ಭವಿಸುತ್ತದೆ. ಹೀಗಾಗಿ ಈ ಹಣಕಾಸಿನ ಅಂತರವನ್ನು ಕಡಿಮೆ ಮಾಡಲು ಸರ್ಕಾರವು ತನ್ನ ಬಜೆಟ್ನಲ್ಲಿ ವಾರ್ಷಿಕ ಸಾಲ ಪಡೆಯುವ ಕಾರ್ಯಕ್ರಮವನ್ನು ಘೋಷಿಸುತ್ತದೆ.

ಹಾಗಾದರೆ ಸರ್ಕಾರ ಯಾವೆಲ್ಲ ಮೂಲಗಳಿಂದ ಸಾಲ ಪಡೆಯಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಸರ್ಕಾರವು ಮಾರುಕಟ್ಟೆ ಸಾಲ, ಸಣ್ಣ ಉಳಿತಾಯ ನಿಧಿಗಳು, ರಾಜ್ಯಗಳ ಭವಿಷ್ಯ ನಿಧಿ, ಬಾಹ್ಯ ನೆರವು ಮತ್ತು ಅಲ್ಪಾವಧಿಯ ಸಾಲಗಳಿಂದ ಹಣಕಾಸಿನ ನೆರವು ಪಡೆಯುತ್ತದೆ.

ಸಾಲ ಪಡೆಯುವುದರಿಂದ ಆರ್ಥಿಕ ಪೆಟ್ಟು?

ಸರ್ಕಾರ ಸಾಲ ಪಡೆಯುವುದರಿಂದ ದೇಶದ ಆರ್ಥಿಕತೆಯ ಮೇಲೆ ಎರಡು ರೀತಿಯ ಪರಿಣಾಮ ಬೀರುತ್ತದೆ.

ಮೊದಲನೆಯದು, ಸರ್ಕಾರ ವಿವಿಧ ಮಾರುಕಟ್ಟೆಯಿಂದ ಸಾಲ ಪಡೆದರೆ ಖಾಸಗಿ ವಲಯ ಮತ್ತು ಕಾರ್ಪೋರೇಟ್ ವಲಯಗಳಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಕಡಿಮೆ ಅವಕಾಶಗಳು ಸಿಗಲಿದೆ.

ಎರಡನೆಯದಾಗಿ, ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದರೆ ಮಾರುಕಟ್ಟೆಯಲ್ಲಿನ ಎಲ್ಲಾ ಇತರ ಸಾಲಗಾರರ ಬಡ್ಡಿದರ ಹೆಚ್ಚಲಿದೆ. ಪರಿಣಾಮವಾಗಿ ಆರ್ಥಿಕತೆಯಲ್ಲಿ ಹೂಡಿಕೆಯ ದರವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.