ಉಳಿತಾಯ ಮತ್ತು ಹೂಡಿಕೆ ಎಂಬ ಪದಗಳನ್ನು ಜನರು ಹಲವು ಬಾರಿ ಒಂದೇ ಅರ್ಥದಲ್ಲಿ ಬಳಸುತ್ತಾರೆ. ಆದರೆ ವಾಸ್ತವದಲ್ಲಿ ಇವು ಎರಡು ವಿಭಿನ್ನ ಹಣಕಾಸು ಪರಿಕಲ್ಪನೆಗಳು. ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಅಪಾಯ (Risk). ಉಳಿತಾಯವು ಸಾಮಾನ್ಯವಾಗಿ ಕಡಿಮೆ ಅಪಾಯವನ್ನು ಒಳಗೊಂಡಿರುತ್ತದೆ. ಹೂಡಿಕೆಯಲ್ಲಿ ಅಪಾಯ ಹೆಚ್ಚಾದರೂ ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಗತ್ಯ.
.ತುರ್ತು ನಿಧಿ ಎಂಬ ಭವಿಷ್ಯದ ಆಪದ್ಬಾಂಧವ: ಹಣ ಕೂಡಿಡುವುದು ಹೇಗೆ?.
ಉಳಿತಾಯವೆಂದರೆ ಭವಿಷ್ಯದ ಬಳಕೆಗಾಗಿ ಹಣವನ್ನು ತೆಗೆದಿಡುವ ಒಂದು ಪ್ರಕ್ರಿಯೆ. ಜನರು ಪೂರ್ವಯೋಜಿತ ಖರ್ಚುಗಳು ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಹಣವನ್ನು ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಉಳಿತಾಯಕ್ಕಾಗಿ ಹೆಚ್ಚಿನ ಬಡ್ಡಿ ನೀಡುವ ಉಳಿತಾಯ ಖಾತೆ (High-Yield Savings Account) ಅಥವಾ ಅವಧಿ ಠೇವಣಿ (Certificate of Deposit – CD)ಗಳನ್ನು ಬಳಸಬಹುದು. ಈ ಖಾತೆಗಳಲ್ಲಿ ಹಣವನ್ನು ಇಟ್ಟರೆ ಕಾಲಕ್ರಮೇಣ ಬಡ್ಡಿ ದೊರೆಯುತ್ತದೆ. ಸಾಮಾನ್ಯವಾಗಿ ಉಳಿತಾಯವು ಕಡಿಮೆ ಅಪಾಯವನ್ನು ಹೊಂದಿರುತ್ತದೆ.

ಉಳಿತಾಯ ಖಾತೆಯಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿರುತ್ತದೆ. ಆದರೆ, ಉಳಿತಾಯ ಖಾತೆಗೆ ದೊರೆಯುವ ಬಡ್ಡಿದರಕ್ಕೂ ಹಣದುಬ್ಬರಕ್ಕೂ ಹೆಚ್ಚಿನ ಅಂತರ ಇರುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ನಿಮ್ಮಲ್ಲಿರುವ ಹಣದ ಖರೀದಿ ಶಕ್ತಿ ಕಡಿಮೆಯಾಗಬಹುದು.ಅಂದರೆ ಹಣದ ಮೌಲ್ಯ ಕಡಿಮೆಯಾಗಬಹುದು.

ಉದಾಹರಣೆಗೆ, ಪ್ರತಿ ತಿಂಗಳು ಸಂಬಳದ ಒಂದು ಭಾಗವನ್ನು ಉಳಿತಾಯ ಖಾತೆಗೆ ಹಾಕುವುದು ಉಳಿತಾಯದ ಒಂದು ಉತ್ತಮ ಅಭ್ಯಾಸ. ಹಾಗೆಯೇ, ನೀವು ಹೊಸ ಲ್ಯಾಪ್ಟಾಪ್ ಖರೀದಿಸಲು ₹ 80 ಸಾವಿರ ಉಳಿಸಬೇಕೆಂದಿದ್ದರೆ ಮತ್ತು ಅದಕ್ಕೆ 10 ತಿಂಗಳು ಸಮಯವಿದ್ದರೆ, ಪ್ರತಿ ತಿಂಗಳು ₹ 8 ಸಾವಿರ ಉಳಿತಾಯ ಮಾಡುವ ಮೂಲಕ ನಿಮ್ಮ ಗುರಿಯನ್ನು ಸಾಧಿಸಬಹುದು. ಇದರಿಂದ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಡ್ಡಿ ಪಾವತಿಸುವ ಅಗತ್ಯವಿಲ್ಲ. ಕೆಲವೊಮ್ಮೆ ಸ್ವಯಂಚಾಲಿತ ವರ್ಗಾವಣೆ ವ್ಯವಸ್ಥೆಯನ್ನು ಬಳಸುವುದರಿಂದ ಉಳಿತಾಯ ನಿರಂತರವಾಗಿರುತ್ತದೆ.
.ಮ್ಯೂಚುವಲ್ ಫಂಡ್: ಪೋರ್ಟ್ಫೋಲಿಯೊ ಕಟ್ಟುವ ಮುನ್ನ....
ಉಳಿತಾಯವು ಅನಿರೀಕ್ಷಿತ ಸಂದರ್ಭಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಮದ್ಯಮ ವರ್ಗದದರಿಗೆ ಇದು ಕಡಿಮೆ ಅವಧಿಯ ಗುರಿಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ಜೊತೆಗೆ ಹಣದ ನಷ್ಟದ ಅಪಾಯ ಕಡಿಮೆ ಇರುತ್ತದೆ. ಆದರೆ, ಹೆಚ್ಚಿನ ಲಾಭವನ್ನು ನೀಡುವ ಇತರ ಕೆಲವು ಹೂಡಿಕೆ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಹಣದುಬ್ಬರದಿಂದ ಹಣದ ನಿಜವಾದ ಮೌಲ್ಯ ಕುಸಿಯಬಹುದು.

ಉಳಿತಾಯವು ಹಣಕಾಸು ಯೋಜನೆಯ ಅವಿಭಾಜ್ಯ ಭಾಗವಾದರೂ, ಹೂಡಿಕೆಯೊಂದಿಗೆ ಹೋಲಿಕೆ ಮಾಡಿ ಸಮತೋಲನ ಕಾಪಾಡುವುದುಇಂದಿನ ದಿನಗಳಲ್ಲಿ ಅತ್ಯಗತ್ಯ. ಶಿಸ್ತುಬದ್ಧ ಉಳಿತಾಯವು ನಿಮ್ಮ ತುರ್ತು ನಿಧಿ ನಿರ್ಮಾಣಕ್ಕೆ ಸಹಾಯಕವಾಗುತ್ತದೆ. ಇದರಿಂದ ನಿಮ್ಮ ಹತ್ತಿರದ ದಿನಗಳ ಅಥವಾ ಮಧ್ಯಾವಧಿಯಂತಹ ಗುರಿಗಳಿಗೆ ಉಪಯುಕ್ತವಾಗುತ್ತದೆ.

ಉತ್ತಮ ಉಳಿತಾಯ ಮಾರ್ಗಗಳಿಂದ ನಷ್ಟದ ಅಪಾಯ ಬಹಳ ಕಡಿಮೆಯಿರುತ್ತದೆ. ಆದರೆ, ಕೇವಲ ಉಳಿತಾಯದಿಂದ ನಿಮ್ಮ ಹಣದ ಮೇಲೆ ಕಡಿಮೆ ಲಾಭ ದೊರೆಯುತ್ತದೆ. ಇದು ಮುಂದಿನ ದಿನಗಳಲ್ಲಿ ಬರಬಹುದಾದ ಹಣದುಬ್ಬರದ ಅಪಾಯವನ್ನು ಎದುರಿಸಲು ಕೇವಲ ಉಳಿತಾಯದಿಂದ ಸಾಕಾಗುವುದಿಲ್ಲ. ನಿಮ್ಮ ಹಣವನ್ನು ಹೆಚ್ಚಿನ ಲಾಭಗಳಿಸಲು ವಿನಿಯೋಗಿಸುವ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಹೂಡಿಕೆ ಎಂದರೆ ಹಣವನ್ನು ಷೇರುಗಳು, ಬಾಂಡ್ಗಳು, ಮ್ಯೂಚುವಲ್ ಫಂಡ್ಗಳು ಮುಂತಾದ ಹಣಕಾಸು ಸಾಧನಗಳಲ್ಲಿ ಹೂಡುವ ಮೂಲಕ ಅದರ ಮೌಲ್ಯವನ್ನು ಕಾಲಕ್ರಮೇಣ ಹೆಚ್ಚಿಸುವುದು. ಹಾಗಾಗಿ, ಉಳಿತಾಯಕ್ಕಿಂತ ಉತ್ತಮ ರೀತಿಯ ಹೂಡಿಕೆಯಲ್ಲಿ ಅಪಾಯ ಹೆಚ್ಚಾದರೂ, ದೀರ್ಘಾವಧಿಯಲ್ಲಿ ಅವುಗಳಿಂದ ಬರುವ ಹೆಚ್ಚಿನ ಆದಾಯದ ಸಾಧ್ಯತೆ ಇರುತ್ತದೆ.
.Mutual Fund Investment: ಎಂ.ಎಫ್ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?.
ಉಳಿತಾಯದ ಹಣದಿಂದ ಜವಾಬ್ದಾರಿಯುತ ಹೂಡಿಕೆಯು ನಿಮ್ಮ ಅಥವಾ ನಿಮ್ಮ ಮಕ್ಕಳ ಉನ್ನತ ಶಿಕ್ಷಣ, ನಿಮ್ಮ ಕನಸಿನ ಮನೆ ಖರೀದಿ ಅಥವಾ ನಿವೃತ್ತಿ ಜೀವನದಂತಹ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೂಡಿಕೆ ಮಾಡುವಾಗ ನಿಮ್ಮ ಹೂಡಿಕೆಯ ಗುರಿ, ನಿಮ್ಮ ಅಪಾಯ ಸಹಿಷ್ಣುತೆಯ ಮಟ್ಟ ಮತ್ತು ನಿಮಗೆ ಇರುವ ಸಮಯಾವಧಿಯಂತಹ ಅಂಶಗಳನ್ನು ಪರಿಗಣಿಸಬೇಕು.

ಕೆಲವೊಂದು ಹೂಡಿಕೆಯಿಂದ ಬರುವ ಲಾಭಕ್ಕೆ ಯಾವುದೇ ಖಾತರಿ ಇಲ್ಲ. ಉದಾಹರಣೆಗೆ, ನೀವು ಷೇರು ಖರೀದಿಸಿದ ಕಂಪನಿ ದಿವಾಳಿಯಾದರೆ ನಿಮ್ಮ ಹೂಡಿಕೆಯ ಮೌಲ್ಯ ಕುಸಿಯಬಹುದು. ಆದರೆ, ಬ್ಯಾಂಕ್ನ ನಿಶ್ಚಿತ ಬಡ್ಡಿಯು ಒಂದು ದರಕ್ಕೆ ಸಿಮಿತವಾಗಿರುವುದರಿಂದ ಲಾಭದ ಖಾತರಿಯಿರುತ್ತದೆ. ಆದ್ದರಿಂದ ಅಪಾಯ, ಲಾಭಗಳನ್ನು ಲೆಕ್ಕಾಚಾರ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಪಾಯವನ್ನು ಕಡಿಮೆ ಮಾಡಬೇಕು.

ನಿವೃತ್ತಿ ಯೋಜನೆಯು ಹೂಡಿಕೆಯ ಉತ್ತಮ ಉದಾಹರಣೆ. ಇದರಲ್ಲಿ ಉದ್ಯೋಗಿಗಳು ಸಂಬಳದ ಒಂದು ಭಾಗವನ್ನು ಹೂಡಿಕೆ ಮಾಡುತ್ತಾರೆ. ಕೆಲವೊಮ್ಮೆ ಉದ್ಯೋಗದಾತರು ಸಹ ಅದಕ್ಕೆ ಹೊಂದಾಣಿಕೆಯಗುವಂತೆ ಹೂಡಿಕೆ ಮಾಡುತ್ತಾರೆ. ಕೆಲವು ಹೂಡಿಕೆಗಳು ತೆರಿಗೆ ಸೌಲಭ್ಯದಂತಹ ಲಾಭವನ್ನೂ ತಂದುಕೊಡುತ್ತವೆ.

ಉದಾಹರಣೆಗೆ, ಸುಕನ್ಯ ಸಮೃದ್ಧಿಯಂತಹ ಹೂಡಿಕೆಗಳು,NSC ಖರೀದಿ, ಜೀವ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವುದು. ಹಾಗಾಗಿ, ನಿಯಮಿತ ಹೂಡಿಕೆಯ ಮೂಲಕ ಚಕ್ರಬಡ್ಡಿಯ ಲಾಭವನ್ನು ಪಡೆದು ನಿವೃತ್ತಿ ನಿಧಿಯನ್ನು ದೊಡ್ಡದಾಗಿ ಬೆಳೆಸಬಹುದು.
.ನಿವೃತ್ತಿ ನಂತರ ಮುಂದೇನು? ಮಧ್ಯಮ ವರ್ಗದ ಈ ಚಿಂತೆಗೆ ಪರಿಹಾರ ಏನು?.
ಲಾಭದಾಯಕ ಹೂಡಿಕೆಗಳಲ್ಲಿ ಮೊದಲು ಈ ಹೇಳಿದ ಉಳಿತಾಯಕ್ಕಿಂತ ಹೆಚ್ಚಿನ ಆದಾಯ ಬರುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ವಿವಿಧ ರೀತಿಯ ಹೂಡಿಕೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದರಿಂದ ನಿಮ್ಮ ಹೂಡಿಕೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ, ಕೆಲವು ಹೂಡಿಕೆಯಲ್ಲಿ ನಷ್ಟದ ಅಪಾಯವೂ ಇರುತ್ತದೆ. ಉದಾಹರಣೆಗೆ, ಷೇರು ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತದಿಂದ ನಿಮ್ಮ ಮೂಲ ಹೂಡಿಕೆಯನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ, ಹೂಡಿಕೆಯಲ್ಲಿ, ನಿಯಮಿತವಾದ ಶಿಸ್ತು ಮತ್ತು ಲಾಭದ ಬರುವಿಕೆಗಾಗಿ ಕಾಯುವ ಸಹನೆಯ ಅಗತ್ಯವಿದೆ. ಈ ರೀತಿಯ ದೀರ್ಘಾವಧಿ ದೃಷ್ಟಿಕೋನವನ್ನು ಹೊಂದಿರುವ ಅವಶ್ಯಕತೆಯಿದೆ.

ಉಳಿತಾಯ ಮತ್ತು ಹೂಡಿಕೆಯನ್ನು ಯಾವಾಗ ಮಾಡಬೇಕು?

ಉಳಿತಾಯ ಅಥವಾ ಹೂಡಿಕೆ ಮಾಡಬೇಕೆಂಬ ನಿರ್ಧಾರವು ಆ ವ್ಯಕ್ತಿಯ ಗುರಿ, ಅವನ ಆದಾಯ ಮತ್ತು ಅಪಾಯ ಸಹಿಷ್ಣುತೆ ಮೇಲೆ ಅವಲಂಬಿತವಾಗಿದೆ. ಯುವಕರಿಗೆ ಸಮಯ ಇರುವುದರಿಂದ, ಅವರು ದೀರ್ಘಾವಧಿಯ ಹೂಡಿಕೆಗಳಿಂದ ಹೆಚ್ಚಿನ ಲಾಭ ಪಡೆಯಬಹುದು. ಕಡಿಮೆ ಅವಧಿಯ ಗುರಿಗಳಿಗಾಗಿ ಉಳಿತಾಯವು ಉತ್ತಮ ಆಯ್ಕೆ ಎನ್ನಬಹುದು. ನೆನಪಿಡಿ ಹೂಡಿಕೆ ಆರಂಭಿಸುವ ಮೊದಲು ಕನಿಷ್ಠ ಮೂರರಿಂದ ಆರು ತಿಂಗಳ ಖರ್ಚಿಗೆ ಬೇಕಾದ ತುರ್ತು ನಿಧಿಯನ್ನು ಹೊಂದಿರಬೇಕು.

ಉತ್ತಮ ಉಳಿತಾಯವು ಜನರಿಗೆ ಭದ್ರತೆ ಮತ್ತು ತಕ್ಷಣ ಹಣದ ಲಭ್ಯತೆಯನ್ನು ಒದಗಿಸುತ್ತದೆ. ಆದರೆ, ಹೂಡಿಕೆಯು ಹಣದುಬ್ಬರವನ್ನು ಮೀರಿ ದೀರ್ಘಾವಧಿಯ ಸಂಪತ್ತು ನಿರ್ಮಿಸಲು ಸಹಾಯ ಮಾಡುತ್ತದೆ. ಈ ಎರಡರ ಸಮತೋಲನವು ಇಂದಿನ ಸುರಕ್ಷತೆ ಮತ್ತು ನಾಳೆಯ ಸಮೃದ್ಧಿಯನ್ನು ಖಚಿತಪಡಿಸಲು ಸಹಾಯಕವಾಗುತ್ತದೆ. ಉಳಿತಾಯ ಮತ್ತು ಹೂಡಿಕೆ ಎರಡೂ ಆರೋಗ್ಯಕರ ಹಣಕಾಸು ಯೋಜನೆಯ ಅವಿಭಾಜ್ಯ ಭಾಗಗಳು. ಉಳಿತಾಯ ಜೀವನದ ಅನಿರೀಕ್ಷಿತ ಹೊಡೆತಗಳ ಎದುರು ರಕ್ಷಣೆ ನೀಡುತ್ತದೆ. ಹೂಡಿಕೆಯು ಭವಿಷ್ಯದ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ಸರಿಯಾದ ಸಮತೋಲನದೊಂದಿಗೆ ಎರಡನ್ನೂ ಅನುಸರಿಸಿದರೆ ಆರ್ಥಿಕ ಸ್ಥಿರತೆ ಮತ್ತು ಭದ್ರ ಭವಿಷ್ಯವನ್ನು ನಿರ್ಮಿಸಬಹುದು.
.ಯಾರಿಗೆ ಸಾಲುತ್ತದೆ ಸಂಬಳ ಎನ್ನುತ್ತೀರಾ? ಹೀಗೆ ಮಾಡಿ ಉಳಿತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.