ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 26ರಷ್ಟು ಏರಿಕೆಯಾಗಿದೆ, ಇದು ಭಾರತದಲ್ಲೇ ಅತಿ ಹೆಚ್ಚು ಎಂದು ರಿಯಲ್ ಎಸ್ಟೇಟ್ ಕಂಪನಿ ಅನಾರಕ್ (Anarock) ತಿಳಿಸಿದೆ.

ಭಾರಿ ಬೇಡಿಕೆ ಇರುವ ಸ್ಥಳಗಳಲ್ಲಿ ಚದರ ಅಡಿಗೆ ಮಾಸಿಕವಾಗಿ ₹93 ಇದೆ ಎಂದು ಅದು ಹೇಳಿದೆ.
.Invest Karnataka: ರಾಜ್ಯದ ಕೈಗಾರಿಕಾ ನೀತಿ ಇತರರಿಗೆ ಮಾದರಿ: ಪೀಯೂಷ್ ಗೋಯಲ್.
ದೆಹಲಿ–ಎನ್ಸಿಆರ್, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಕೈಗೊಂಡ ಸಮೀಕ್ಷೆಯ ದತ್ತಾಂಶವನ್ನು ಶುಕ್ರವಾರ ಪ್ರಕಟಿಸಿದೆ.

ಈ ಏಳು ನಗರಗಳ ಪೈಕಿ ಅತಿ ಹೆಚ್ಚು ಕಚೇರಿ ಬಾಡಿಗೆ ಇರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2019ರಲ್ಲಿ ಪ್ರತೀ ಚದರ ಅಡಿಗೆ ₹74 ಇದ್ದರೆ, 2024ಕ್ಕೆ ಅದು ₹ 93ಕ್ಕೆ ಏರಿಕೆಯಾಗಿದೆ.

ಹೈದರಾಬಾದ್ನಲ್ಲಿ ಮಾಸಿಕ ಕಚೇರಿ ಬಾಡಿಗೆ ಶೇ 25ರಷ್ಟು ಏರಿಯಾಗಿದ್ದು, 2019ರಲ್ಲಿ ₹ 67 ಇತ್ತು. 2024ಕ್ಕೆ 67ಕ್ಕೆ ಏರಿಕೆಯಾಗಿದೆ.
.Invest Karnataka: ಹೂಡಿದ್ದೆಷ್ಟು, ಉದ್ಯೋಗ ಸಿಕ್ಕಿದ್ದೆಷ್ಟು? .
ಚೆನ್ನೈನಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, 2024 ರಲ್ಲಿ ಮಾಸಿಕ ಕಚೇರಿ ಬಾಡಿಗೆ ಸರಾಸರಿ ₹75 ಇದ್ದರೆ, 2019ರಲ್ಲಿ ₹60 ಇತ್ತು.

ದೆಹಲಿ ಎನ್ಸಿಆರ್ನಲ್ಲಿ ಅತಿ ಕಡಿಮೆ ಅಂದರೆ, ಶೇ 10 ರಷ್ಟು ಮಾತ್ರ ಏರಿಕೆಯಾಗಿದೆ. 2019ರಲ್ಲಿ ₹ 78 ಇದ್ದರೆ, 2024ರಲ್ಲಿ ₹86 ಕ್ಕೆ ಏರಿಕೆಯಾಗಿದೆ.

ಪುಣೆಯಲ್ಲಿ ₹ 68 ರಿಂದ ₹81ಕ್ಕೆ, ಮುಂಬೈನಲ್ಲಿ ₹ 124ರಿಂದ ₹ 140ಕ್ಕೆ ಏರಿಕೆಯಾಗಿದೆ. ಕ್ರಮವಾಗಿ ಶೇ 19 ಹಾಗೂ ಶೇ 13ರಷ್ಟು ಏರಿಕೆ ಆಗಿದೆ.

ಕೋಲ್ಕತ್ತದಲ್ಲಿ ₹ 52 ನಿಂದ ₹ 64ಕ್ಕೆ ಏರಿಕೆಯಾಗಿದೆ.
.Invest Karnataka 2025: ಜಿಇ ಹೆಲ್ತ್ ಕೇರ್ನಿಂದ ₹8 ಸಾವಿರ ಕೋಟಿ ಹೂಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.