ನವದೆಹಲಿ: ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಉಗ್ರಾಣಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಅಳವಡಿಕೆಗೆ ಯೋಜನೆ ರೂಪಿಸಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.
561 ಉಗ್ರಾಣಗಳಲ್ಲಿ ಒಟ್ಟು 23,750 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಆಧುನಿಕ ಐಪಿ–ಆಧಾರಿತ ಈ ಕಣ್ಗಾವಲು ವ್ಯವಸ್ಥೆಯಿಂದ ಗುಣಮಟ್ಟದ ವಿಡಿಯೊ ಮತ್ತು ಛಾಯಾಚಿತ್ರಗಳು ದೊರೆಯುತ್ತವೆ ಎಂದು ಹೇಳಿದೆ.
ಎಫ್‌ಸಿಐನ ಕೇಂದ್ರ ಕಚೇರಿಯಲ್ಲಿರುವ ಕಮಾಂಡೊ ನಿಯಂತ್ರಣ ಕೇಂದ್ರ ಹಾಗೂ ನೆಟ್‌ವರ್ಕ್ ಕಾರ್ಯಾಚರಣೆ ಕೇಂದ್ರದಿಂದ ಈ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಕಮಾಂಡೊ ಕೇಂದ್ರದ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಈ ವ್ಯವಸ್ಥೆಯಿಂದ ಉಗ್ರಾಣಗಳಲ್ಲಿನ ಪ್ರತಿದಿನ ನಡೆಯುವ ಕಾರ್ಯಾಚರಣೆ ಮೇಲೆ ನಿಗಾವಹಿಸಲು ಎಫ್‌ಸಿಐಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.