ಗುರುವಾರ , ಜೂನ್ 4, 2020
27 °C

ಆರ್ಥಿಕತೆ ಹೆಚ್ಚಿನ ಕೊಡುಗೆ ನೀಡುವ 8 ರಾಜ್ಯಗಳಿಗೆ ಹಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 60ರಷ್ಟು ಕೊಡುಗೆ ನೀಡುತ್ತಿರುವ 8 ರಾಜ್ಯಗಳು ಕೋವಿಡ್‌–19ನಿಂದ ಅತಿ ಹೆಚ್ಚು ಹಾನಿಗೆ ಗುರಿಯಾಗಿವೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಹೆಚ್ಚು ಬಾಧಿತವಾಗಿವೆ. ಉದ್ಯೋಗ ಸೃಷ್ಟಿಯಲ್ಲಿ ಈ ರಾಜ್ಯಗಳ ಕೊಡುಗೆ ಶೇ 58ರಷ್ಟಿದೆ ಎಂದು ತಿಳಿಸಿದೆ.

ಲಾಕ್‌ಡೌನ್‌ ಅವಧಿಯನ್ನು ಮೇ 31ರವರೆಗೂ ವಿಸ್ತರಿಸಲಾಗಿದ್ದು, ವಲಯವಾರು ನಿಯಮ ಸಡಿಲಿಸುವ ನಿರ್ಧಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಆದರೆ, ಈ ರಾಜ್ಯಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಹೀಗಾಗಿ ಮಹಾರಾಷ್ಟ್ರ ಒಳಗೊಂಡು ಅತಿ ಹೆಚ್ಚು ಬಾಧಿತ ರಾಜ್ಯಗಳಲ್ಲಿ ಕೆಲವು ರಾಜ್ಯಗಳು ನಿರ್ಬಂಧವನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲು ನಿರ್ಧರಿಸಿವೆ.

ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್‌ ರಾಜ್ಯಗಳು ಕೈಗಾರಿಕೆ ಮತ್ತು ಸೇವೆಗಳ ವರಮಾನದ ಮೇಲೆ ಅವಲಂಬಿತವಾಗಿವೆ. ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಪೆಟ್ರೋಲಿಯಂ, ಮದ್ಯ ಮತ್ತು ಸ್ಟ್ಯಾಂಪ್‌ ಶುಲ್ಕದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ವರಮಾನಕ್ಕೆ ಪೆಟ್ಟು ಬಿದ್ದಿದೆ.

ಕೃಷಿಯ ಮೇಲೆ ಹೆಚ್ಚು ಅವಲಂಬಿತ ರಾಜ್ಯಗಳಾದ ಆಂಧ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆಯಾದರೆ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸುವ ನಿರೀಕ್ಷೆ ಇದೆ.

ಕಡಿಮೆ ಬಾಧಿತ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದ ಕೈಗಾರಿಕೆ ಮತ್ತು ಸೇವೆಗಳ ಮೇಲೆ ಹೆಚ್ಚಿನ ಅವಲಂಬನೆ ಇರುವ ಕರ್ನಾಟಕ ಮತ್ತು ಕೇರಳದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು