ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇವಾ ವಲಯಕ್ಕೆ ಅದಾನಿ ಸಮೂಹ

Last Updated 19 ಮೇ 2022, 11:31 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹವು ದೊಡ್ಡ ಆಸ್ಪತ್ರೆಗಳು, ಡಯಾಗ್ನಾಸ್ಟಿಕ್‌ ಕೇಂದ್ರಗಳು ಮತ್ತು ಡಿಜಿಟಲ್‌ ಫಾರ್ಮಿಸಿಗಳನ್ನು ಸ್ವಾಧೀನಪ‍ಡಿಸಿಕೊಳ್ಳುವ ಮೂಲಕ ಆರೋಗ್ಯ ಸೇವಾ ವಲಯವನ್ನು ಪ್ರವೇಶಿಸಲು ಮುಂದಾಗಿದೆ.

ಈ ಸಂಬಂಧ ಅದಾನಿ ಹೆಲ್ತ್‌ ವೆಂಚರ್ಸ್‌ ಲಿಮಿಟೆಡ್‌ (ಎಎಚ್‌ವಿಎಲ್‌) ಕಂಪನಿಯನ್ನು ಮೇ 17ರಂದು ಸ್ಥಾಪಿಸಿರುವುದಾಗಿ ಷೇರುಪೇಟೆಗೆ ಮಾಹಿತಿ ನೀಡಿದೆ.

ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳನ್ನು ಎಎಚ್‌ವಿಎಲ್‌ ನಡೆಸಲಿದೆ ಎಂದು ಸಮೂಹ ತಿಳಿಸಿದೆ. ₹ 30,800 ಕೋಟಿವರೆಗೆ ಹೂಡಿಕೆ ಮಾಡುವ ಯೋಜನೆಯನ್ನೂ ಸಮೂಹವು ಹೊಂದಿದೆ.

ಹೋಲ್ಸಿಯಂ ಇಂಡಿಯಾದ ವಹಿವಾಟನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕಸಮೂಹವು ಈಚೆಗಷ್ಟೇ ಭಾರತದ ಸಿಮೆಂಟ್‌ ವಲಯವನ್ನು ಪ್ರವೇಶಿಸಿದೆ.

ಸರ್ಕಾರಿ ಸ್ವಾಮ್ಯದ ಎಚ್‌ಎಲ್‌ಎಲ್‌ ಲೈಫ್‌ಕೇರ್‌ ಲಿಮಿಟೆಡ್‌ (ಎಚ್‌ಎಲ್‌ಎಲ್‌) ಕಂಪನಿಯನ್ನು ಖರೀದಿಸುವ ಸಂಬಂಧ ‌ಅದಾನಿ ಮತ್ತು ಪಿರಾಮಲ್‌ ಹೆಲ್ತ್‌ಕೇರ್‌ ಪೈಪೋಟಿಯಲ್ಲಿವೆ ಎಂದು ವರದಿಯಾಗಿದೆ. ಸರ್ಕಾರವು ಎಚ್‌ಎಲ್‌ಎಲ್‌ ಕಂಪನಿಯಲ್ಲಿ ಹೊಂದಿರುವ ಶೇಕಡ 100ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು 2021ರ ಡಿಸೆಂಬರ್‌ನಲ್ಲಿ ನಿರ್ಧರಿಸಿದೆ. ಈ ಸಂಬಂಧ ಏಲು ಬಿಡ್‌ಗಳು ಸಲ್ಲಿಕೆ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT