ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ: ಅಮುಲ್‌ ಉತ್ಪನ್ನ ಮಾರಾಟಕ್ಕೆ ಸಿದ್ಧತೆ

Published 22 ಜೂನ್ 2024, 13:59 IST
Last Updated 22 ಜೂನ್ 2024, 13:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಮೆರಿಕದಲ್ಲಿ ‘ಅಮುಲ್ ಬ್ರ್ಯಾಂಡ್’ ಅಡಿಯಲ್ಲಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು (ಜಿಸಿಎಂಎಂಎಫ್ಎಲ್‌) ಸಿದ್ಧತೆ ನಡೆಸಿದೆ.

ಈಗಾಗಲೇ, ಅಮೆರಿಕದಲ್ಲಿ ಅಲ್ಲಿನ ಮಿಚಿಗನ್‌ ಹಾಲು ಉತ್ಪಾದಕರ ಸಂಘದ ಸಹಭಾಗಿತ್ವದಡಿ ಅಮುಲ್‌ನ ತಾಜಾ ಹಾಲಿನ ಮಾರಾಟ ಮಾಡುತ್ತಿದೆ. ಶೀಘ್ರವೇ, ಹಾಲಿನ ಉತ್ಪನ್ನಗಳ ಮಾರಾಟ ಆರಂಭಿಸುವ ಮೂಲಕ ಮಾರುಕಟ್ಟೆಯ ವಿಸ್ತರಣೆಗೆ ಒಕ್ಕೂಟ ನಿರ್ಧರಿಸಿದೆ. 

ಭಾರಿ ಬೇಡಿಕೆ: 

‘ಅಮುಲ್‌ ಉತ್ಪನ್ನಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿದೆ. ಅಮೆರಿಕದಲ್ಲಿ ಮೊಸರು, ಲಸ್ಸಿ ಬಟರ್‌ಮಿಲ್ಕ್‌, ಕ್ರೀಮ್‌ ಮತ್ತು ಪನ್ನೀರ್‌ ಸೇರಿ ಇತರೆ ಉತ್ಪನ್ನಗಳ ಮಾರಾಟ ಆರಂಭಿಸಲಾಗುವುದು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್‌ ಮೆಹ್ತಾ ತಿಳಿಸಿದ್ದಾರೆ.

ಭಾರತೀಯ ವ್ಯಾಪಾರಿಗಳ ಒಕ್ಕೂಟದ (ಐಎಂಸಿ) 116ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ಒಂದು ದಶಕದ ಅವಧಿಯಲ್ಲಿ ವಿಶ್ವದಲ್ಲಿ ಉತ್ಪಾದನೆಯಾಗುವ ಹಾಲಿನಲ್ಲಿ ಮೂರನೇ ಒಂದು ಭಾಗದಷ್ಟು ಉತ್ಪಾದನೆಯು ಭಾರತದಲ್ಲಿಯೇ ಆಗಲಿದೆ’ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಭಾರತೀಯರು ಮತ್ತು ಏಷ್ಯಾದ ವಿವಿಧ ದೇಶಗಳ ಜನರು ನೆಲೆಸಿರುವ ಪ್ರದೇಶಗಳಲ್ಲಿ ಅಮುಲ್‌ ಹಾಲು ಮಾರಾಟ ಮಾಡಲಾಗುತ್ತಿದೆ. ಕೆನಡಾದಲ್ಲಿಯೂ ತಾಜಾ ಹಾಲು ಮಾರಾಟ ಆರಂಭಿಸುವ ಯೋಜನೆಯಿದೆ. ಅಲ್ಲದೆ, ವಿಶ್ವದ ಇತರೆ ದೇಶಗಳಲ್ಲೂ ಮಾರುಕಟ್ಟೆ ವಿಸ್ತರಿಸಲು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT