ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಲಾಕ್‌ಡೌನ್: ಭಾರತದಲ್ಲಿ 600 ಉದ್ಯೋಗಿಗಳ ವಜಾ ಮಾಡಲಿದೆ ಉಬರ್

ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ 600 ಉದ್ಯೋಗಿಗಳನ್ನು ವಜಾ ಮಾಡಲು ಉಬರ್ ಮುಂದಾಗಿದೆ. ಇದು ಕಂಪನಿಯ ಭಾರತದಲ್ಲಿರುವ ಒಟ್ಟು ಉದ್ಯೋಗಿಗಳ ನಾಲ್ಕನೇ ಒಂದರಷ್ಟಾಗಿರಲಿದೆ. ಇದರಲ್ಲಿ ಚಾಲನೆ, ಉದ್ಯಮ ಅಭಿವೃದ್ಧಿ, ಕಾನೂನು, ಹಣಕಾಸು, ನೀತಿ ನಿರೂಪಣೆಹಾಗೂ ಮಾರ್ಕೆಟಿಂಗ್ ವಿಭಾಗದವರು ಇರಲಿದ್ದಾರೆ ಎನ್ನಲಾಗಿದೆ.

‘ಕೊರೊನಾ ವೈರಸ್‌ ಅನಿರೀಕ್ಷಿತ ಹೊಡೆತದಿಂದಾಗಿ ಉಬರ್‌ಗೆ ಉದ್ಯೋಗ ಕಡಿತ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲ. 600 ಕಾಯಂ ಉದ್ಯೋಗಿಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಘೋಷಿಸಿರುವ ಜಾಗತಿಕ ಉದ್ಯೋಗ ಕಡಿತದಲ್ಲಿ ಇದೂ ಸೇರಿರಲಿದೆ’ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

‘ಉಬರ್ ತೊರೆಯುತ್ತಿರುವ ಸಹೋದ್ಯೋಗಿಗಳಿಗೆ ಮತ್ತು ಕಂಪನಿಯಲ್ಲಿರುವ ನಮಗೆಲ್ಲ ಇಂದು ಅತೀವ ದುಃಖದ ದಿನವಾಗಿದೆ. ನಾವೀಗ ಈ ನಿರ್ಧಾರ ಕೈಗೊಂಡಿರುವುದರಿಂದ ಭವಿಷ್ಯವನ್ನು ಆಶಾದಾಯಕವಾಗಿ ನೋಡಬಹುದಾಗಿದೆ’ ಎಂದು ಅವರು ಹೇಳಿದ್ದಾರೆ.

‘ಹೊರಹೋಗುತ್ತಿರುವ ಉದ್ಯೋಗಿಗಳ ಕ್ಷಮೆ ಕೋರುತ್ತೇನೆ. ಉಬರ್‌ಗಾಗಿ ಕೊಡುಗೆ ನೀಡಿದ್ದಕ್ಕೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಕನಿಷ್ಠ 10 ವಾರಗಳ ವೇತನ ಪಾವತಿಸಲಾಗುವುದು. ಮುಂದಿನ 6 ತಿಂಗಳುಗಳಿಗೆ ವೈದ್ಯಕೀಯ ವಿಮೆ, ಹೊರಗುತ್ತಿಗೆ ಬೆಂಬಲ ನೀಡಲಾಗುವುದು. ಅವರ ಬಳಿ ಇರುವ ಲ್ಯಾಪ್‌ಟಾಪ್‌ಗಳನ್ನು ಅವರಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡಲಾಗುವುದು. ಉಬರ್ ಟ್ಯಾಲೆಂಟ್ ಡೈರೆಕ್ಟರ್‌ಗೆ ಸೇರಲು ಅವಕಾಶ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT