ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ| ಅನಂತಪುರದ ಇರಮಂಚಿಯಲ್ಲಿ ಕಿಯಾ ಮೋಟರ್ಸ್ ಘಟಕ ಕಾರ್ಯಾರಂಭ

ವಾರ್ಷಿಕ 3 ಲಕ್ಷ ಕಾರು ಉತ್ಪಾದನೆ ಗುರಿ
Last Updated 6 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಅನಂತಪುರ (ಆಂಧ್ರಪ್ರದೇಶ): ಜಿಲ್ಲೆಯ ಇರಮಂಚಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ‘ಕಿಯಾ ಮೋಟರ್ಸ್’ ಕಂಪನಿಯ ಭಾರತದ ವಾಹನ ತಯಾರಿಕಾ ಘಟಕವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್ ರೆಡ್ಡಿ ಗುರುವಾರ ಉದ್ಘಾಟಿಸಿದರು.

ದಕ್ಷಿಣ ಕೊರಿಯಾದ ಆಟೊಮೊಬೈಲ್ ಕಂಪನಿಯಾದ ಕಿಯಾ ಮೋಟರ್ಸ್‌ನ ವಿಶ್ವದ 15ನೇ ಘಟಕ ಇದಾಗಿದೆ. 536 ಎಕರೆ ಪ್ರದೇಶದಲ್ಲಿ ಘಟಕ ನಿರ್ಮಿಸಲಾಗಿದ್ದು, ವಾಹನ ತಯಾರಿಕೆಯ ಮೂರು ವಿಭಾಗಗಳು ಇಲ್ಲಿವೆ.

ಇದೇ ಘಟಕದಲ್ಲಿ ಹೊಸ ಮಾದರಿಯ ವಾಹನಗಳು ತಯಾರಾಗಲಿವೆ. ಈ ಕಾರುಗಳನ್ನೇ ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಕೆಲವು ದೇಶಗಳಿಗೂ ರಫ್ತು ಮಾಡುವುದು ಕಂಪನಿಯ ಉದ್ದೇಶವಾಗಿದೆ.

‘ನಮ್ಮ ಪಾಲಿಗೆ ಭಾರತದಲ್ಲಿ ಕಾರು ತಯಾರಿಸುವ ಯೋಜನೆ ಮಹತ್ವದ್ದಾಗಿದೆ. ‘ಭಾರತದಲ್ಲಿಯೇ ತಯಾರಿಸಿ’ ಅಭಿಯಾನಕ್ಕೆ ನಮ್ಮ ಶಕ್ತಿ ಹಾಗೂ ಸಂಪನ್ಮೂಲದ ವಿನಿಯೋಗ ಮಾಡಿದ್ದೇವೆ. ಇದು ಆರಂಭ ಮಾತ್ರ, ಸಾಗಬೇಕಾದ ದಾರಿ ಇನ್ನು ಬಹಳ ಇದೆ' ಎಂದು ಕಿಯಾ ಮೋಟರ್ಸ್‌ ಕಾರ್ಪೊರೇಷನ್‌ನ ಅಧ್ಯಕ್ಷ ಹ್ಯಾನ್‌–ವೂ ಪಾರ್ಕ್‌ ಹೇಳಿದರು.

'12 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಿದೆ. ಘಟಕದಲ್ಲಿ 450 ರೋಬೊಗಳನ್ನು ಬಳಸಲಾಗುತ್ತಿದೆ. ವಾರ್ಷಿಕ 3 ಲಕ್ಷ ಕಾರು ತಯಾರಿಸುವ ಗುರಿ ಇದೆ. ಭಾರತದಲ್ಲೇ ಕಾರು ತಯಾರಿಸಿ ಮೇಡ್ ಇನ್ ಇಂಡಿಯಾ ಕಾರುಗಳು ಎಂದು ಹೇಳಲು ಹೆಮ್ಮೆ ಆಗುತ್ತದೆ.

‘₹ 13,800 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಹೊಸ ಕಾರ್ನಿವಲ್ ಕಾರನ್ನೂ ಇದೇ ಘಟಕದಲ್ಲಿ ತಯಾರಿಸಿ ಜನವರಿ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದರು.

(ವರದಿಗಾರ, ಕಂಪನಿಯ ಆಹ್ವಾನದ ಮೇರೆಗೆ ಅನಂತಪುಟಕ್ಕೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT