ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ 2022: ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಮ ವರ್ಗದ ಮೀಮ್ಸ್‌ ಅಬ್ಬರ

Last Updated 1 ಫೆಬ್ರುವರಿ 2022, 10:16 IST
ಅಕ್ಷರ ಗಾತ್ರ

ಬೆಂಗಳೂರು: 2022-23ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಘೋಷಣೆಯಾಗಿಲ್ಲ ಹಾಗೂ ಮಧ್ಯಮ ವರ್ಗದವರಿಗೆ ಹಣ ಉಳಿತಾಯಕ್ಕೆ ಅನುವಾಗುವ ಯಾವುದೇ ಕೊಡುಗೆಗಳೂ ಪ್ರಕಟಗೊಂಡಿಲ್ಲ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಮ ವರ್ಗಗಳ ಮೀಮ್ಸ್‌ ಹರಿದಾಡುತ್ತಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿರುವ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಘೋಷಿಸಲಿಲ್ಲ. ಬಜೆಟ್‌ ಪೂರ್ವದಲ್ಲಿ ತೆರಿಗೆ ಮಿತಿಯಲ್ಲಿ ಕೆಲವು ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು ಹಾಗೂ ಕೋವಿಡ್‌ನಿಂದಾಗಿ ಸಂಕಷ್ಟ ಎದುರಿಸಿದವರಿಗೆ ಪರಿಹಾರವಾಗಿಯೂ ಕೆಲವು ಘೋಷಣೆಗಳನ್ನು ಎದುರು ನೋಡಲಾಗಿತ್ತು. ಬಜೆಟ್‌ನಲ್ಲಿ ಅದಾವುದನ್ನೂ ಕಾಣದ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಸಹಿತ ವ್ಯಂಗ್ಯದ ಸಾಲುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ವಿಟರ್‌ನಲ್ಲಿ #Budget2022 ಮತ್ತು #IncomeTax ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡ್‌ ಆಗಿವೆ. ಅದರೊಂದಿಗೆ ಮಧ್ಯಮ ವರ್ಗ (Middle Class) ಎಂಬ ಸಾಲಿರುವ ಮೀಮ್ಸ್‌ ಸಹ ಟ್ರೆಂಡ್‌ ಆಗಿವೆ.

'ಬಜೆಟ್‌ ಆರಂಭದಿಂದ ಕೊನೆಯವರೆಗೂ ಬಾಯಿ ತೆರೆದು ನೋಡುತ್ತಿರುವಂತೆ, ಪ್ರತಿ ವರ್ಷದ ಬಜೆಟ್‌ನಲ್ಲೂ ಮಧ್ಯಮ ವರ್ಗದವರ ನಿರೀಕ್ಷೆ, ಉಳಿತಾಯ ಮತ್ತು ಮಧ್ಯಮ ವರ್ಗ, ಬಜೆಟ್‌ ಘೋಷಣೆಯ ಕೊನೆಗೆ ಮಧ್ಯಮ ವರ್ಗದವರ ಸ್ಥಿತಿ,...' ಹೀಗೆ ಹತ್ತು ಹಲವು ರೀತಿಯ ಮೀಮ್‌ಗಳನ್ನು ಕಾಣಬಹುದು.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಆಗಿರುವ ಲೋಪವನ್ನು ಸರಿಪಡಿಸಿ, ನವೀಕೃತ ರಿಟರ್ನ್ಸ್ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ 10ರಿಂದ ಶೇ 14ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ರೂಪಿಸಲು ಸಹಾಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT