ಭಾನುವಾರ, ನವೆಂಬರ್ 29, 2020
21 °C

ಬಯೋಕಾನ್‌ಗೆ 5ನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದ ‘ಸೈನ್ಸ್’ ನಿಯತಕಾಲಿಕ ಸಿದ್ಧಪಡಿಸಿರುವ, ಜೈವಿಕ ತಂತ್ರಜ್ಞಾನ (ಬಿ.ಟಿ.) ಕ್ಷೇತ್ರದ ವಿಶ್ವದ ಐದು ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ತನ್ನ ಹೆಸರೂ ಸೇರಿದೆ ಎಂದು ಬಯೋಕಾನ್ ಲಿಮಿಟೆಡ್ ಹೇಳಿದೆ. ‘ಸೈನ್ಸ್’ ನಿಯತಕಾಲಿಕವು 2020ನೇ ಸಾಲಿಗೆ ಸಂಬಂಧಿಸಿದಂತೆ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯೋಕಾನ್ ಕಂಪನಿಯು ಫಾರ್ಮಾ ಮತ್ತು ಬಿ.ಟಿ. ವಲಯದ ಕಂಪನಿಗಳ ಪಟ್ಟಿಯಲ್ಲಿ ಐದನೆಯ ಸ್ಥಾನವನ್ನು ಪಡೆದಿದೆ. 2018ರಲ್ಲಿ ಕಂಪನಿಯು ಏಳನೆಯ ಸ್ಥಾನದಲ್ಲಿ, 2019ರಲ್ಲಿ ಆರನೆಯ ಸ್ಥಾನದಲ್ಲಿ ಇತ್ತು.

ವಿಶ್ವದ ಬೇರೆ ಬೇರೆ ದೇಶಗಳ ಒಟ್ಟು 7,600 ಪ್ರತಿನಿಧಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿರುವ ‘ಅತ್ಯುತ್ತಮ ಉದ್ಯೋಗದಾತರ ಸಮೀಕ್ಷೆ’ ಪ್ರಕಾರ, ‘ಉದ್ಯಮದಲ್ಲಿ ಹೊಸತನವನ್ನು ಕಂಡುಕೊಳ್ಳುವ ನಾಯಕತ್ವದ ಗುಣ’, ‘ಸಾಮಾಜಿಕ ಹೊಣೆಗಾರಿಕೆ’ ಮತ್ತು ‘ನಿಷ್ಠಾವಂತ ನೌಕರರನ್ನು ಹೊಂದಿರುವಿಕೆ’ಯನ್ನು ಪರಿಗಣಿಸಿ ತನಗೆ ಈ ಸ್ಥಾನ ಸಿಕ್ಕಿದೆ ಎಂದು ಬಯೋಕಾನ್ ಹೇಳಿದೆ.

ಮಾರ್ಚ್‌ನಿಂದ ಮೇ ತಿಂಗಳ ನಡುವೆ ಸಮೀಕ್ಷೆ ನಡೆದಿದೆ. ‘ನಮ್ಮ ನೌಕರರು ವೃತ್ತಿಯ ವಿಚಾರದಲ್ಲಿ ತೋರಿರುವ ಪ್ರೀತಿಯನ್ನು ಈ ಸಮೀಕ್ಷೆ ಗುರುತಿಸಿದೆ’ ಎಂದು ಬಯೋಕಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು