ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ, 100 ಶತಕೋಟಿ ಡಾಲರ್ ಒಡೆಯ

Last Updated 3 ಏಪ್ರಿಲ್ 2022, 2:42 IST
ಅಕ್ಷರ ಗಾತ್ರ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ 100 ಶತಕೋಟಿ ಡಾಲರ್‌ (7.59 ಲಕ್ಷ ಕೋಟಿ ರೂಪಾಯಿ) ನ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಜಾಗತಿಕ ಸೂಚ್ಯಂಕದಲ್ಲಿ ಅದಾನಿ 10ನೇ ಸ್ಥಾನದಲ್ಲಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 11 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ಸೆಂಟಿಬಿಲಿಯನೇರ್ (100 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವರು) ಕೂಡ ಆಗಿದ್ದಾರೆ. ಕಳೆದ ವರ್ಷದ ತನ್ನ ನಿವ್ವಳ ಮೌಲ್ಯಕ್ಕೆ ಅದಾನಿ ಈ ವರ್ಷ 23.5 ಶತಕೋಟಿ ಡಾಲರ್ ಅನ್ನು ಸೇರಿಸಿದ್ದಾರೆ. ಇದು ಪಟ್ಟಿಯಲ್ಲಿ ಅತ್ಯಧಿಕವಾಗಿದೆ. ಇದೇ ಅವಧಿಯಲ್ಲಿ ಅಂಬಾನಿ ತಮ್ಮ ನಿವ್ವಳ ಮೌಲ್ಯವನ್ನು 9.03 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ಅದಾನಿ ಗ್ರೂಪ್‌ನ 59 ವರ್ಷದ ಸಂಸ್ಥಾಪಕ, ಬಂದರುಗಳು ಮತ್ತು ಏರೋಸ್ಪೇಸ್‌ನಿಂದ ಉಷ್ಣ ಶಕ್ತಿ ಮತ್ತು ಕಲ್ಲಿದ್ದಲಿನವರೆಗಿನ ಹಲವು ಕಂಪನಿಗಳ ಮಾಲೀಕತ್ವ ಹೊಂದಿದ್ದಾರೆ. ಸದ್ಯ ಏಷ್ಯಾದ ಶ್ರೀಮಂತರಾಗಿರುವ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣದ ಮಾಲೀಕರೂ ಆಗಿದ್ದಾರೆ.

ಟೆಸ್ಲಾದ ಎಲೊನ್‌ ಮಸ್ಕ್‌ 273 ಬಿಲಿಯನ್ ಶತಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಅಮೆಜಾನ್‌ನ ಜೆಫ್ ಬೆಜೋಸ್ 188 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಫೇಸ್‍‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಹಿಂದಿಕ್ಕಿದ್ದರು. ಮೆಟಾ ಕಂಪನಿಯ ಷೇರುಗಳು ಒಂದು ದಿನದ ದಾಖಲೆಯ ಕುಸಿತ ಕಂಡ ಬಳಿಕ 29 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT