ಬೆಂಗಳೂರು: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಬೆಂಗಳೂರು–ಚೆನ್ನೈ ಮತ್ತು ಬೆಂಗಳೂರು–ಮೈಸೂರು–ಕೊಡಗು ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸುವ ಕಾರಿಡಾರ್‌ಗಳಿಗೆ ಶುಕ್ರವಾರಚಾಲನೆ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್. ರವಿ, ‘ಹೆದ್ದಾರಿಯ ಎರಡೂ ಕಡೆಗಳಲ್ಲಿ, 100 ಕಿಲೋ ಮೀಟರ್ ಅಂತರದಲ್ಲಿ ಒಟ್ಟು 9 ಪೆಟ್ರೋಲ್ ಪಂಪ್‌ಗಳಲ್ಲಿ25 ಕಿಲೋವಾಟ್‌ನ ವೇಗದ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
ಬೆಂಗಳೂರು–ಮೈಸೂರು–ಬಂಡೀಪುರ–ಊಟಿ, ಬೆಂಗಳೂರು–ತಿರುಪತಿ ಹಾಗೂ ಬೆಂಗಳೂರು–ಕೊಡೈಕೆನಾಲ್ ಮಾರ್ಗಗಳಲ್ಲಿಯೂ ಈ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಎರಡನೇ ಹಂತದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಚೆನ್ನೈ–ತಿರುಚ್ಚಿ–ಮಧುರೆ ಹೆದ್ದಾರಿಯಲ್ಲಿ ಜಾರಿಯಾಗಿದೆ. ಆರು ತಿಂಗಳಿನಲ್ಲಿ ದೇಶದಾದ್ಯಂತ ಹಂತ ಹಂತವಾಗಿ ಒಟ್ಟು 200 ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇಡ್ರೈವ್ (eDrive) ಆ್ಯಪ್ ಮೂಲಕ ಕಂಪನಿಯ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯಬಹುದು. ಚಾರ್ಜಿಂಗ್ ಸ್ಲಾಟ್ ಸಹ ಬುಕ್ ಮಾಡಬಹುದು. 30 ನಿಮಿಷ ಚಾರ್ಜ್ ಮಾಡಿದರೆ 125 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು. HelloBPCL ಆ್ಯಪ್ ಮೂಲಕ ಹಣ ಪಾವತಿಸಬಹುದು.
ತನ್ನ 7 ಸಾವಿರ ಪೆಟ್ರೋಲ್ ಪಂಪ್‌ಗಳನ್ನು ಬಹುಬಗೆಯ ಇಂಧನ ಪೂರೈಕೆ ಮಾಡುವ ಕೇಂದ್ರಗಳಾಗಿ ಪರಿವರ್ತಿಸಲು ಕಂಪನಿಯು ಉದ್ದೇಶಿಸಿದೆ. ಇ.ವಿ. ಚಾರ್ಜಿಂಗ್ ಸೌಲಭ್ಯವನ್ನೂ ಇದು ಒಳಗೊಂಡಿರಲಿದೆ ಎಂದು ತಿಳಿಸಿದೆ.
ಸೌರ ವಿದ್ಯುತ್ ಚಾಲಿತ ಚಾರ್ಜರ್: ಚೆನ್ನೈ–ತಿರುಚ್ಚಿ–ಮಧುರೆ ಹೆದ್ದಾರಿ ಮಾರ್ಗದಲ್ಲಿನ ಒಂದು ಪೆಟ್ರೋಲ್ ಪಂಪ್‌ನಲ್ಲಿ ಸೌರ ವಿದ್ಯುತ್ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಪ್ರಾಯೋಗಿಕವಾಗಿ ಅದನ್ನು ಬಳಕೆ ಮಾಡಲಾಗುತ್ತಿದೆ. ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಉಳಿದ ಕಡೆಗಳಲ್ಲಿಯೂ ಅದನ್ನು ಅಳವಡಿಸುವ ಚಿಂತನೆ ಮಾಡಲಾಗುವುದು ಎಂದು ರವಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.