ನವದೆಹಲಿ: ಐಷಾರಾಮಿ ಬೆಲೆಯ ವಿದ್ಯುತ್ಚಾಲಿತ ವಾಹನಗಳ (ಇ.ವಿ) ಮೇಲಿನ ತೆರಿಗೆ ಹೆಚ್ಚಿಸುವಂತೆ ತೆರಿಗೆ ಸಮಿತಿ ಪ್ರಸ್ತಾಪಿಸಿದೆ.

ಇದು ಟೆಸ್ಲಾ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಬಿವೈಡಿಯಂತಹ ಕಾರು ತಯಾರಕ ಕಂಪನಿಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಪ್ರಸ್ತುತ ಎಲ್ಲ ವಿದ್ಯುತ್ಚಾಲಿತ ವಾಹನಗಳಿಗೆ ಶೇ 5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಈ ಜಿಎಸ್ಟಿಯನ್ನು ₹20 ಲಕ್ಷದಿಂದ ₹40 ಲಕ್ಷದವರೆಗಿನ ಬೆಲೆಯ ವಾಹನಗಳಿಗೆ ಶೇ 18ಕ್ಕೆ ಹೆಚ್ಚಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ₹40 ಲಕ್ಷಕ್ಕಿಂತ ಮೇಲಿರುವ ವಾಹನಗಳಿಗೆ ಶೇ 28ರಷ್ಟು ಜಿಎಸ್ಟಿ ವಿಧಿಸುವಂತೆಯೂ ಪ್ರಸ್ತಾಪಿಸಿದೆ.

ಆದರೆ, ಕೇಂದ್ರ ಸರ್ಕಾರವು, ಶೇ 28ರಷ್ಟು ತೆರಿಗೆ ದರವನ್ನು ತೆಗೆದು ಹಾಕಲು ನಿರ್ಧರಿಸಿದೆ. ಹೀಗಾಗಿ, ಜಿಎಸ್ಟಿ ಮಂಡಳಿ ಇ.ವಿಗಳ ಮೇಲಿನ ತೆರಿಗೆಯನ್ನು ಶೇ 18ಕ್ಕೆ ಹೆಚ್ಚಿಸುವ ಅಥವಾ ಕೆಲವು ಐಷಾರಾಮಿ ಸರಕುಗಳಿಗಾಗಿ ಹೊಸದಾಗಿ ಯೋಜಿಸಿರುವ ಶೇ 40ರ ವರ್ಗಕ್ಕೆ ಸೇರಿಸುವ ಆಯ್ಕೆ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ ತಿಂಗಳಿನಲ್ಲಿ ಟಾಟಾ ಮೋಟರ್ಸ್ ದೇಶದ ವಿದ್ಯುತ್ಚಾಲಿತ ಕಾರುಗಳ ಮಾರುಕಟ್ಟೆಯಲ್ಲಿ ಶೇ 40ರಷ್ಟು ಪಾಲನ್ನು ಹೊಂದಿತ್ತು. ಮಹೀಂದ್ರ ಆ್ಯಂಡ್ ಮಹೀಂದ್ರ (ಶೇ 18), ಬಿವೈಡಿ (ಶೇ 3) ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯು ತಲಾ ಶೇ 2ರಷ್ಟು ಪಾಲು ಹೊಂದಿವೆ. ಟೆಸ್ಲಾ, ವಾಹನಗಳ ಬುಕಿಂಗ್ ಮಾತ್ರ ಪ್ರಾರಂಭಿಸಿದೆ, ವಿತರಣೆ ಇನ್ನು ಆರಂಭಿಸಿಲ್ಲ.

ಇಂದಿನಿಂದ ಸಭೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 3 ಮತ್ತು 4ರಂದು ಜಿಎಸ್ಟಿ ಮಂಡಳಿ ಸಭೆ ನಡೆಯಲಿದೆ. ಸಭೆಯು ಜಿಎಸ್ಟಿ ದರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.