ಬೆಂಗಳೂರು: ಪ್ರಿಸಿಷನ್ ಎಂಡಿಆರ್ ಕ್ಷೇತ್ರದ ಮುಂಚೂಣಿ ಕಂಪನಿಗಳ ಪೈಕಿ ಒಂದಾಗಿರುವ ಡೀಪ್ವಾಚ್ ಬೆಂಗಳೂರಿನಲ್ಲಿ ತನ್ನ ಹೊಸ ಜಿಸಿಸಿ (ಜಾಗತಿಕ ಸಾಮರ್ಥ್ಯ ಕೇಂದ್ರ) ಆರಂಭಿಸಿದೆ.

ಕಂಪನಿಯ ಜಾಗತಿಕ ಮಟ್ಟದ ವಿಸ್ತರಣಾ ಯೋಜನೆಯಲ್ಲಿ ಇದೊಂದು ಮಹತ್ವದ ಹೆಜ್ಜೆ. ಡೀಪ್ವಾಚ್ ಕಂಪನಿಯ ಈ ಕಚೇರಿಯು ಪ್ರಧಾನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಿನಲ್ಲಿ ಆರಂಭಿಸಿರುವ ಹೊಸ ಜಿಸಿಸಿ ಕೇಂದ್ರವು ಡೀಪ್ವಾಚ್ ಕಂಪನಿಗೆ ಭಾರತದ ಅತ್ಯುತ್ತಮ ಸಾಫ್ಟ್ವೇರ್ ಎಂಜಿನಿಯರ್ಗಳ, ಏಜೆಂಟಿಕ್ಎ.ಐ ಮತ್ತು ಸೈಬರ್ ಭದ್ರತಾ ಕ್ಷೇತ್ರದ ಎಂಜಿನಿಯರ್ಗಳ ಪ್ರತಿಭೆಯನ್ನು ಬಳಸಿಕೊಳ್ಳಲು ನೆರವು ನೀಡಲಿದೆ.

ಜಿಸಿಸಿ ಆರಂಭದ ಮೂಲಕ ಕಂಪನಿಯು ಭಾರತದಲ್ಲಿ ಮಾಡಿರುವ ಹೂಡಿಕೆಯು ಸೈಬರ್ ಭದ್ರತಾ ಕ್ಷೇತ್ರದಲ್ಲಿ ಜಾಗತಿಕ ದರ್ಜೆಯ ಸಂಶೋಧನೆ ಕೈಗೊಳ್ಳಲು ಭಾರತವನ್ನೇ ಮುಖ್ಯ ಕೇಂದ್ರವನ್ನಾಗಿ ಬೆಳೆಸುವ ಕಂಪನಿಯ ಇರಾದೆಯನ್ನು ತೋರಿಸುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಜಿಸಿಸಿ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಡೀಪ್ವಾಚ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಾನ್ ಡಿಲುಲ್ಲೊ ಅವರು, ‘ಬೆಂಗಳೂರಿನ ಈ ಕಚೇರಿಯು, ಕಚೇರಿ ಮಾತ್ರವೇ ಅಲ್ಲ; ಇದು ಸೈಬರ್ ಉದ್ಯಮಕ್ಕೆ ಅತ್ಯುತ್ತಮ ಎ.ಐ ಆಧಾರಿತ ಸೇವೆಗಳನ್ನು ಒದಗಿಸುವ ನಮ್ಮ ಬದ್ಧತೆಯ ಸಂಕೇತವೂ ಹೌದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.