ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕ: ಕೆನರಾ ಬ್ಯಾಂಕ್‌ ಲಾಭ ₹ 1,333 ಕೋಟಿ

Last Updated 26 ಅಕ್ಟೋಬರ್ 2021, 11:41 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 1,333 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ₹ 444 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಎರಡು ಪಟ್ಟಿಗಿಂತಲೂ ಹೆಚ್ಚು ಏರಿಕೆ ಕಂಡಿದೆ.

ಬ್ಯಾಂಕ್‌ನ ಒಟ್ಟು ವರಮಾನವು ₹ 20,793 ಕೋಟಿಯಿಂದ ₹ 21,331 ಕೋಟಿಗೆ ಏರಿಕೆ ಆಗಿದೆ ಎಂದುಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ. ಪ್ರಭಾಕರ್‌ ಅವರುವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಯಾಂಕ್‌ನ ವಸೂಲಾಗದ ಸರಾಸರಿ ಸಾಲದ (ಜಿಎನ್‌ಪಿಎ) ಪ್ರಮಾಣವು 2020ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.21ರಷ್ಟು ಇತ್ತು. ಇದು 2021ರ ಸೆಪ್ಟೆಂಬರ್‌ನಲ್ಲಿ ಶೇ 8.42ಕ್ಕೆ ಏರಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 53,437 ಕೋಟಿಗಳಿಂದ ₹ 57,853 ಕೋಟಿಗೆ ಏರಿಕೆ ಕಂಡಿದೆ.

ನಿವ್ವಳ ಎನ್‌ಪಿಎ ಶೇ 3.42ರಿಂದ ಶೇ 3.21ಕ್ಕೆ ಇಳಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 21,063 ಕೋಟಿಯಿಂದ ₹ 20,861 ಕೋಟಿಗೆ ಇಳಿಕೆ ಆಗಿದೆ ಎಂದು ಅವರು ತಿಳಿಸಿದರು.

ಈ ಅವಧಿಯಲ್ಲಿ ಬಡ್ಡಿಯೇತರ ವರಮಾನ ಶೇ 95.10ರಷ್ಟು ಬೆಳವಣಿಗೆ ಕಂಡಿದೆ. ಚಾಲ್ತಿ ಮತ್ತು ಉಳಿತಾಯ ಖಾತೆ ಠೇವಣಿಗಳು ಶೇ 12.04ರಷ್ಟು ಪ್ರಗತಿ ಕಂಡಿವೆ. ರಿಟೇಲ್‌ ಮತ್ತು ಗೃಹ ಸಾಲಗಳು ಕ್ರಮವಾಗಿ ಶೇ 10.46 ಮತ್ತು ಶೇ 14.21ರಷ್ಟು ಬೆಳವಣಿಗೆ ಕಂಡಿವೆ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT