ಗುರಿ ತಲುಪದ ‘ಮುದ್ರಾ’

ಮಂಗಳವಾರ, ಮಾರ್ಚ್ 26, 2019
33 °C

ಗುರಿ ತಲುಪದ ‘ಮುದ್ರಾ’

Published:
Updated:

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಮುದ್ರಾ’ ಸಾಲ ನೀಡಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಗುರಿ ತಲುಪುವುದು ಕಷ್ಟವಾಗಲಿದೆ.

ಹಣಕಾಸು ವರ್ಷ ಮುಕ್ತಾಯವಾಗಲು ಒಂದೇ ತಿಂಗಳು ಬಾಕಿ ಇದೆ. ಹೀಗಾಗಿ, ಸರ್ಕಾರ ನೀಡಿರುವ ಗುರಿಯ ಪ್ರಕಾರ ₹ 3 ಲಕ್ಷ ಕೋಟಿ ಸಾಲ ನೀಡಬೇಕಾಗಿದೆ. ಆದರೆ, ಬ್ಯಾಂಕ್‌ಗಳು ವಿತರಿಸಿರುವುದು ₹ 2 ಲಕ್ಷ ಕೋಟಿ ಮಾತ್ರ ಎಂದು ಸರ್ಕಾರ ಮಾಹಿತಿ ನೀಡಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ 3.89 ಕೋಟಿಗೂ ಹೆಚ್ಚು ‘ಮುದ್ರಾ’ ಸಾಲಗಳನ್ನು ಮಂಜೂರು ಮಾಡಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !