ಬುಧವಾರ, ಸೆಪ್ಟೆಂಬರ್ 29, 2021
20 °C

ಆಗಸ್ಟ್‌: ವಾಹನ ಮಾರಾಟ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾಹನ ತಯಾರಿಕಾ ಕಂಪನಿಗಳ ಪೈಕಿ ಮಾರುತಿ ಸುಜುಕಿ ಇಂಡಿಯಾದ ಆಗಸ್ಟ್‌ ತಿಂಗಳ ದೇಶಿ ಮತ್ತು ಒಟ್ಟಾರೆ ಮಾರಾಟ ಹೆಚ್ಚಾಗಿದೆ. ಉಳಿದಂತೆ, ಕೆಲವು ಕಂಪನಿಗಳ ದೇಶಿ ಮಾರಾಟದಲ್ಲಿ ಏರಿಕೆಯಾಗಿದ್ದರೆ, ಒಟ್ಟಾರೆ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುತಿ ಸುಜುಕಿ ಇಂಡಿಯಾದ ಒಟ್ಟಾರೆ ಮಾರಾಟ ಶೇಕಡ 17.1ರಷ್ಟು ಹೆಚ್ಚಾಗಿದ್ದು, 1.24 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. 2019ರ ಆಗಸ್ಟ್‌ನಲ್ಲಿ 1.06 ಲಕ್ಷ ವಾಹನಗಳು ಮಾರಾಟವಾಗಿದ್ದವು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ದೇಶಿ ಮಾರಾಟ ಶೇ 20ರಷ್ಟು ಹೆಚ್ಚಾಗಿದೆ. ಸಣ್ಣ, ಕಾಂಪ್ಯಾಕ್ಟ್‌ ಮತ್ತು ಯುಟಿಲಿಟಿ ವಾಹನಗಳ ಮಾರಾಟದಲ್ಲಿಯೂ ಏರಿಕೆಯಾಗಿದೆ.

ಹುಂಡೈ: ಹುಂಡೈ ಮೋಟರ್‌ ಇಂಡಿಯಾದ ದೇಶಿ ಮಾರಾಟ ಶೇ 19.9ರಷ್ಟು ಹೆಚ್ಚಾಗಿದೆ. ಆದರೆ, ಒಟ್ಟಾರೆ ಮಾರಾಟವು ಶೇ 6.06ರಷ್ಟು ಇಳಿಕೆಯಾಗಿದೆ.

ಹೊಸ ಕ್ರೆಟಾ, ವರ್ನಾ, ಟಕ್ಸನ್‌, ನಿಯೋಸ್‌ ಮತ್ತು ಔರಾಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಂಪನಿ ತಿಳಿಸಿದೆ.

ಮಹೀಂದ್ರಾ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಒಟ್ಟಾರೆ ಮಾರಾಟ ಶೇ 16ರಷ್ಟು ಹಾಗೂ ದೇಶಿ ಮಾರಾಟ ಶೇ 13ರಷ್ಟು ಇಳಿಕೆಯಾಗಿದೆ.

ಟೊಯೋಟ: ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯ ಮರಾಟ ಶೇ 48ರಷ್ಟು ಇಳಿಕೆಯಾಗಿದೆ.

ದ್ವಿಚಕ್ರ ವಾಹನ: ಸುಜುಕಿ ಮೋಟರ್‌ಸೈಕಲ್‌ ಇಂಡಿಯಾದ ಒಟ್ಟಾರೆ ಮಾರಾಟ ಶೇ 19.15ರಷ್ಟು ಇಳಿಕೆ ಆಗಿದೆ. ದೇಶಿ ಮಾರಾಟ ಶೇ 15ರಷ್ಟು ಕಡಿಮೆಯಾಗಿದೆ.

ಹೀರೊ ಮೊಟೊಕಾರ್ಪ್‌ನ ಮಾರಾಟ ಶೇ 7.55ರಷ್ಟು ಹೆಚ್ಚಾಗಿದೆ. ದೇಶಿ ಮಾರಾಟದಲ್ಲಿಯೂ ಶೇ 8.52ರಷ್ಟು ಏರಿಕೆ ಕಂಡುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು