ಬೆಂಗಳೂರು: ಸಾಲು ಸಾಲು ಹಬ್ಬಗಳು ಹತ್ತಿರವಾಗಿರುವ ಈ ಹೊತ್ತಿನಲ್ಲಿ 28 ರಾಜ್ಯಗಳಲ್ಲಿ 2.2 ಲಕ್ಷಕ್ಕೂ ಹೆಚ್ಚಿನ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿ ಮಾಡಿರುವುದಾಗಿ ಇ–ವಾಣಿಜ್ಯ ಕ್ಷೇತ್ರದ ದೈತ್ಯ ಕಂಪನಿ ಫ್ಲಿಪ್ಕಾರ್ಟ್ ಹೇಳಿದೆ.

ಸರಕು ಸಾಗಣೆ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ, ಗ್ರಾಹಕನ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ಕೆಲಸಗಳಿಗಾಗಿ ಈ ಪ್ರಮಾಣದಲ್ಲಿ ಉದ್ಯೋಗದ ಸೃಷ್ಟಿ ಆಗಿದೆ ಎಂದು ಅದು ಹೇಳಿದೆ.

ಕಂಪನಿಯ ಸರಕು ಸಾಗಣೆ ಜಾಲವು ಹಬ್ಬಗಳ ಸಂದರ್ಭದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಹೊಸದಾಗಿ 650 ಡೆಲಿವರಿ ಕೇಂದ್ರಗಳನ್ನು ಆರಂಭಿಸಲಿದೆ. ಇವು ಎರಡನೆಯ ಹಾಗೂ ಮೂರನೆಯ ಹಂತದ ನಗರಗಳಲ್ಲಿ ಇರಲಿವೆ ಎಂದು ಕಂಪನಿ ತಿಳಿಸಿದೆ.

ಮಹಿಳೆಯರ ನೇಮಕದಲ್ಲಿ ಶೇ 10ರಷ್ಟು ಹೆಚ್ಚಳ ಆಗಿದೆ, ಹಬ್ಬಗಳ ಸಂದರ್ಭದಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಗಮನ ನೀಡಲಾಗಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.

ತಾತ್ಕಾಲಿಕ ಅವಧಿಗೆ 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವುದಾಗಿ ಅಮೆಜಾನ್ ಇಂಡಿಯಾ ಕಂಪನಿಯು ಈ ತಿಂಗಳ ಆರಂಭದಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.