ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮೊದಲ $3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯದ ಕಂಪನಿಯಾಗಿ ಆ್ಯಪಲ್

Last Updated 4 ಜನವರಿ 2022, 14:01 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಆ್ಯಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯವು ಸೋಮವಾರ 3 ಶತಕೋಟಿ ಡಾಲರ್‌ಗೆ (ಸರಿಸುಮಾರು ₹ 224 ಲಕ್ಷ ಕೋಟಿ) ತಲುಪಿತ್ತು. ನಂತರ, ಷೇರು ಮೌಲ್ಯ ಇಳಿಕೆ ಕಂಡ ಕಾರಣ ಕಂಪನಿಯ ಮಾರುಕಟ್ಟೆ ಮೌಲ್ಯವು ತುಸು ಕಡಿಮೆ ಆಯಿತು.

ಮಾರುಕಟ್ಟೆ ಬಂಡವಾಳ ಲೆಕ್ಕಾಚಾರದಲ್ಲಿ ಇಷ್ಟು ಬೃಹತ್ ಆಗಿ ಬೆಳೆದಿರುವ ಅಮೆರಿಕದ ಮೊದಲ ಕಂಪನಿ ಆ್ಯಪಲ್.

ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಯಾಗಿರುವ ಆ್ಯಪಲ್‌ನ ಮಾರುಕಟ್ಟೆ ಮೌಲ್ಯವು 2020ರ ಆಗಸ್ಟ್‌ನಲ್ಲಿ 2 ಶತಕೋಟಿ ಡಾಲರ್ (₹ 149 ಲಕ್ಷ ಕೋಟಿ) ಗಡಿಯನ್ನು ದಾಟಿತ್ತು. 2 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೂ ಆ್ಯಪಲ್ ಪಾತ್ರವಾಗಿತ್ತು.

ಈಗಿನ ಮೌಲ್ಯವೃದ್ಧಿಯು ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಟಿಮ್ ಕುಕ್ ಅವರ ಸಾಧನೆಯನ್ನು ಬಿಂಬಿಸುತ್ತಿದೆ. ಆ್ಯಪಲ್‌ನ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಸಾಯುವುದಕ್ಕಿಂತ ತುಸು ಮೊದಲು ಟಿಮ್ ಕುಕ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.

ಆರಂಭದಲ್ಲಿ, ಟಿಮ್ ಕುಕ್ ಅವರ ನಾಯಕತ್ವದ ಕುರಿತು ಪ್ರಶ್ನೆಗಳು ಮೂಡಿದ್ದವು. ಸ್ಟೀವ್ ಜಾಬ್ಸ್ ಅವರಷ್ಟೇ ಸಮರ್ಥವಾಗಿ, ಟಿಮ್ ಕುಕ್ ಅವರು ಕಂಪನಿಯನ್ನು ಮುಂದಕ್ಕೆ ಒಯ್ಯುವರೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಟಿಮ್ ಕುಕ್ ಅವರು ಕಂಪನಿಯ ಪಾಲಿಗೆ ಹೊಸ ವಹಿವಾಟುಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT