ಬುಧವಾರ, ಮಾರ್ಚ್ 22, 2023
26 °C
ಫ್ಲಿಪ್‌ಕಾರ್ಟ್ ವಾರ್ಷಿಕ ವಿಶೇಷ ಮಾರಾಟ ದಿನಾಂಕವನ್ನು ಪ್ರಕಟಿಸಿದೆ.

Flipkart | ಬಿಗ್ ಬಿಲಿಯನ್ ಡೇಸ್ 2022 ವಿಶೇಷ ಮಾರಾಟ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೇಶದ ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್, ವಾರ್ಷಿಕ ವಿಶೇಷ ಮಾರಾಟ ಕೊಡುಗೆಗಳ ‘ಬಿಗ್ ಬಿಲಿಯನ್ ಡೇಸ್‘ ಸೇಲ್ ನಡೆಸಲು ಸಜ್ಜಾಗಿದೆ.

ಸೆಪ್ಟೆಂಬರ್ 23ರಿಂದ 30ರವರೆಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ವಿಶೇಷ ಮಾರಾಟ ನಡೆಯಲಿದೆ ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ಹಾಗೂ ಗೃಹ ಬಳಕೆಯ ಉಪಕರಣ, ಫ್ಯಾಶನ್ ಸಹಿತ ವಿವಿಧ ಉತ್ಪನ್ನಗಳು ಬಿಗ್ ಬಿಲಿಯನ್ ಡೇಯ್ಸ್ ಸೇಲ್ ಮೂಲಕ ಗ್ರಾಹಕರಿಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ಸೇಲ್ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಮತ್ತು ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆಗೆ ಶೇ 10ರಷ್ಟು ಡಿಸ್ಕೌಂಟ್ ದೊರೆಯಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಉಳಿದಂತೆ, ಫ್ಲಿಪ್‌ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆಗೆ ಡಿಸ್ಕೌಂಟ್ ಮತ್ತು ಕ್ಯಾಶ್‌ಬ್ಯಾಕ್ ಇರಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು