ಶನಿವಾರ, ಜನವರಿ 16, 2021
27 °C

10 ಗ್ರಾಂ ಚಿನ್ನದ ದರ ₹ 1,324ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಮುಂಬೈ: ದೇಶದಲ್ಲಿ ಮಂಗಳವಾರ ಚಿನ್ನದ ದರ 10ಗ್ರಾಂಗೆ ಗರಿಷ್ಠ ₹ 1,324ರಷ್ಟು ಹಾಗೂ ಬೆಳ್ಳಿ ದರ ಕೆ.ಜಿಗೆ ಗರಿಷ್ಠ ₹ 1,782ರಷ್ಟು ಇಳಿಕೆ ಕಂಡಿವೆ.

ಮುಂಬೈನಲ್ಲಿ 10 ಗ್ರಾಂ ಚಿನ್ನದ ದರ ₹ ₹1,324ರಷ್ಟು ಕಡಿಮೆಯಾಗಿ ₹ 48,779ಕ್ಕೆ ತಲುಪಿದೆ. ದೆಹಲಿಯಲ್ಲಿ 10 ಗ್ರಾಂಗೆ ₹ 1,049ರಷ್ಟು ಇಳಿಕೆಯಾಗಿದ್ದು ₹ 48,569ರಂತೆ ಮಾರಾಟವಾಗಿದೆ.

ಮುಂಬೈನಲ್ಲಿ ಕೆ.ಜಿ ಬೆಳ್ಳಿ ಧಾರಣೆ ₹ 1,782ರಷ್ಟು ಇಳಿಕೆ ಕಂಡು ₹ 59,704ರಂತೆ ಮಾರಾಟವಾಗಿದೆ. ದೆಹಲಿಯಲ್ಲಿ ಕೆ.ಜಿಗೆ ₹ 1,588ರಷ್ಟು ಇಳಿಕೆಯಾಗಿ ₹ 59,301ರಂತೆ ಮಾರಾಟವಾಗಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದ್ದು ಇದರ ಜತೆಗೆ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು  ರೂಪಾಯಿ ಮೌಲ್ಯ ಏರಿಕೆಯ ಕಾರಣದಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

‘ಅಮೆರಿಕದ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಯು ನಿರೀಕ್ಷೆಗಿಂತಲೂ ಉತ್ತಮವಾಗಿರುವುದು, ಕೋವಿಡ್‌–19ಕ್ಕೆ ಲಸಿಕೆ ಸಿಗುವ ಭರವಸೆ ಹಾಗೂ ಹೂಡಿಕೆ ಹೆಚ್ಚಾಗುತ್ತಿರುವುದರಿಂದಾಗಿ ಚಿನ್ನದ ಬೆಲೆ ಇಳಿಕೆ ಆಗಿದೆ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಉಪಾಧ್ಯಕ್ಷ ನವ್‌ನೀತ್ ದಮನಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು