ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಬುಧವಾರವೂ ಏರಿಕೆಯಾಗಿದೆ.

ದೆಹಲಿ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ ದರ ಪ್ರತಿ ಗ್ರಾಂ ₹1,650 ಏರಿಕೆಯಾಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ ₹98,100ಕ್ಕೆ ತಲುಪಿದೆ. ಆಭರಣ ಚಿನ್ನದ ಬೆಲೆಯೂ ಇಷ್ಟೇ ಹೆಚ್ಚಳವಾಗಿ ₹97,650ಕ್ಕೆ ತಲುಪಿದೆ.

ಬೆಳ್ಳಿ ದರ ₹1,900 ಹೆಚ್ಚಳವಾಗಿ ಕೆ.ಜಿಗೆ ₹99.400ಗೆ ತಲುಪಿದೆ.

ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ಸುಂಕ ಸಮರದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲೂ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳವಾಗಿದೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಮಂಗಳವಾರ ಶುದ್ಧ ಚಿನ್ನದ ದರ 10 ಗ್ರಾಂ ಗೆ ₹96,450ನಷ್ಟಿತ್ತು, ಆಭರಣ ಚಿನ್ನದ ಬೆಲೆ ₹96,000 ಇತ್ತು. ಬೆಳ್ಳಿ ದರ ₹97,500 ಇತ್ತು.

‘ಚೀನಾ ಮೇಲೆ ಅಮೆರಿಕದ ಟ್ರಂಪ್ ಆಡಳಿತವು ರಫ್ತು ನೀತಿಗಳನ್ನು ಬಿಗಿಗೊಳಿಸಿದೆ. ಇದರಿಂದ ವ್ಯಾಪಾರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಹಳದಿ ಲೋಹದ ಬೆಲೆ ಏರಿಕೆಯ ಹಾದಿ ಹಿಡಿದಿದೆ’ ಎಂದು ಕೋಟಕ್ ಸೆಕ್ಯುರಿಟೀಸ್ನ ವಿಶ್ಲೇಷಕ ಕಯ್ನಾತ್ ಚೈನ್ವಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.