ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್‌ ಫೈನಾನ್ಸ್‌ನಿಂದ ಡಿಜಿಟಲ್ ಫಿಕ್ಸ್ಡ್‌ ಡಿಪಾಸಿಟ್ ಆರಂಭ

Published 9 ಜನವರಿ 2024, 9:25 IST
Last Updated 9 ಜನವರಿ 2024, 9:25 IST
ಅಕ್ಷರ ಗಾತ್ರ

ಬೆಂಗಳೂರು: ಬಜಾಜ್ ಫೈನ್‌ಸರ್ವ್‌ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನಿಂದ ಡಿಜಿಟಲ್ ಫಿಕ್ಸ್ಡ್‌ ಡಿಪಾಸಿಟ್ (ಎಫ್‌ಡಿ) ಆರಂಭಿಸಲಾಗಿದೆ.

ಸಂಸ್ಥೆಯ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಠೇವಣಿ ಇಡುವ ಠೇವಣಿದಾರರಿಗೆ ಶೇ 8.85ರವರೆಗೆ ಬಡ್ಡಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ಠೇವಣಿ ಇಡಲು ಡಿಜಿಟಲ್ ಮತ್ತು ಡಿಜಿಟಲ್ ಆಧಾರಿತ ಮಾದರಿ ಬಳಸುವುದನ್ನು ಉತ್ತೇಜಿಸಲು ಈ ಯೋಜನೆ ಆರಂಭಿಸಿರುವ. ಈ ಸೇವೆಗೆ ಒಂದು ವರ್ಷ ಪೂರ್ಣಗೊಂಡಿದೆ. ಬಜಾಜ್ ಫೈನ್‌ಸರ್ವ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಗ್ರಾಹಕರು ಸುಲಭವಾಗಿ ಹಾಗೂ ತಡೆರಹಿತವಾಗಿ ಠೇವಣಿಯನ್ನು ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ಜನವರಿ 2ರಿಂದ ಶೇ 8.85ರ ವರೆಗಿನ ಪರಿಷ್ಕೃತ ಬಡ್ಡಿದರ ಜಾರಿಗೆ ಬಂದಿದೆ. ಈ ಬಡ್ಡಿದರ ಹಿರಿಯ ನಾಗರಿಕರಿಗೆ ಅನ್ವಯವಾಗಲಿದೆ. ಕನಿಷ್ಠ 42 ತಿಂಗಳ ಕಾಲ ಠೇವಣಿ ಇಡಬೇಕಿದೆ.

ಇನ್ನು 60 ವರ್ಷಕ್ಕಿಂತ ಕೆಳಗಿನ ಠೇವಣಿದಾರರಿಗೆ ಶೇ 8.60ರ ವರೆಗೆ ಬಡ್ಡಿ ಲಭ್ಯವಾಗಲಿದೆ. ಈ ಪರಿಷ್ಕೃತ ಬಡ್ಡಿದರವು ಹೊಸದಾಗಿ ಠೇವಣಿ ಇಡುವವರಿಗೆ ಮತ್ತು ಠೇವಣಿಯನ್ನು ನವೀಕರಣ ಮಾಡಿಸುವವರಿಗೆ ಅನ್ವಯವಾಗಲಿದೆ. 42 ತಿಂಗಳ ಅವಧಿಗೆ ಮತ್ತು ಗರಿಷ್ಠ ₹5 ಕೋಟಿವರೆಗೆ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT