ಸ್ವಂತ ಮನೆಯ ಕನಸು ನನಸಾಗುವ ಸಂಭ್ರಮದಲ್ಲಿ ಗೃಹಸಾಲದ ಒಪ್ಪಂದಕ್ಕೆ ಸಹಿ ಹಾಕುವಾಗ ನಾವು ಮಾಡುವ ಸಣ್ಣ ತಪ್ಪುಗಳು ಮುಂದಿನ ಹಲವು ವರ್ಷಗಳವರೆಗೆ ನಮ್ಮ ಜೇಬಿಗೆ ಕತ್ತರಿ ಹಾಕಬಹುದು. ಸಾಲ ಕೇಳಿದಾಗ ಬ್ಯಾಂಕ್ ವ್ಯವಸ್ಥಾಪಕರು ಕೊಡುವ ಆಶ್ವಾಸನೆಗಳೇ ಅಂತಿಮವಲ್ಲ. ಗೃಹಸಾಲದ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ನೀವು ಕೇಳಲೇಬೇಕಾದ ಐದು ಪ್ರಶ್ನೆಗಳು ಮತ್ತು ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಜಾಣ ದಾರಿಗಳು ಇಲ್ಲಿವೆ.

ವಿಮೆ ಕಡ್ಡಾಯವಲ್ಲ

ಅನೇಕ ಬ್ಯಾಂಕುಗಳು ಗೃಹಸಾಲ ನೀಡುವಾಗ ವಿಮೆ ಮಾಡಿಸುವುದು ಕಡ್ಡಾಯ ಎಂದು ಒತ್ತಾಯಿಸುತ್ತವೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಥವಾ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ನಿಯಮಗಳ ಪ್ರಕಾರ ಬ್ಯಾಂಕಿನಿಂದಲೇ ವಿಮೆ ಖರೀದಿಸಬೇಕು ಎಂಬ ನಿಯಮವಿಲ್ಲ. ಈ ಬಗ್ಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಬಿಐ ಕಚೇರಿಯಲ್ಲಿ ಇತ್ತೀಚೆಗಷ್ಟೇ ಮಾತನಾಡಿದ್ದಾರೆ. ಗೃಹ ಸಾಲ ಪಡೆದವರಿಗೆ ವಿಮೆ ಮಾಡಿಸಲು ಒತ್ತಾಯಿಸುವುದು ಮೋಸದ ಮಾರಾಟವಾ ಗುತ್ತದೆ ಎಂದು ಬ್ಯಾಂಕ್ಗಳಿಗೆ ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಬ್ಯಾಂಕ್ನಿಂದ ವಿಮೆ ಪಡೆದಾಗ ಅದರ ಕಂತು (ಪ್ರೀಮಿಯಂ) ಮೊತ್ತವನ್ನು (ಉದಾಹರಣೆಗೆ ₹2 ಲಕ್ಷ) ನಿಮ್ಮ ಸಾಲಕ್ಕೆ ಸೇರಿಸಲಾಗುತ್ತದೆ. ಇದರಿಂದ ನೀವು ಕೇವಲ ₹2 ಲಕ್ಷಕ್ಕೆ ಮಾತ್ರವಲ್ಲದೆ, ಅದರ ಮೇಲಿನ ಬಡ್ಡಿಯನ್ನೂ ಸೇರಿಸಿ ಒಟ್ಟು ₹5 ಲಕ್ಷದವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಹೀಗೆ ಗೃಹ ಸಾಲಕ್ಕೆ ಸಂಬಂಧಿಸಿದ ವಿಮೆ ಪಡೆಯುವ ಬದಲು ಹೊರಗಡೆ ಅವಧಿ ವಿಮೆ ಖರೀದಿಸುವುದು ಉತ್ತಮ ಆಯ್ಕೆ. ಏಕೆಂದರೆ ಮನೆಯ ಸಾಲ ತೀರಿಸಿದ ನಂತರವೂ ಅವಧಿ ವಿಮೆ ನಿಮ್ಮ ಕುಟುಂಬಕ್ಕೆ ಹಣಕಾಸಿನ ಭದ್ರತೆ ಒದಗಿಸುತ್ತದೆ.

2. ಬಡ್ಡಿ ದರ ನಿಮ್ಮ ಕೈಯಲ್ಲಿದೆ

ಹೆಚ್ಚಿನವರು ಗೃಹಸಾಲದ ಬಡ್ಡಿ ದರವನ್ನು ಬ್ಯಾಂಕ್ ಮಾತ್ರವೇ ನಿರ್ಧರಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ, ನಿಮ್ಮ ಆರ್ಥಿಕ ಶಿಸ್ತು ಕೂಡ ನಿಮ್ಮ ಸಾಲದ ಬಡ್ಡಿ ದರ ನಿರ್ಧರಿಸುತ್ತದೆ. ಗೃಹಸಾಲದ ಬಡ್ಡಿ ದರವು ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದನೆಯದ್ದು ರೆಪೊ ದರ, ಎರಡನೆಯದ್ದು ಸ್ಪ್ರೆಡ್. ರೆಪೊ ದರ ಅಂದರೆ ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇದು ಎಲ್ಲರಿಗೂ ಸಮನಾಗಿರುತ್ತದೆ. ಸ್ಪ್ರೆಡ್ ಅಂದರೆ, ಬ್ಯಾಂಕ್ಗಳು ತಮ್ಮ ನಿರ್ವಹಣಾ ವೆಚ್ಚ ಮತ್ತು ಲಾಭಕ್ಕಾಗಿ ರೆಪೊ ದರದ ಮೇಲೆ ಸೇರಿಸುವ ಹೆಚ್ಚುವರಿ ಮೊತ್ತ. ನಿಮ್ಮ ಕ್ರೆಡಿಟ್ ಅಂಕ ಚೆನ್ನಾಗಿದ್ದರೆ ಸ್ಪ್ರೆಡ್ ಕಡಿಮೆ ಇರುತ್ತದೆ.

ನಿಮ್ಮ ಕ್ರೆಡಿಟ್ ಅಂಕ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ನಿಮ್ಮನ್ನು ‘ಸುರಕ್ಷಿತ ಗ್ರಾಹಕ’ ಎಂದು ಪರಿಗಣಿಸಲಾಗುತ್ತದೆ. ಆಗ ಬ್ಯಾಂಕ್ಗಳು ನಿಮಗೆ ಅತ್ಯಂತ ಕಡಿಮೆ ಸ್ಪ್ರೆಡ್ ವಿಧಿಸುತ್ತವೆ. ಉದಾಹರಣೆಗೆ, ಒಬ್ಬರಿಗೆ ಶೇ 8.5ರಷ್ಟು ಬಡ್ಡಿ ಇದ್ದರೆ, ಉತ್ತಮ ಕ್ರೆಡಿಟ್ ಅಂಕ ಇರುವ ನಿಮಗೆ ಅದು ಶೇ 8.3ರಷ್ಟು ಇರಬಹುದು. ಈ ಶೇ 0.2 ವ್ಯತ್ಯಾಸವೂ ಲಕ್ಷಾಂತರ ರೂಪಾಯಿ ಉಳಿಸುತ್ತದೆ. ಸಾಲ ಪಡೆದ ನಂತರ ನೀವು ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದಿದ್ದರೆ ಅಥವಾ ಬೇರೆ ಸಾಲಗಳ ಇಎಂಐ ತಪ್ಪಿಸಿದರೆ ನಿಮ್ಮ ಕ್ರೆಡಿಟ್ ಅಂಕ ಕುಸಿಯುತ್ತದೆ. ಆಗ ಬ್ಯಾಂಕ್ ನಿಮ್ಮನ್ನು ‘ರಿಸ್ಕ್’ ಎಂದು ಪರಿಗಣಿಸಿ, ತನ್ನ ಸ್ಪ್ರೆಡ್ ಹೆಚ್ಚಿಸಬಹುದು. ಅಂದರೆ, ಮಾರುಕಟ್ಟೆಯಲ್ಲಿ ಬಡ್ಡಿ ದರ ಏರದಿದ್ದರೂ, ನಿಮಗೆ ಅನ್ವಯವಾಗುವ ಬಡ್ಡಿ ಏರಬಹುದು.

ವರ್ಷಕ್ಕೊಮ್ಮೆ ನಿಮ್ಮ ಬಡ್ಡಿ ದರವನ್ನು ಮಾರುಕಟ್ಟೆಯ ದರದೊಂದಿಗೆ ಹೋಲಿಸಿ ನೋಡಿ. ಒಂದು ವೇಳೆ ನಿಮ್ಮ ಸ್ಕೋರ್ ಉತ್ತಮವಾಗಿದ್ದು, ಬ್ಯಾಂಕಿನವರು ಬಡ್ಡಿ ಕಡಿಮೆ ಮಾಡದಿದ್ದರೆ, ಮ್ಯಾನೇಜರ್ ಬಳಿ ಮಾತನಾಡಿ ಸ್ಪ್ರೆಡ್ ಕಡಿಮೆ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ. ರೆಪೊ ದರ ಕಡಿಮೆ ಆದ 3 ತಿಂಗಳ ಒಳಗಾಗಿ ಅದರ ಲಾಭ ನಿಮಗೆ ದಕ್ಕಬೇಕು. ಈ ಅನುಕೂಲ ನಿಮಗೆ ಸಿಗುತ್ತಿದೆಯೇ ನೋಡಿಕೊಳ್ಳಿ.

ಇಎಂಐ ಮೊತ್ತ ಹೆಚ್ಚಳ

ಬಡ್ಡಿ ದರ ಏರಿಕೆಯಾದಾಗ ಬ್ಯಾಂಕ್ಗಳು ಸಾಲದ ಅವಧಿಯನ್ನು ಹೆಚ್ಚಿಸುತ್ತವೆ. ಇದು ಮೇಲ್ನೋಟಕ್ಕೆ ಸುಲಭ ಎನಿಸಿದರೂ, ದೀರ್ಘಾವಧಿಯಲ್ಲಿ ನೀವು ಕಟ್ಟುವ ಒಟ್ಟು ಬಡ್ಡಿ ಮೊತ್ತವು ಸಾಲದ ಅಸಲಿಗಿಂತಲೂ ಹೆಚ್ಚಾಗುತ್ತದೆ. ಸಾಲದ ಅವಧಿಯನ್ನು ಹೆಚ್ಚಿಸುವ ಬದಲು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ತಿಂಗಳ ಸಾಲದ ಇಎಂಐ ಮೊತ್ತವನ್ನು ಹೆಚ್ಚಿಸಲು ಬ್ಯಾಂಕಿಗೆ ವಿನಂತಿಸಿ. ಇದರಿಂದ ಸಾಲ ಬೇಗ ತೀರುತ್ತದೆ ಮತ್ತು ಬಡ್ಡಿ ಉಳಿಯುತ್ತದೆ.

ಮುಂಚಿತ ಪಾವತಿ

ಬದಲಾಗುವ ಬಡ್ಡಿ ದರ, ಅಂದರೆ ಫ್ಲೋಟಿಂಗ್ ರೇಟ್ನಲ್ಲಿ, ಗೃಹಸಾಲ ಪಡೆದಿದ್ದರೆ ಯಾವುದೇ ದಂಡವಿಲ್ಲದೆ ನೀವು ಸಾಲವನ್ನು ಮುಂಚಿತವಾಗಿ ತೀರಿಸಬಹುದು. ವರ್ಷಕ್ಕೊಮ್ಮೆ ಕನಿಷ್ಠ ಒಂದು ಹೆಚ್ಚುವರಿ ಸಾಲದ ಕಂತು ಪಾವತಿಸಿದರೂ ನಿಮ್ಮ 20 ವರ್ಷದ ಸಾಲವನ್ನು 15 ವರ್ಷಗಳಲ್ಲೇ ಮುಗಿಸಬಹುದು. ಬೋನಸ್ ಅಥವಾ ವೇತನ ಹೆಚ್ಚಳದ ಹಣ ಬಂದಾಗ ಅದನ್ನು ಸಾಲದ ಅಸಲಿಗೆ ಜಮಾ ಮಾಡಿ. ಸಾಲದ ಮೊದಲ 5 ವರ್ಷಗಳಲ್ಲಿ ನೀವು ಮಾಡುವ ಮುಂಗಡ ಪಾವತಿಯು ಅತಿ ಹೆಚ್ಚು ಉಳಿತಾಯ ತಂದುಕೊಡುತ್ತದೆ.

ಗೃಹಸಾಲ ವರ್ಗಾವಣೆ

ಕ್ರೆಡಿಟ್ ಅಂಕ ಉತ್ತಮವಿದ್ದರೂ ನೀವು ಪಡೆದಿರುವ ಸಾಲಕ್ಕೆ ನಿಮ್ಮ ಬ್ಯಾಂಕ್ ಅತಿ ಹೆಚ್ಚಿನ ಬಡ್ಡಿ ದರ ವಿಧಿಸುತ್ತಿದ್ದರೆ, ಅದನ್ನು ಕಡಿಮೆ ಬಡ್ಡಿ ನೀಡುವ ಬೇರೆ ಬ್ಯಾಂಕಿಗೆ ವರ್ಗಾಯಿಸಬಹುದು.
ಒಂದು ದೂರಸಂಪರ್ಕ ಸೇವಾ ಕಂಪನಿ ಸರಿಯಾಗಿ ಸೇವೆ ಒದಗಿಸದಿದ್ದರೆ ಮತ್ತೊಂದು ಕಂಪನಿಗೆ ಪೋರ್ಟ್ ಆಗುತ್ತೇವೆಯೋ ಅದೇ ರೀತಿಯಲ್ಲಿ ಸಾಲವನ್ನು ವರ್ಗಾಯಿಸಿಕೊಳ್ಳಬಹುದು. ಆದರೆ ಸಾಲ ವರ್ಗಾವಣೆ ಮಾಡುವ ಮುನ್ನ ಮುದ್ರಾಂಕ ಶುಲ್ಕ ಮತ್ತು ಇತರ ಶುಲ್ಕಗಳನ್ನು ಲೆಕ್ಕ ಹಾಕಿ. ಶುಲ್ಕ ಗಳಿಗಿಂತ ಸಾಲದ ಅವಧಿಯಲ್ಲಿ ಆಗುವ ಉಳಿತಾಯ ಹೆಚ್ಚಾಗಿದ್ದರೆ ವರ್ಗಾವಣೆಗೆ ಮುಂದಾಗಿ. ಎಲ್ಲ ಸಂದರ್ಭಗಳಲ್ಲೂ ಸಾಲ ವರ್ಗಾವಣೆಯಿಂದ ಲಾಭವಾಗುವುದಿಲ್ಲ ಎನ್ನುವುದು ತಿಳಿದಿರಲಿ.

ನೆನಪಿಡಿ

ಗೃಹ ಸಾಲವು ಕೇವಲ ಒಂದು ಕಾಗದದ ಮೇಲಿನ ಸಹಿಯಲ್ಲ. ಅದು ನಿಮ್ಮ ಮುಂದಿನ 20 ವರ್ಷಗಳ ಆರ್ಥಿಕ ಶಿಸ್ತು. ಸಹಿ ಹಾಕುವ ಮುನ್ನ ಪ್ರತಿ ಸಾಲನ್ನೂ ಓದಿ, ಬ್ಯಾಂಕಿನೊಂದಿಗೆ ಚೌಕಾಸಿ ಮಾಡಿ ಉತ್ತಮ ಬಡ್ಡಿ ದರಕ್ಕೆ ಸಾಲ ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.