ಈಗ ಇರುವ ಕೆಲಸಕ್ಕಿಂತ ಉತ್ತಮ ವೇತನ ಇರುವ ಮತ್ತೊಂದು ಕೆಲಸ ಸಿಕ್ಕಿದರೆ ಉದ್ಯೋಗಿಗಳು ಖುಷಿಯ ಅಲೆಯಲ್ಲಿ ತೇಲುತ್ತಾರೆ. ಆದರೆ ಹೊಸ ಕೆಲಸ ಸಿಕ್ಕಿದೆ, ಸಂಬಳವೂ ಹೆಚ್ಚಾಗಿದೆ ಎನ್ನುವ ಖುಷಿಯಲ್ಲಿ ತೆರಿಗೆ ನಿರ್ವಹಣೆ, ವಿಮೆ ಖಾತರಿ, ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ವರ್ಗಾವಣೆ, ಸಾಲ ನಿರ್ವಹಣೆಯಂತಹ ಪ್ರಮುಖ ವಿಚಾರವನ್ನು ಮರೆತು ಬಿಡುತ್ತಾರೆ. ಬನ್ನಿ, ಉದ್ಯೋಗ ಬದಲಿಸುವಾಗ ಯಾವೆಲ್ಲಾ ಅಂಶಗಳು ಗಮನದಲ್ಲಿ ಇರಬೇಕು ಎಂಬ ಬಗ್ಗೆ ತಿಳಿಯೋಣ.

ತೆರಿಗೆ ನಿರ್ವಹಣೆ ಮರೆಯಬೇಡಿ: ಕೆಲಸ ಬದಲಾಯಿಸಿದಾಗ ನಿಮ್ಮ ಹೊಸ ಉದ್ಯೋಗದಾತ ಸಂಸ್ಥೆಗೆ ಹಳೆಯ ಕಂಪನಿಯಲ್ಲಿ ಎಷ್ಟು ತೆರಿಗೆ ಕಡಿತ ಮಾಡುತ್ತಿದ್ದರು ಎನ್ನುವ ವಿವರ ಒದಗಿಸಿ. ಈ ಮಾಹಿತಿ ಕೊಡದಿದ್ದರೆ ಹೊಸ ಉದ್ಯೋಗದಾತ ಸಂಸ್ಥೆಯು ಅಗತ್ಯಕ್ಕಿಂತ ಹೆಚ್ಚಿನ ತೆರಿಗೆ ಕಡಿತ ಮಾಡಲು ಮುಂದಾಗಬಹುದು. ಕೆಲಸ ಬದಲಾಯಿಸಿದಾಗ ಸಂಬಳವೂ ಹೆಚ್ಚಳವಾಗಿರುತ್ತದೆ. ಈ ವೇಳೆ ಹಳೆಯ ವೇತನ ಎಷ್ಟಿತ್ತು? ಅದಕ್ಕೆ ತಕ್ಕಂತೆ ಪಾವತಿಸುತ್ತಿದ್ದ ಆದಾಯ ತೆರಿಗೆ ಎಷ್ಟು? ಎನ್ನುವ ವಿವರ ಒದಗಿಸುವುದು ಅತ್ಯಗತ್ಯ.

ಈ ಮಾಹಿತಿ ಸಿಕ್ಕಾಗ ನಿಮ್ಮ ವೇತನಕ್ಕೆ ತಕ್ಕಂತೆ ಪ್ರಸ್ತುತ ಉದ್ಯೋಗದಾತ ಸಂಸ್ಥೆಯು ತೆರಿಗೆ ಕಡಿತ ಮಾಡುತ್ತದೆ. ತೆರಿಗೆ ಕಡಿತವು ನಿಮ್ಮ ಆದಾಯಕ್ಕೆ ತಕ್ಕಂತೆ ಆಗುತ್ತಿದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ಫಾರಂ 12ಬಿ ಅನ್ನು ಭರ್ತಿ ಮಾಡಿಕೊಡಿ. ಇಲ್ಲದಿದ್ದರೆ ನಿಮ್ಮ ಹಿಂದಿನ ಸಂಸ್ಥೆಯ ಸ್ಯಾಲರಿ ಸ್ಲಿಪ್ (ವೇತನ ಚೀಟಿ) ಕೊಡಿ. ಕೆಲಸ ಬದಲಾಯಿಸಿದಾಗ ಹಳೆಯ ಸಂಸ್ಥೆಯಿಂದ ಮತ್ತು ಹೊಸ ಸಂಸ್ಥೆಯಿಂದ ನಿಮ್ಮ ಫಾರಂ 16 ಪಡೆದುಕೊಳ್ಳುವುದನ್ನು ಮರೆಯದಿರಿ.

ಫಾರಂ 16 ಇದ್ದರೆ ಆದಾಯ ತೆರಿಗೆ ವಿವರ ಸಲ್ಲಿಕೆ ಸುಲಭ. ಇನ್ನು ವೇತನ ಹೆಚ್ಚಳವಾದಾಗ ತೆರಿಗೆ ಬಾಬ್ತು ಹೆಚ್ಚಾಗುತ್ತದೆ. ಆದಾಯ ತೆರಿಗೆ ಇಲಾಖೆ ನೀಡಿರುವ ವಿನಾಯಿತಿ ಬಳಸಿಕೊಂಡು ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಯೋಜಿಸಿ. ನಿಮ್ಮ ಮಾನವ ಸಂಪನ್ಮೂಲ ಅಧಿಕಾರಿ ಜೊತೆಗೆ ಮಾತನಾಡಿ. ಅಗತ್ಯವಿದ್ದರೆ ತೆರಿಗೆ ತಜ್ಞರ ನೆರವು ಪಡೆಯಿರಿ.

ಆರೋಗ್ಯ ವಿಮೆ ಕವರೇಜ್ ಬಗ್ಗೆ ಗಮನಕೊಡಿ: ಕೆಲಸ ಬದಲಾಯಿಸುವ ವೇಳೆ ಗಮನಿಸಿಕೊಳ್ಳಬೇಕಾದ ಪ್ರಮುಖ ವಿಚಾರ ಆರೋಗ್ಯ ವಿಮೆ. ಸಾಮಾನ್ಯವಾಗಿ ಬಹುತೇಕ ಕಂಪನಿಗಳು ಆರೋಗ್ಯ ವಿಮೆ ಕವರೇಜ್ ಒದಗಿಸಿರುತ್ತವೆ. ಆದರೆ, ಕೆಲಸ ಬದಲಿಸುವಾಗ ಹೊಸ ಕಂಪನಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸೂಕ್ತ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳಿ. ಒಂದೊಮ್ಮೆ ಹೊಸ ಕಂಪನಿಯಲ್ಲಿ ಉತ್ತಮ ಕವರೇಜ್ ಸಿಗುತ್ತಿಲ್ಲ ಎನ್ನುವುದು ಗಮನಕ್ಕೆ ಬಂದರೆ ನಿಮ್ಮ ವೈಯಕ್ತಿಕ ಆರೋಗ್ಯ ವಿಮೆಯ ಕವರೇಜ್ ಮೊತ್ತವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.

ಇಪಿಎಫ್ ನಗದೀಕರಣ ಬೇಡ: ಕೆಲಸ ಬದಲಾಯಿಸುವಾಗ ಕಾರ್ಮಿಕರ ಭವಿಷ್ಯ ನಿಧಿಯ ಬಾಕಿ ಮೊತ್ತವನ್ನು ನಗದೀಕರಣ ಮಾಡಬೇಡಿ. ಬದಲಿಗೆ ಹೊಸ ಖಾತೆಗೆ ಅದನ್ನು ವರ್ಗಾಯಿಸಿಕೊಳ್ಳಿ. ಇಪಿಎಫ್ ವರ್ಗಾವಣೆ ಸುಗಮಗೊಳಿಸಿಕೊಳ್ಳಲು ನಿಮ್ಮ ಯುಎಎನ್ ನಂಬರ್ ನೀಡಿ. ಕೆಲಸ ಬದಲಾಯಿಸಿದ ಸಂದರ್ಭದಲ್ಲೆಲ್ಲಾ ಕಾರ್ಮಿಕರ ಭವಿಷ್ಯ ನಿಧಿಯಲ್ಲಿರುವ ಮೊತ್ತವನ್ನು ಬಿಡಿಸಿಕೊಂಡರೆ ತೆರಿಗೆ ಹೊರೆ ಹೆಚ್ಚಾಗುವ ಜೊತೆಗೆ ನಿವೃತ್ತಿ ಜೀವನಕ್ಕೆ ಉಳಿತಾಯ ಇಲ್ಲವಾಗುತ್ತದೆ.

ಸಾಲ ನಿರ್ವಹಣೆ: ಕೆಲಸ ಬದಲಾಯಿಸಿದಾಗ ಸಿಗುವ ವೇತನ ಹೆಚ್ಚಳವನ್ನು ಹೆಚ್ಚು ಬಡ್ಡಿ ಇರುವ ಸಾಲ ತೀರಿಸಲು ಬಳಸಿಕೊಳ್ಳಿ. ಹೆಚ್ಚು ಬಡ್ಡಿ ಇರುವ ಸಾಲಗಳನ್ನು ತೀರಿಸಿದಾಗ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಒಂದೊಮ್ಮೆ ಯಾವುದೇ ಸಾಲ ಇಲ್ಲ ಎಂದಾದಲ್ಲಿ ಆದಾಯ ಹೆಚ್ಚಳದ ಮೊತ್ತವನ್ನು ತುರ್ತು ನಿಧಿ ನಿರ್ಮಿಸಿಕೊಳ್ಳಲು ಬಳಸಿ. ನಿಮ್ಮ ಮೂರರಿಂತ ಆರು ತಿಂಗಳ ಖರ್ಚಿನ ಬಾಬ್ತು ತುರ್ತು ನಿಧಿಯಲ್ಲಿ ಇದ್ದಾಗ ಧುತ್ತೆಂದು ಬರುವ ಆರ್ಥಿಕ ಖರ್ಚುಗಳನ್ನು ನಿಭಾಯಿಸುವುದು ಸುಲಭ.

ಖರ್ಚು ಹೆಚ್ಚಿಸಿಕೊಳ್ಳಬೇಡಿ: ಒಂದು ಕಂಪನಿ ತೊರೆದು ಮತ್ತೊಂದು ಕಂಪನಿಗೆ ಸೇರಿದಾಗ ಸಾಮಾನ್ಯವಾಗಿ ವೇತನ ಹೆಚ್ಚಳವಾಗುತ್ತದೆ. ಆದರೆ, ವೇತನ ಹೆಚ್ಚಳಕ್ಕೆ ತಕ್ಕಂತೆ ಜೀವನ ಮಟ್ಟವನ್ನು ಏರಿಸಿಕೊಳ್ಳಬೇಡಿ. ಜೀವನ ಶೈಲಿಯ ಖರ್ಚುಗಳನ್ನು ಹೆಚ್ಚಿಸಿಕೊಂಡಾಗ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಹೀಗಾದಾಗ ವೇತನ ಹೆಚ್ಚಿದರೂ ಉಳಿತಾಯ ಮತ್ತು ಹೂಡಿಕೆಯನ್ನು ಸುಧಾರಿಸಲು ಸಾಧ್ಯವಾಗುವುದಿಲ್ಲ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಸತತ 3ನೇ ವಾರ ಗಳಿಕೆ ಕಂಡ ಸೂಚ್ಯಂಕಗಳು

ಮೇ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ವಾರ ಗಳಿಕೆ ಕಂಡಿವೆ. 80501 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.63ರಷ್ಟು ಜಿಗಿದಿದೆ. 24346 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.28ರಷ್ಟು ಹೆಚ್ಚಳ ಕಂಡಿದೆ. ಇನ್ನು ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕ ಶೇ 0.25ರಷ್ಟು ಗಳಿಸಿಕೊಂಡಿದ್ದರೆ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 0.64ರಷ್ಟು ತಗ್ಗಿದೆ. ವಿದೇಶಿ ಹೂಡಿಕೆದಾರರಿಂದ ಖರೀದಿ ಉತ್ಸಾಹ ಅಮೆರಿಕ ಮತ್ತು ಭಾರತದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಫಲಪ್ರದವಾಗುವ ನಿರೀಕ್ಷೆ ರಿಲಯನ್ಸ್ ಹಾಗೂ ಕೆಲ ಕಂಪನಿಗಳ ತ್ರೈಮಾಸಿಕ ಸಾಧನೆ ಉತ್ತಮವಾಗಿರುವುದು ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ. ವಾರದ ಅಂದಾಜಿನಲ್ಲಿ ವಲಯವಾರು ಪ್ರಗತಿ ನೋಡಿದಾಗ ರಿಯಲ್ ಎಸ್ಟೇಟ್ ಶೇ 2.58 ಮಾಹಿತಿ ತಂತ್ರಜ್ಞಾನ ಶೇ 0.93 ಬ್ಯಾಂಕ್ ನಿಫ್ಟಿ ಶೇ 0.83 ಸೇವಾ ವಲಯ ಶೇ 0.69 ಫಾರ್ಮಾ ಶೇ 0.67 ಎನರ್ಜಿ ಶೇ 0.54 ಫೈನಾನ್ಸ್ ಶೇ 0.44 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.29ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಮಾಧ್ಯಮ ಶೇ 1.71 ಲೋಹ ಶೇ 0.6 ಎಫ್ಎಂಸಿಜಿ ಶೇ 0.5ರಷ್ಟು ಕುಸಿದಿವೆ. ಇಳಿಕೆ–ಗಳಿಕೆ: ವಾರದ ಲೆಕ್ಕಾಚಾರ ನೋಡಿದಾಗ ನಿಫ್ಟಿಯಲ್ಲಿ ಶ್ರೀರಾಮ್ ಫೈನಾನ್ಸ್ ಶೇ 7.91 ಜೆಎಸ್ಡಬ್ಲ್ಯು ಸ್ಟೀಲ್ ಶೇ 5.11 ಅಲ್ಟ್ರಾಟೆಕ್ ಸಿಮೆಂಟ್ ಶೇ 4.7 ಬಜಾಜ್ ಫಿನ್ಸರ್ವ್ ಶೇ 4.42 ಹೀರೊ ಮೋಟೊಕಾರ್ಪ್ ಶೇ 3.87 ನೆಸ್ಲೆ ಇಂಡಿಯಾ ಶೇ 3.21 ಬಜಾಜ್ ಫೈನಾನ್ಸ್ ಶೇ 2.73 ಬಜಾಜ್ ಆಟೊ ಶೇ 2.52 ಅದಾನಿ ಎಂಟರ್ ಪ್ರೈಸಸ್ ಶೇ 2.31 ಐಷರ್ ಮೋಟರ್ಸ್ ಶೇ 2.26 ಕೋಲ್ ಇಂಡಿಯಾ ಶೇ 2.11 ಎನ್ಟಿಪಿಸಿ ಶೇ 2.1ರಷ್ಟು ಕುಸಿದಿವೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ 9.38 ಅದಾನಿ ಪೋರ್ಟ್ಸ್ ಶೇ 6.28 ಮಾರುತಿ ಸುಜುಕಿ ಶೇ 6.19 ಭಾರತ್ ಎಲೆಕ್ಟ್ರಾನಿಕ್ಸ್ ಶೇ 4.66 ಎಸ್ಬಿಐ ಲೈಫ್ ಇನ್ಶೂರೆನ್ಸ್ ಶೇ 4.27 ಇಂಡಸ್ ಇಂಡ್ ಬ್ಯಾಂಕ್ ಶೇ 3.65 ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಶೇ 3.6 ಎಟರ್ನಲ್ ಲಿಮಿಟೆಡ್ ಶೇ 2.58 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 2.38 ಜಿಯೊ ಫೈನಾನ್ಶಿಯಲ್ ಶೇ 2.25 ಎಲ್ ಆ್ಯಂಡ್ ಟಿ ಶೇ 2.1 ಮತ್ತು ಏರ್ಟೆಲ್ ಶೇ 2.08ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಮಹೀಂದ್ರ ಆ್ಯಂಡ್ ಮಹೀಂದ್ರ ಸಿಎಎಂಎಸ್ ಜೀ ಮೀಡಿಯಾ ಬಾಂಬೆ ಡೈಯಿಂಗ್ ಬ್ಯಾಂಕ್ ಆಫ್ ಬರೋಡಾ ಪೇಟಿಎಂ ಪಾಲಿಕ್ಯಾಬ್ ಎಚ್ಪಿಸಿಎಲ್ ಬಿಎಸ್ಇ ಲಿಮಿಟೆಡ್ ಗೋದ್ರೇಜ್ ಕನ್ಸ್ಯೂಮರ್ ಪ್ರಾಡೆಕ್ಟ್ಸ್ ಕೋಲ್ ಇಂಡಿಯಾ ಡಾಬರ್ ಎಂಆರ್ಎಫ್ ಎಲ್ ಆ್ಯಂಡ್ ಟಿ ಟೈಟನ್ ಏಷ್ಯನ್ ಪೇಂಟ್ಸ್ ಪಿಡಿಲೈಟ್ ಇಂಡಸ್ಟ್ರೀಸ್ ಕೆನರಾ ಬ್ಯಾಂಕ್ ಕಲ್ಯಾಣ್ ಜುವೆಲರ್ಸ್ ಸ್ವಿಗ್ಗಿ ಬ್ಯಾಂಕ್ ಆಫ್ ಇಂಡಿಯಾ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ವರದಿ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.