ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ, ತ.ನಾಡು, ಕೇರಳದ 15 ಹೈವೆಗಳಲ್ಲಿ BPCLನಿಂದ EV ಚಾರ್ಜಿಂಗ್‌ ಸ್ಟೇಷನ್

Last Updated 25 ಮಾರ್ಚ್ 2023, 9:42 IST
ಅಕ್ಷರ ಗಾತ್ರ

ಕೊಚ್ಚಿ: ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 15 ಹೆದ್ದಾರಿಗಳ 19 ಕಡೆಗಳಲ್ಲಿ 19 ಇವಿ ಫಾಸ್ಟ್‌ ಚಾರ್ಜಿಂಗ್‌ ಕಾರಿಡಾರ್‌ಗಳನ್ನು ಸ್ಥಾಪನೆ ಮಾಡಿದ್ದಾಗಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ (BPCL) ಹೇಳಿದೆ.

ಈ ಕಾರಿಡಾರ್‌ಗಳಲ್ಲಿ ಪ್ರಯಾಣಿಕರು ಕನಿಷ್ಠ 100 ಕಿ.ಮಿಗೆ ಒಂದು ಇ.ವಿ ಫಾಸ್ಟ್‌ ಚಾರ್ಜಿಂಗ್‌ ಸ್ಟೇಷನ್ ಕಂಡುಕೊಳ್ಳಬಹುದು ಎಂದು ಬಿಪಿಸಿಎಲ್‌ ಹೇಳಿದೆ.

110 ಪೆಟ್ರೋಲ್‌ ಬಂಕ್‌ಗಳಲ್ಲಿ ಇವಿ ಚಾರ್ಜಿಂಗ್‌ ಅಳವಡಿಸಲಾಗಿದ್ದು, ಇವುಗಳನ್ನು ಪ್ರತ್ಯೇಕ ಕಾರಿಡಾರ್‌ಗಳಾಗಿ ವಿಂಗಡಿಸಲಾಗಿದೆ. ಸದ್ಯ ಕೇರಳದಲ್ಲಿ 3 ಕಾರಿಡಾರ್‌ಗಳಲ್ಲಿ 19 ಪೆಟ್ರೋಲ್‌ ಬಂಕ್‌ಗಳು, ಕರ್ನಾಟಕದಲ್ಲಿ ಆರು ಕಾರಿಡಾರ್‌ಗಳಲ್ಲಿ 33 ಪೆಟ್ರೋಲ್‌ ಬಂಕ್‌ಗಳು, ಹಾಗೂ ತಮಿಳುನಾಡಿನ 10 ಕಾರಿಡಾರ್‌ಗಳ 58 ಪೆಟ್ರೋಲ್‌ ಬಂಕ್‌ಗಳು ಇದ್ದು, ಇಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ ಎಂದು ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಚಿಲ್ಲರೆ) ಪಿ.ಎಸ್ ರವಿ ಹೇಳಿದ್ದಾರೆ.

ಮೂವತ್ತು ನಿಮಿಷ ಚಾರ್ಜ್‌ ಮಾಡಿದರೆ 125 ಕಿ.ಮಿ ತನಕ ಪ್ರಯಾಣಿಸಬಹುದಾಗಿದ್ದು, ಹೀಗಾಗಿ ಪ್ರತೀ 100 ಕಿ.ಮಿಗೆ ಇವಿ ಸ್ಟೇಷನ್‌ ಅಳವಡಿಸಲಾಗಿದೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಬಳಕೆ ಮಾಡಬಹುದಾಗಿದ್ದು, ಅಗತ್ಯ ಬಿದ್ದರೆ ಸ್ಥಳದಲ್ಲಿರುವ ಸಿಬ್ಬಂದಿಯ ಸಹಾಯ ಪಡೆಯಬಹುದಾಗಿದೆ. ಚಾರ್ಜಿಂಗ್‌ ಸ್ಟೇಷನ್‌ಗಳ ಮಾಹಿತಿ, ಬಳಕೆ, ಸ್ಥಳಗಳ ಬಗ್ಗೆ HelloBPCLಆ್ಯಪ್‌ನಲ್ಲಿ ಸಂಪೂರ್ಣ ಮಾಹಿತಿ ಇದೆ ಎಂದು ಕಂಪನಿ ಹೇಳಿದೆ.

ತಿರುಪತಿ, ಬಂಡಿ‍ಪುರ ರಾಷ್ಟ್ರೀಯ ಉದ್ಯಾನ, ಗುರುವಾಯೂರು, ಕಾಡಾಂಬುಳ, ವಲ್ಲಾರ್‌ಪಾಡಂ ಬೆಸಿಲಿಕಾ, ಕೊರಟ್ಟಿ, ಮರ್ಕಝ್‌ ನಾಲೆಡ್ಜ್‌ ಸಿಟಿ, ಕನ್ಯಾಕುಮಾರಿ ಹಾಗೊ ಮೀನಾಕ್ಷಿ ಅಮ್ಮನ್‌ ದೇಗುಲ ಮುಂತಾದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT